ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'15 ಲಕ್ಷ ರೂ. ಎಲ್ಲರ ಖಾತೆಗೂ ಬರುತ್ತದೆ, ಆದರೆ ಸ್ವಲ್ಪ ತಡವಾಗಿ!'

|
Google Oneindia Kannada News

Recommended Video

15 ಲಕ್ಷ ರೂ. ಎಲ್ಲರ ಖಾತೆಗೂ ಬರುತ್ತದೆ, ಆದರೆ ಸ್ವಲ್ಪ ತಡವಾಗಿ! | Oneindia Kannada

ಮುಂಬೈ, ಡಿಸೆಂಬರ್ 19: "ವಿದೇಶದಲ್ಲಿರುವ ಕಪ್ಪು ಹಣವನ್ನೆಲ್ಲ ದೇಶಕ್ಕೆ ತಂದು, ಈ ದೇಶದ ಪ್ರತಿಯೊಬ್ಬರ ಖಾತೆಗೂ ತಲಾ 15 ಲಕ್ಷ ರೂ.ಗಳನ್ನು ಜಮಾ ಮಾಡುತ್ತೇವೆ..." ಇದು 2014 ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೊದಿಯವರ ಬಾಯಲ್ಲಿ ಸದಾ ಉಚ್ಚಾರವಾಗುತ್ತಿದ್ದ ವಾಕ್ಯ.

ಈಗ ಮತ್ತೆ ಲೋಕಸಭಾ ಚುನಾವಣೆಯ ದಿನ ಸನ್ನಿಹಿತವಾಗುತ್ತಿರುವ ಹೊತ್ತಲ್ಲಿ ಮತ್ತೊಮ್ಮೆ ಇದೇ 'ಡೈಲಾಗ್' ಮುನ್ನೆಲೆಗೆ ಬಂದಿದೆ!

ಲೋಕಸಭೆ ಚುನಾವಣೆಗೂ ಮುನ್ನ ಎನ್ ಡಿಎ ವಿರುದ್ಧ 'ಮಾಜಿ'ಗಳ ಯುದ್ಧ!ಲೋಕಸಭೆ ಚುನಾವಣೆಗೂ ಮುನ್ನ ಎನ್ ಡಿಎ ವಿರುದ್ಧ 'ಮಾಜಿ'ಗಳ ಯುದ್ಧ!

ಈ ಬಾರಿ ಈ ಸಾಲನ್ನು ಉಚ್ಚರಿಸಿದ್ದು ಪ್ರಧಾನಿ ಮೋದಿಯವರಲ್ಲ. ಕೇಂದ್ರ ಸಚಿವ ರಾಮದಾಸ್ ಅಠಾವಳೆ! 'ಪ್ರತಿಯೊಬ್ಬ ಭಾರತೀಯರ ಖಾತೆಗೂ 15 ಲಕ್ಷ ರೂ.ಜಮೆಯಾಗುತ್ತದೆ. ಆದರೆ ಒಂದೇ ಬಾರಿ ಆಗೋಲ್ಲ. ಹಂತ ಹಂತವಾಗಿ, ನಿಧಾನವಾಗಿ ಜಮೆಯಾಗುತ್ತದೆ' ಎಂದು ಅಠಾವಳೆ ಹೇಳಿದ್ದಾರೆ.

ಸರ್ಕಾರದ ಬಳಿ ಅಷ್ಟೊಂದು ಹಣವಿಲ್ಲ, ಆರ್ ಬಿಐ ಬಳಿ ಕೇಳಿದ್ದೇವೆ. ಕೆಲವು ತಾಂತ್ರಿಕ ದೋಷದ ಕಾರಣ ಹಣ ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಹಣವು ಖಾತೆಗೆ ಜಮೆಯಾಗುವುದಂತೂ ಸತ್ಯ ಎಂದು ಅಠಾವಳೆ ಭರವಸೆ ನೀಡಿದ್ದಾರೆ.

15 ಲಕ್ಷ, ರಾಹುಲ್ ಗಾಂಧಿಗೆ ಪ್ರಚಾರದ ಅಸ್ತ್ರ!

15 ಲಕ್ಷ, ರಾಹುಲ್ ಗಾಂಧಿಗೆ ಪ್ರಚಾರದ ಅಸ್ತ್ರ!

15 ಲಕ್ಷ ರೂ.ಗಳನ್ನು ಪ್ರತಿಯೊಬ್ಬ ಭಾರತೀಯನ ಖಾತೆಗೂ ಜಮಾ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ಯಾರದ್ದಾದರೂ ಖಾತೆಗೆ ಮೋದಿ ಒಂದು ಲಕ್ಷ ಹೋಗಲಿ, ಒಂದು ರೂಪಾಯಿಯನ್ನಾದರೂ ಜಮಾ ಮಾಡಿದ್ದಾರಾ? ಎಂದು ಮೇ ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರತಿ ಪ್ರಚಾರದಲ್ಲೂ ರಾಹುಲ್ ಗಾಮಧಿ ಕೇಳಿದ್ದರು. ಮೋದಿಯವರ 15 ಲಕ್ಷದ ಹೇಳಿಕೆ ರಾಹುಲ್ ಗಾಂಧಿ ಅವರ ಪ್ರಚಾರದ ಅಸ್ತ್ರವಾಗಿತ್ತು.

ಮತ್ತೆ ನೆನಪಾದ 15 ಲಕ್ಷ ರೂ.

ಮತ್ತೆ ನೆನಪಾದ 15 ಲಕ್ಷ ರೂ.

ಲೋಕಸಭಾ ಚುನಾವಣೆ 2019 ರ ಮೇ ತಿಂಗಳಿನಲ್ಲಿ ನಡೆಯಲಿದ್ದು, ಅದಕ್ಕಾಗಿ ಬೇಕೆಂದೇ ಬಿಜೆಪಿ ಮತ್ತು ಮೈತ್ರಿಕೂಟ 15 ಲಕ್ಷ ರೂ. ಗಳ ಬಗ್ಗೆ ಮತ್ತೆ ಮಾತನಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ. ರಾಮಜನ್ಮಭೂಮಿ ವಿಷಯವನ್ನೂ ಚುನಾವಣೆಯ ಹೊತ್ತಲ್ಲಿ ಮತ್ತೆ ನೆನಪಿಸುತ್ತಿರುವ ಬಿಜೆಪಿ 15 ಲಕ್ಷ ರೂಪಾಯಿಯನ್ನೂ ಮತ್ತೆ ತನ್ನ ಪ್ರಚಾರದ ವಿಷಯವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ವಿಪಕ್ಷಗಳು ದೂರಿವೆ.

ಸಮೀಕ್ಷೆ: ಎನ್ಡಿಎಗೆ ಬಹುಮತ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಸಮೀಕ್ಷೆ: ಎನ್ಡಿಎಗೆ ಬಹುಮತ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ

ಆರ್ ಬಿಐ ಮೇಲೆ ಗೂಬೆ?

ಆರ್ ಬಿಐ ಮೇಲೆ ಗೂಬೆ?

15 ಲಕ್ಷ ರೂ.ಗಳನ್ನು ಬಡವರ ಖಾತೆಗೆ ಜಮೆ ಮಾಡಲು ಸರ್ಕಾರ ಸಿದ್ಧವಿದೆ. ಆದರೆ ಸರ್ಕಾರದ ಬಳಿ ಹಣವಿಲ್ಲ. ಆರ್ ಬಿಐ ಬಳಿ ಹಣ ಕೇಳಿದ್ದೇವೆ. ಅದು ಹಣ ನೀಡಲು ಒಪ್ಪುತ್ತಿಲ್ಲ. ತನ್ನಲ್ಲಿ ಕೆಲವು ತಾಂತ್ರಿಕ ದೋಷಗಳಿವೆ ಎಂದು ಅದು ಹೇಳಿದೆ ಎಂದು ಅಠಾವಳೆ ಹೇಳಿದ್ದಾರೆ. ರಾಮದಾಸ್ ಅವರ ಈ ಹೇಳಿಕೆ ವಿವಾದ ಸೃಷ್ಟಿಸಸುವ ಸಾಧ್ಯತೆ ಇದೆ.

ಮೋದಿ ನೀಡಿದ್ದ ಆಶ್ವಾಸನೆ ಏನು?

ಮೋದಿ ನೀಡಿದ್ದ ಆಶ್ವಾಸನೆ ಏನು?

ಸ್ವಿಸ್ ಬ್ಯಾಂಕಿನಲ್ಲಿದ್ದ ಭಾರತೀಯರ ಕಪ್ಪು ಹಣವನ್ನು ವಾಪಸ್ ದೇಶಕ್ಕೆ ತಂದು, ಆ ಹಣವನ್ನು ದೇಶದ ಪ್ರತಿ ಬಡ ಭಾರತೀಯ ಖಾತೆಗೂ ತಲಾ 15 ಲಕ್ಷ ರೂ.ನಂತೆ ಜಮಾ ಮಾಡುವುದಾಗಿ ಪ್ರಧಾನಿ ಮೋದಿ 2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಹೇಳಿದ್ದರು.

English summary
Union Minister Ramdas Athawale said Rs 15 lakh in every account" will reach people slowly, and not in one go.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X