ಆರ್ ಬಿಐ ಗವರ್ನರ್ ರಾಜನ್ ಗೆ ಉಗ್ರರ ಬೆದರಿಕೆ
ಮುಂಬೈ, ಏ.16: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರಿಗೆ ಉಗ್ರರಿಂದ ಬೆದರಿಕೆ ಇಮೇಲ್ ಬಂದಿದೆ. ಈ ಬಗ್ಗೆ ಮುಂಬೈನ ಸೈಬರ್ ಕ್ರೈಂ ವಿಭಾಗ ಹೆಚ್ಚಿನ ತನಿಖೆ ಕೈಗೊಂಡಿದೆ.
ರಘುರಾಮ್ ರಾಜನ್ ಅವರ ಅಧಿಕೃತ ಇ-ಮೇಲ್ ಐಡಿಗೆ ಕೊಲೆ ಬೆದರಿಕೆಯ ಸಂದೇಶ ಬಂದಿದೆ. ನಿಮ್ಮನ್ನು ಕೊಲ್ಲಲು ನಮಗೆ ಸುಪಾರಿ ನೀಡಲಾಗಿದೆ. ನಮಗೆ ಹೆಚ್ಚು ಹಣ ಸಿಕ್ಕರೆ ನಿಮ್ಮನ್ನು ಉಳಿಸುತ್ತೇವೆ ಎಂದು ಸಂದೇಶ ಕಳಿಸಲಾಗಿದೆ.

ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ಈ ರೀತಿ ಇಮೇಲ್ ಬಂದಿದ್ದರಿಂದ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. [email protected] ಇಮೇಲ್ ಐಡಿಯಿಂದ ರಾಜನ್ ಅವರಿಗೆ ಬೆದರಿಕೆ ಇಮೇಲ್ ಬಂದಿದೆ. ಇದು ಇರಾಕಿ ಉಗ್ರರ ಕೃತ್ಯ ಇರಬಹುದು. ಅಥವಾ ಸ್ಥಳೀಯ ಗುಂಪೊಂದು ಈ ರೀತಿ ಇಮೇಲ್ ಐಡಿ ಮಾಡಿಕೊಂಡು ಬೆದರಿಕೆ ಒಡ್ಡಿರಬಹುದು. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಇರಾಕ್ನ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ(ಐಸಿಸ್) ನಿಂದ ಭಾರತದ ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಕರೆ, ಇಮೇಲ್ ಬರುವ ಸೂಚನೆ ಈ ಮುಂಚೆಯೇ ಸಿಕ್ಕಿತ್ತು. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.












Click it and Unblock the Notifications