ರಾಮಾಯಣದ 'ವಿಭೀಷಣ' ಮುಖೇಶ್ ಅಪಘಾತದಲ್ಲಿ ದುರ್ಮರಣ

Posted By:
Subscribe to Oneindia Kannada

ಮುಂಬೈ, ನವೆಂಬರ್ 17: ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಮಾನಂದ ಸಾಗರ್ ಅವರ ಜನಪ್ರಿಯ ಧಾರಾವಾಹಿ ರಾಮಾಯಣದಲ್ಲಿ ವಿಭೀಷಣ ಪಾತ್ರ ನಿರ್ವಹಿಸಿದ್ದ ನಟ ಮುಖೇಶ್ ರಾವಲ್ ಅವರ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಕಿರುತೆರೆ,
ಗುಜರಾತಿ ರಂಗಕರ್ಮಿಯಾಗಿ ಮುಖೇಶ್ ಹೆಸರು ಗಳಿಸಿದ್ದರು.

ಖಾಂಡಿವಿಲಿ ಪಶ್ಚಿಮ ಪ್ರದೇಶದಲ್ಲಿ ವಾಸವಾಗಿದ್ದ ರಾವಲ್, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರಾಮಾಯಣ ಹೊರತಾಗಿ ಇವರು, ಗುಜರಾತಿ ಧಾರಾವಾಹಿ ಹಾಗೂ ಚಿತ್ರಗಳಲ್ಲಿ ನಟಿಸಿದ್ದರು. ಪ್ರಸ್ತುತ ಗುಜರಾತಿ ಟಿವಿ ಧಾರಾವಾಹಿ "ನಸ್ ನಸ್ ಮೈ ಖುನ್ನಾಸ್"ನಲ್ಲಿ ನಟಿಸುತ್ತಿದ್ದರು.

Ramayan's Vibhishan, Mukesh Rawal found dead on railway tracks

ಖಾಂಡಿವಿಲಿ ರೈಲು ನಿಲ್ದಾಣದ ಬಳಿ ಮಂಗಳವಾರ ಬೆಳಿಗ್ಗೆ ರಾವಲ್ ಶವ ಪತ್ತೆಯಾಗಿದೆ. ಆದರೆ, ಶವದ ಗುರುತು ಪತ್ತೆ ತಡವಾಗಿದೆ. ಶವ ಬಳಿ ಗುರುತು ಪತ್ತೆ ಹಚ್ಚಲು ಮೊಬೈಲ್ ಫೋನ್, ಪರ್ಸ್ ಯಾವುದು ಇರಲಿಲ್ಲ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ. ರಾವತ್ (66) ರೈಲು ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಮೃತಪಟ್ಟಿರಬೇಕು ಎಂದು ಶಂಕೆ ವ್ಯಕ್ತವಾಗಿದೆ.

ಖಾಂಡಿವಿಲಿ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಅವರಿಗೆ ವಿಷಯ ತಿಳಿದು ತಕ್ಷಣವೇ ಹಳಿ ಮೇಲೆ ಬಿದ್ದಿದ್ದ ಮುಖೇಶ್ ಅವರನ್ನುಆಸ್ಪತ್ರೆಗೆ ಸಾಗಿಸಿದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದರು.

ಬುಧವಾರ ಅವರ ಕುಟುಂಬದವರು ವಿವಿಧ ಆಸ್ಪತ್ರೆಗಳಲ್ಲಿ ಅವರ ಬಗ್ಗೆ ವಿಚಾರಣೆ ನಡೆಸಿತು. ಬಳಿಕ ಭಾವಚಿತ್ರದೊಂದಿಗೆ ಪೊಲೀಸ್ ಠಾಣೆಗಳಿಗೆ ತೆರಳಿದಾಗ, ರೈಲ್ವೆ ಪೊಲೀಸರ ಬಳಿ ವಿಚಾರಿಸುವಂತೆ ಪೊಲೀಸರು ಸೂಚಿಸಿದರು. ಬಳಿಕ ಅವರ ಮೃತದೇಹವನ್ನು ಅವರು ಧರಿಸಿದ್ದ ಬಟ್ಟೆಯ ಆಧಾರದಲ್ಲಿ ಪತ್ತೆ ಮಾಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ramayan's Vibhshan, Mukesh Rawal was found dead on railway tracks near Kandivali station on Tuesday morning. GRP officials said it was an accident and Rawal may have been crossing the tracks.
Please Wait while comments are loading...