ರಾಖಿ ವಿಡಿಯೋ: ಓ ದೇವರೇ ಚೀನಾದ ಪಾಪಿ ಜನರನ್ನು ಕ್ಷಮಿಸಿಬಿಡಿ
ಮುಂಬೈ, ಫೆಬ್ರವರಿ 10: ಚೀನಾದಲ್ಲಿ ಕೊರೊನಾ ವೈರಸ್ ಬಂದಿದ್ಹೇಗೆ ಎನ್ನುವುದಕ್ಕೆ ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ಉತ್ತರ ಕೊಟ್ಟಿದ್ದಾರೆ.
ಚೀನಾದ ಜನರು ಪ್ರಾಣಿಗಳನ್ನು ತಿಂದು ಕೊರೊನಾ ವೈರಸ್ ಹರಡಿಸಿದ್ದಾರೆ ಎಂದು ವಿಡಿಯೋ ಒಂದನ್ನು ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಡೀ ದೇಶದಲ್ಲಿ ಈ ವೈರಸ್ ಹರಡುತ್ತಿದೆ. ಚೀನಾದ ಜನರು ಇಷ್ಟು ದಿನ ಪ್ರಾಣಿಗಳನ್ನು ತಿಂದಿದ್ದಕ್ಕೆ ಈಗ ಬುದ್ಧಿ ಕಲಿಯುತ್ತಿದ್ದಾರೆ.

ದೇವರೇ, ವೈರಸ್‌ನಿಂದ ಬಳಲುತ್ತಿರುವ ಜನರಿಗಾಗಿ ನಾನು ಪ್ರಾರ್ಥನೆ ಮಾಡುತ್ತಿದ್ದೇನೆ. ಅವರು ಇದೆಲ್ಲಾ ತಿನ್ನಬಾರದಿತ್ತು. ದೇವರೇ ದಯವಿಟ್ಟು ಚೀನಾದ ಪಾಪಿ ಜನರನ್ನು ಕ್ಷಮಿಸಿಬಿಡಿಎಂದು ಹೇಳಿದ್ದಾರೆ.
View this post on Instagram#jesus #jesuschrist #jesuslovesyou #jesussaves #jesusislord
A post shared by Rakhi Sawant (@rakhisawant2511) on
ಈ ಹಿಂದೆ ರಾಖಿ ತಮ್ಮ ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅದಕ್ಕೆ, ಮೋದಿಜಿ ನಾನು ಚೀನಾಗೆ ಹೋಗುತ್ತಿದ್ದೇನೆ. ಕೊರೊನಾ ವೈರಸ್ ಅನ್ನು ನಾಶ ಮಾಡುತ್ತೇನೆ. ನಾನು ಕ್ಷೇಮವಾಗಿ ವಾಪಸ್ ಬರಲಿ ಅಂತ ಎಲ್ಲರೂ ಪ್ರಾರ್ಥಿಸಿ. ನಾನು ನಾಸಾದಿಂದ ಕೊರೊನಾ ವೈರಸ್ ಅನ್ನು ನಾಶ ಮಾಡಲು ಸ್ಪೆಷಲ್ ಔಷಧಿ ತಂದಿದ್ದೇನೆ.
ಚೀನಾದಲ್ಲಿ ಜನರು ಉಸಿರಾಡಲು ಕೂಡ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದ್ದಳು. ದೇವರು ನಮಗೆ ಏನ್ನನ್ನು ತಿನ್ನಲು ನೀಡಿದ್ದಾರೋ ಅದನ್ನು ತಿನ್ನಿ. ನಾನು ಇಡೀ ಚೀನಾ ದೇಶದ ಕಡೆಯಿಂದ ಕ್ಷಮೆ ಕೇಳುತ್ತೇನೆ. ಕೊರೊನಾ ವೈರಸ್ ಈಗ ತುಂಬಾ ಹರಡಿದ್ದು, ಇವರನ್ನು ಕ್ಷಮಿಸಿ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ರಾಖಿ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಆಕೆಯನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಕೆಲವರು ವಿಡಿಯೋ ಮಾಡಿ ಯಾರು ಪ್ರಾರ್ಥನೆ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ದೇವರು ನಿಮ್ಮ ಫೋನಿನಲ್ಲಿ ಇದ್ದಾರಾ ಎಂದು ಕಮೆಂಟ್ ಮಾಡಿದ್ದಾರೆ.












Click it and Unblock the Notifications