ಪತ್ನಿ ಪೀಡನೆ, ಜನಪ್ರಿಯ ನಟ ಬಂಧನ, ಬಿಡುಗಡೆ

ಮುಂಬೈ, ಅ.05: ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯ ಜನಪ್ರಿಯ ನಟ ಖಾಲಿದ್ ಸಿದ್ದಿಕಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಮೇಲೆ ಹಲ್ಲೆ, ಲೈಂಗಿಕ ಕಿರುಕುಳ ಮಾಡಿದ ಆರೋಪವನ್ನು ಖಾಲಿದ್ ಮೇಲೆ ಹೊರೆಸಲಾಗಿದೆ.

ಹಿಂದಿ ಚಿತ್ರ 'ಘಜಿನಿ'ಯಲ್ಲಿ ಏರ್ ವಾಯ್ಸ್ ಮ್ಯಾನೇಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿದ್ದಿಕಿ ಅವರು ಹೆಚ್ಚಾಗಿ ಕಿರುತೆರೆ ಮೂಲಕವೇ ಚಿರಪರಿ‌ಚಿತ. ಮಹಾರಕ್ಷಕ್, ಡ್ರೀಮ್ ಗರ್ಲ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಿಕಿ ವಿರುದ್ಧ ಆತನ ಪತ್ನಿ ರಾಹತ್ ದೂರು ನೀಡಲು ಕಾರಣವಿದೆ.

ಪತಿ ಹಾಗೂ ಪತ್ನಿ ಸದ್ಯಕ್ಕೆ ಎರಡು ವರ್ಷಗಳಿಂದ ದೂರವಿದ್ದಾರೆ. ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ, ತಾಂತ್ರಿಕವಾಗಿ ಇಬ್ಬರು ಇಂದಿಗೂ ಸತಿ ಪತಿಗಳಾಗಿದ್ದಾರೆ. ಇಬ್ಬರಿಗೂ ಮಗ ಹಾಗೂ ಮಗಳಿದ್ದಾರೆ. ಮಕ್ಕಳಿಬ್ಬರು ಸಿದ್ದಿಕಿ ಜೊತೆಯಲ್ಲೇ ಇದ್ದು, ವಾರಾಂತ್ಯದಲ್ಲಿ ಮಾತ್ರ ತಮ್ಮ ತಾಯಿಯನ್ನು ನೋಡುತ್ತಾರೆ.

Mumbai: Popular actor molests wife, arrested

ನನ್ನ ಮಕ್ಕಳನ್ನು ನನ್ನ ಪತಿ ಸಿದ್ದಿಕಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಮಕ್ಕಳಿಗೆ ಜ್ವರ ಬಂದರೂ ಚಿಕಿತ್ಸೆ ಕೊಡಿಸಿಲ್ಲ. ತಂದೆಯಾಗಿ ತನ್ನ ಕಾರ್ಯ ನಿರ್ವಹಿಸದೆ ಹೊಸ ಗರ್ಲ್ ಫ್ರೆಂಡ್ ಜೊತೆ ಸುತ್ತಾಡುತ್ತಿದ್ದಾನೆ. ಮಧ್ಯರಾತ್ರಿ ನನ್ನ ಕೈಗೆ ಸಿಕ್ಕಿಬಿದ್ದ. ನಾನು ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಕಿರುಕುಳ ನೀಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮೊದಲಿಗೆ ದೂರು ಸ್ವೀಕರಿಸಲು ಹಿಂದೇಟು ಹಾಕಿದ ಪೊಲೀಸರು ಇಬ್ಬರನ್ನು ಕರೆಸಿ ಮಾತನಾಡಿಸಿ ಮನೆಗೆ ಕಳಿಸಲು ಯತ್ನಿಸಿದರು. ಆದರೆ, ರಾಹತ್ ಆರ್ಭಟ ಹೆಚ್ಚಾದಂತೆ ದೂರು ಸ್ವೀಕರಿಸಿ ಸಿದ್ದಿಕಿಯನ್ನು ಭಾನುವಾರ ರಾತ್ರಿ ಬಂಧಿಸಿ ಕರೆದೊಯ್ದಿದ್ದಾರೆ. ನಂತರ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಪತಿ- ಪತ್ನಿ ಜಗಳ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದೆ. ವಿವಾಹ ವಿಚ್ಛೇದನ ಪಡೆಯುವುದಕ್ಕೂ ಮುನ್ನ ಈ ರೀತಿ ಗಲಾಟೆ ನಡೆಯುತ್ತಿದೆ. ಯಾವುದೇ ಕಾರಣವಿಲ್ಲದೆ ನನ್ನ ಕಕ್ಷಿದಾರರ ವಿರುದ್ಧ ದೂರು ನೀಡಲಾಗಿದೆ ಎಂದು ಸಿದ್ದಿಕಿ ಪರ ವಕೀಲರು ದೂರಿದ್ದಾರೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+