ರೂಪದರ್ಶಿಗೆ ಅಶ್ಲೀಲ ಸಂದೇಶ ರವಾನೆ ಬಿಗ್ ಬಾಸ್ ಖ್ಯಾತಿ ನಟ ಬಂಧನ

Posted By:
Subscribe to Oneindia Kannada

ಮುಂಬೈ, ನವೆಂಬರ್ 20: ರೂಪದರ್ಶಿಯೊಬ್ಬರಿಗೆ ಅಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ವಾಟ್ಸಾಪ್ ಮೂಲಕ ಕಳಿಸಿದ ಆರೋಪದ ಮೇಲೆ ಬಿಗ್ ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಕಮ್ ನಟ ಏಜಾಜ್ ಖಾನ್ ರನ್ನು ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ.

25 ವರ್ಷ ವಯಸ್ಸಿನ ರೂಪದರ್ಶಿಯೊಬ್ಬರು ಕಳೆದ ಜೂನ್ ತಿಂಗಳಿನಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ. ಮಾಡೆಲ್ ಐಶ್ವರ್ಯಾ ಚೌಬೆ ಎಂಬುವವರಿಗೆ ಏಜಾಜ್ ಖಾನ್ ಅಶ್ಲೀಲ ಚಿತ್ರಗಳು ಹಾಗೂ ಸಂದೇಶಗಳನ್ನು ಕಳಿಸಿ ಕಾಟ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

Mumbai Police arrest Actor Ajaz Khan Model Aishwarya Choubey Complaint

ಕಾಮತ್ಕೋರ್ಷ ಚಾಟಿಂಗ್ ಗೆ ತೊಡಗುತ್ತಿದ್ದ ಏಜಾಜ್ ಖಾನ್ ಅವರು ಜುಹುವಿನ ಹೊಟೆಲ್ ವೊಂದಕ್ಕೆ ಬರುವಂತೆ ರೂಪದರ್ಶಿಗೆ ಆಹ್ವಾನ ಕೂಡಾ ನೀಡಿದ್ದರು. ಆತ ಕಳಿಸಿದ್ದ ಚಿತ್ರಗಳನ್ನು ಡಿಲೀಟ್ ಮಾಡಿ, ಖಾತೆ ಬ್ಲಾಕ್ ಮಾಡಿದರೂ ಮತ್ತೆ ಮತ್ತೆ ಬೇರೆ ಬೇರೆ ನಂಬರ್ ನಿಂದ ಕಾಟ ಕೊಡಲಾರಂಭಿಸಿದ್ದ ಎಂದು ತಿಳಿದು ಬಂದಿದೆ.


ಐಪಿಸಿ ಸೆಕ್ಷನ್ 509. 504 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ. ಆರೋಪಿ ಏಜಾಜ್ ಖಾನ್ ರನ್ನು ಬೊರಿವಲಿ ಕೋರ್ಟಿಗೆ ಹಾಜರು ಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಮಲ್ವಾನಿ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Mumbai police on wee hours of Sunday(November 20) arrested former Bigg Boss contestant cum Actor Ajaz Khan for allegedly sending lewd messages and explicit pictures to a 25-year-old model Aishwarya on Whatsapp.
Please Wait while comments are loading...