ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಇ.ಡಿ ಹೊಸ ಪ್ಲ್ಯಾನ್

|
Google Oneindia Kannada News

ಮುಂಬೈ, ಜೂನ್ 22: ಅನಾರೋಗ್ಯದಿಂದ ಬಳಲುತ್ತಿರುವ ಕಾರಣ 41 ಗಂಟೆ ಪ್ರಯಾಣ ಮಾಡಿ ಭಾರತಕ್ಕೆ ಬರಲು ಸಾಧ್ಯವಿಲ್ಲ ಎಂಬ ನೆಪ ಹೇಳಿದ್ದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯ ಹೊಸ ಯೋಜನೆ ರೂಪಿಸಿದೆ.

ಆಂಟಿಗುವಾದಲ್ಲಿರುವ ದೇಶಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರನ್ನು ಕರೆತರಲು ಏರ್ ಆಂಬುಲೆನ್ಸ್ ಹಾಗೂ ವೈದ್ಯಕೀಯ ತಜ್ಞರ ತಂಡವನ್ನು ಕಳುಹಿಸುವುದಾಗಿ ಇ.ಡಿ. ಹೇಳಿದೆ. ಅಲ್ಲದೆ, ಭಾರತದಲ್ಲಿ ಎಲ್ಲ ಅಗತ್ಯ ವೈದ್ಯಕಿಯ ಚಿಕಿತ್ಸೆಗಳನ್ನು ಒದಗಿಸುವುದಾಗಿ ತಿಳಿಸಿದೆ.

41 ಗಂಟೆ ಪ್ರಯಾಣ ಮಾಡಿ ಭಾರತಕ್ಕೆ ಬರಲು ಸಾಧ್ಯವಿಲ್ಲ: ಮೆಹುಲ್ ಚೋಕ್ಸಿ 41 ಗಂಟೆ ಪ್ರಯಾಣ ಮಾಡಿ ಭಾರತಕ್ಕೆ ಬರಲು ಸಾಧ್ಯವಿಲ್ಲ: ಮೆಹುಲ್ ಚೋಕ್ಸಿ

ಸಾವಿರಾರು ಕೋಟಿ ಸಾಲದ ಹಣ ವಂಚಿಸಿರುವ ಆರೋಪ ಎದುರಿಸುತ್ತಿರುವ ಚೋಕ್ಸಿ, ಭಾರತಕ್ಕೆ ವಿಚಾರಣೆಗಾಗಿ ಬರಲು 41 ಗಂಟೆ ಪ್ರಯಾಣ ಬೆಳೆಸಬೇಕಿದೆ. ಅನಾರೋಗ್ಯದ ಕಾರಣ ಅಷ್ಟು ದೂರ ತೆರಳಲು ಸಾಧ್ಯವಿಲ್ಲ ಎಂದು ಮುಂಬೈ ಹೈಕೋರ್ಟ್‌ಗೆ 34 ಪುಟಗಳ ಸುದೀರ್ಘ ಪ್ರತಿಕ್ರಿಯೆ ನೀಡಿದ್ದರು.

pnb scam air ambulance medical experts mehul choksi antigua ED

ಇದಕ್ಕೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿರುವ ಇ.ಡಿ, ಆರೋಗ್ಯದ ಕಾರಣದಿಂದ ಭಾರತಕ್ಕೆ ಮರಳಲು ಸಾಧ್ಯವಿಲ್ಲ ಎಂದು ಚೋಕ್ಸಿ ಸಲ್ಲಿಸಿರುವ ಅಫಿಡವಿಟ್ ಸುಳ್ಳಿನಿಂದ ಕೂಡಿದೆ ಎಂದು ಆರೋಪಿಸಿದೆ.

ಪ್ರಧಾನಿ ಮೋದಿ ಬಗ್ಗೆ ಪಿಎಚ್ ಡಿ ಪ್ರಬಂಧ ಮಂಡಿಸಿದ 'ಮೆಹುಲ್ ಚೋಕ್ಸಿ!'ಪ್ರಧಾನಿ ಮೋದಿ ಬಗ್ಗೆ ಪಿಎಚ್ ಡಿ ಪ್ರಬಂಧ ಮಂಡಿಸಿದ 'ಮೆಹುಲ್ ಚೋಕ್ಸಿ!'

ವೈದ್ಯಕೀಯ ಕಾರಣ ಮತ್ತು ಪರಿಸ್ಥಿತಿಯ ಸುಳ್ಳು ದಾಖಲೆಗಳನ್ನು ಸಲ್ಲಿಸುವುದು ಕೇವಲ ಕಾನೂನು ಪ್ರಕ್ರಿಯೆಗಳನ್ನು ವಿಳಂಬಗೊಳಿಸಲು ನ್ಯಾಯಾಲಯವನ್ನು ತಪ್ಪು ದಾರಿಕೆ ಎಳೆಯುವ ಪ್ರಯತ್ನವಷ್ಟೇ. ಆಂಟಿಗುವಾದಲ್ಲಿರುವ ಅವರನ್ನು ವೈದ್ಯಕೀಯ ನಿಗಾದಲ್ಲಿ ಭಾರತಕ್ಕೆ ಕರೆತರಲು ಏರ್ ಆಂಬುಲೆನ್ಸ್‌ನೊಂದಿಗೆ ವೈದ್ಯಕೀಯ ಪರಿಣತರ ತಂಡವನ್ನು ಒದಗಿಸಲು ಸಿದ್ಧ ಎಂದು ಇ.ಡಿ ಕೋರ್ಟ್‌ಗೆ ತಿಳಿಸಿದೆ.

13 ಸಾವಿರ ಕೋಟಿ ರೂಪಾಯಿ ಪಿಎನ್‌ಬಿ ಹಗರಣದ ತನಿಖೆಗೆ ಚೋಕ್ಸಿ ಎಂದಿಗೂ ಸಹಕಾರ ನೀಡಿಲ್ಲ ಎಂದೂ ಅದು ಆರೋಪಿಸಿದೆ.

English summary
PNB scam: ED said to Mumbai High court, it is ready to provide Air Ambulance service along with a tema of medical experts to bring fugitive diamantaire Mehul Chiksi from Antigua.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X