"ಸೀಟ್ ಪ್ಲೀಸ್".. ಎಂದಿದ್ದಕ್ಕೆ ಚಲಿಸುವ ರೈಲಿನಲ್ಲೇ ಬರ್ಬರ ಕೊಲೆ!

ಮುಂಬೈ, ಫೆಬ್ರವರಿ.14: ರೈಲಿನಲ್ಲಿ ಸೀಟ್ ಕೇಳಿದ್ದಕ್ಕಾಗಿ 26 ವರ್ಷದ ವ್ಯಕ್ತಿಯನ್ನೇ ಹೊಡೆದು ಕೊಂದಿರುವ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಮುಂಬೈ-ಲಾತೂರು-ಬೀದ್ ಎಕ್ಸ್ ಪ್ರೆಸ್ ರೈಲಿನ ಜನರಲ್ ಬೋಗಿಯಲ್ಲಿ ಜನಸಂದಣಿ ಹೆಚ್ಚಾಗಿತ್ತು.

ಜನಸಂದಣಿ ಮಧ್ಯೆ ಕುಳಿತುಕೊಳ್ಳುವುದಕ್ಕೆ ಸ್ವಲ್ಪ ಸೀಟ್ ಬಿಡಿ ಎಂದು ಕೇಳಿದ್ದಕ್ಕೆ ರೈಲಿನಲ್ಲೇ ಸಾಗರ್ ಜನಾರ್ಧನ್ ಮಾರ್ಕೆಂಡ್ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿದೆ. ಪುಣೆ ಮತ್ತು ದೌಡ್ ರೈಲ್ವೆ ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಇನ್ನು, ಘಟನೆಯಲ್ಲಿ 7 ಮಹಿಳೆಯರೂ ಸೇರಿದಂತೆ 13 ಮಂದಿಯಿದ್ದರು ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರ ಠಾಣೆಯ ಕಲ್ಯಾಣ್ ನಗರದ ನಿವಾಸಿಯಾಗಿದ್ದ ಸಾಗರ್ ಜನಾರ್ಧನ್ ಮಾರ್ಕೆಂಡ್, ಆಟೋಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಪತ್ನಿ ಜ್ಯೋತಿ ಸಂಬಂಧಿಕರ ಅಂತ್ಯಸಂಸ್ಕಾರಕ್ಕಾಗಿ ಪತ್ನಿ ಹಾಗೂ ಎರಡು ವರ್ಷದ ಮಗುವಿನ ಜೊತೆಗೆ ಸೋಲಾಪುರ ಜಿಲ್ಲೆ ಮಾಧಾ ತೆಹಸಿಲ್ ತೆರಳುತ್ತಿದ್ದರು.

Passenger Killed A Man For Ask Seat In Crowded Mumbai Train

ಪತ್ನಿಗೆ ಸೀಟ್ ಬಿಡುವಂತೆ ಕೇಳಿದ್ದ ಸಾಗರ್:

ಎರಡು ವರ್ಷದ ಪುಟ್ಟ ಮಗುವಿದ್ದು, ತಮ್ಮ ಪತ್ನಿಗೆ ಸ್ವಲ್ಪ ಸೀಟ್ ಬಿಟ್ಟು ಕೊಡುವಂತೆ ಸಾಗರ್ ಮಾರ್ಕೆಂಡ್ ಸಹ ಪ್ರಯಾಣಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ ವಿಚಾರಕ್ಕೆ ರೈಲಿನಲ್ಲೇ ಮಾತಿನ ಚಕಮಕಿ ನಡೆದಿದ್ದು, ಸಾಗರ್ ಮೇಲೆ 13 ಮಂದಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಘಟನೆ ನಡೆದಿದ್ದು, 12 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಹಿರಿಯ ಪೊಲೀಸ್ ಅಧಿಕಾರಿ ಸುರೇಶ್ ಸಿಂಗ್ ಗೌಡ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+