ಸೆನ್ಸಾರ್ ಬೋರ್ಡ್ ಅಧ್ಯಕ್ಷ ನಿಹಲಾನಿಗೆ ಕೊಕ್, ಪ್ರಸೂನ್ ಇನ್

Posted By:
Subscribe to Oneindia Kannada

ಮುಂಬೈ, ಆಗಸ್ಟ್ 11: ಕೇಂದ್ರ ಸೆನ್ಸಾರ್ ಮಂಡಳಿಯು ಸರಣಿ ವಿವಾದಗಳಲ್ಲಿ ಕಾಣಿಸಿಕೊಳ್ಳಲು ಕಾರಣರಾದ ಪಹ್ಲಜ್ ನಿಹಲಾನಿ ಅವರನ್ನು ಮಂಡಳಿ ಅಧ್ಯಕ್ಷ ಸ್ಥಾನದಿಂದ ಕಿತ್ತೊಗೆಯಲಾಗಿದೆ. ಅವರ ಸ್ಥಾನಕ್ಕೆ ಹೆಸರಾಂತ ಗೀತ ರಚನಕಾರ ಪ್ರಸೂನ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ.

ಸೆನ್ಸಾರ್ ಮಂಡಳಿ ಅಧ್ಯಕ್ಷ ನಿಹಲಾನಿಗೆ ಶೀಘ್ರವೇ ಕೊಕ್?

ನಿಹಲಾನಿ ಅವರು ಕೇಂದ್ರ ಸೆನ್ಸಾರ್ ಬೋರ್ಡ್ ಅನ್ನು ತಮ್ಮ ಸ್ವಂತ ಸಂಸ್ಥೆ ಎಂಬಂತೆ ನಡೆಸಿಕೊಳ್ಳುತ್ತಿದ್ದರು ಎಂಬುದು ಸಹೋದ್ಯೋಗಿಗಳ ಆರೋಪವಾಗಿತ್ತು. ನಿಹಲಾನಿ ಅವರು ಮನಸೋ ಇಚ್ಛೆ ದೃಶ್ಯಗಳನ್ನು ಕತ್ತರಿಸಲು ಹೇಳುತ್ತಿದ್ದರು. ನೈತಿಕ ಪೊಲೀಸ್ ಗಿರಿಯಂತೆ ನಡೆದುಕೊಳ್ಳುತ್ತಿದ್ದರು ಎಂದು ಚಿತ್ರ ನಿರ್ದೇಶಕರು, ನಿರ್ಮಾಪಕರ ಆಕ್ಷೇಪವಾಗಿತ್ತು.

Pahlaj Nihalani Sacked As Censor Board Chief

ಇತ್ತೀಚೆಗೆ ಮಧುರ್ ಭಂಡಾರ್ಕರ್ ನಿರ್ದೇಶನದ ಇಂದು ಸರ್ಕಾರ್ ಹಾಗೂ ಲಿಪ್ ಸ್ಟಿಕ್ ಅಂಡರ್ ಮೈ ಬುರ್ಕಾ ಸಿನಿಮಾಗಳ ಬಗ್ಗೆ ಸೆನ್ಸಾರ್ ಬೋರ್ಡ್ ಆಕ್ಷೇಪ ವ್ಯಕ್ತಪಡಿಸಿದ್ದು, ಚರ್ಚೆಗೆ ಕಾರಣವಾಗಿತ್ತು. ನಿರ್ದೇಶಕರಾದ ಅಲಂಕೃತಾ ಶ್ರೀವಾಸ್ತವ ಅವರು ಸೆನ್ಸಾರ್ ಆಕ್ಷೇಪಣೆ ವಿರುದ್ಧ ಮೇಲ್ಮನವಿ ಸಲ್ಲಿಸಿ, ಆ ನಂತರ ಸಿನಿಮಾ ಬಿಡುಗಡೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pahlaj Nihalani has been sacked as the censor board chief . His successor is famous lyricist Prasoon Joshi.
Please Wait while comments are loading...