ಕೋಟಿ ಗೆದ್ದ ಬಿಸಿಯೂಟ ತಯಾರಕಿ, ಚು.ಆಯೋಗದಿಂದ ಹೊಸ ಆಫರ್

ಮುಂಬೈ, ಅಕ್ಟೋಬರ್ 03: ಪ್ರತಿಭೆ, ಅದೃಷ್ಟ ಒಟ್ಟಿಗೆ ಇದ್ದವರು ಬಾಳು ಯಾವ ಸಮಯದಲ್ಲಾದರೂ ಬದಲಾಗಬಹುದು ಎಂದುದಕ್ಕೆ ಮಹಾರಾಷ್ಟ್ರದ ಬಬಿತಾ ತಾಡೆ ಅತ್ಯುತ್ತಮ ಉದಾಹರಣೆ.

ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಕಿಯಾಗಿದ್ದ ಬಬಿತಾ ತಾಡೆ ಕೆಲವು ದಿನಗಳ ಹಿಂದೆಯಷ್ಟೆ ಹಿಂದಿಯ 'ಕೋನ್ ಬನೇಗಾ ಕರೋಡ್‌ ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ.

ಕೋಟಿ ಗೆದ್ದಿದ್ದೆ ತಡ ಬಬಿತಾ ಅವರ ಬದುಕೇ ಬದಲಾಗಿ ಹೋಗಿದೆ. ಬಿಸಿಯೂಟ ತಯಾರಕಿಯಾಗಿ ಮೂರು ಸಾವಿರ ದುಡಿಯುತ್ತಿದ್ದ ಬಬಿತಾ ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ.

One Crore Winner Babita Tade Is Now Election Commission Ambassador

ಕೋಟಿ ಗೆದ್ದ ಬಬಿತಾ ತಾಡೆ ಅವರಿಗೆ ಚುನಾವಣಾ ಆಯೋಗ ಸಹ ಹೊಸ ಆಫರ್ ಒಂದನ್ನು ನೀಡಿದ್ದು, ಅವರನ್ನು ಚುನಾವಣಾ ಆಯೋಗದ ರಾಯಭಾರಿಯನ್ನಾಗಿ ನೇಮಿಸಿದೆ.

ಬಬಿತಾ ತಾಡೆ ಅವರು ಈಗ ಮಹಾರಾಷ್ಟ್ರದ ಅಮ್ರಾವತಿ ಜಿಲ್ಲೆಯ ಚುನಾವಣಾ ರಾಯಭಾರಿ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗಳು ಜಾರಿಯಲ್ಲಿದ್ದು, ಹೆಚ್ಚಿನ ಸಂಖ್ಯೆಯ ಜನರು ಮತ ಚಲಾಯಿಸುವಂತೆ ಪ್ರೇರಿಪಿಸುವ ಕಾರ್ಯವನ್ನು ಬಬಿತಾ ತಾಡೆ ಮಾಡುತ್ತಿದ್ದಾರೆ.

ಕೋಟಿ ಗೆದ್ದ ನಂತರ ಬಬಿತಾ ತಾಡೆ ಅವರು ಮಹಾರಾಷ್ಟ್ರದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+