ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

700ಕೋಟಿ ರೂ.ಗಳ ವಂಚನೆ : ಹರ್ಷದ್ ಮೆಹ್ತಾ ಸೋದರ ತಪ್ಪಿತಸ್ಥ

ನ್ಯಾಷನಲ್ ಹೌಸಿಂಗ್ ಬ್ಯಾಂಕಿಗೆ 700 ಕೋಟಿ ರು ವಂಚನೆ ಮಾಡಿದ ಆರೋಪದ ಮೇಲೆ ಸುಧೀರ್ ಮೆಹ್ತಾ ಸೇರಿದಂತೆ ಐವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳು ಮತ್ತು ಷೇರು ದಲ್ಲಾಳಿಗಳ ಮೇಲಿನ ಆರೋಪ ಸಾಬೀತಾಗಿದೆ.

By Mahesh
|
Google Oneindia Kannada News

ಮುಂಬೈ, ನವೆಂಬರ್ 29: ಭಾರತದ ಅತಿದೊಡ್ಡ ಆರ್ಥಿಕ ಹಗರಣಗಳ ಪೈಕಿ ಒಂದೆನಿಸಿರುವ ಷೇರು ಹಗರಣರ ರೂವಾರಿ ಹರ್ಷದ್ ಮೆಹ್ತಾ ಅವರ ಸೋದರ ಸುಧೀರ್ ಅವರು ಬಹುಕೋಟಿ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಇಲ್ಲಿನ ವಿಶೇಷ ನ್ಯಾಯಾಲಯ ಮಂಗಳವಾರ ಘೋಷಿಸಿದೆ.

ನ್ಯಾಷನಲ್ ಹೌಸಿಂಗ್ ಬ್ಯಾಂಕಿಗೆ 700 ಕೋಟಿ ರು ವಂಚನೆ ಮಾಡಿದ ಆರೋಪದ ಮೇಲೆ ಸುಧೀರ್ ಮೆಹ್ತಾ ಸೇರಿದಂತೆ ಐವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳು ಮತ್ತು ಷೇರು ದಲ್ಲಾಳಿಗಳ ಮೇಲಿನ ಆರೋಪ ಸಾಬೀತಾಗಿದೆ.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

 Harshad Mehta's brother Sudhir Mehta Convicted

1992ರ ಬಹುಕೋಟಿ ರೂಪಾಯಿಗಳ ಷೇರು ಹಗರಣ ಹಾಗೂ 700 ಕೋಟಿ ರೂ.ಗಳ ವಂಚನೆ ಪ್ರಕರಣದ ರೂವಾರಿ ಹರ್ಷದ್ ಮೆಹ್ತಾ ಅವರು 2002ರಲ್ಲಿ ನಿಧನರಾಗಿದ್ದಾರೆ.ಈಗ ಸುಧೀರ್ ಮೆಹ್ತಾ ಸೇರಿದಂತೆ ಆರು ಮಂದಿ ತಪ್ಪಿತಸ್ಥರಾಗಿದ್ದು, ಶಿಕ್ಷೆಯ ಪ್ರಮಾಣದ ತೀರ್ಪನ್ನು ನ್ಯಾಯಾಲಯ ಕಾದಿರಿಸಿದೆ.

ಸುಮಾರು ಎರಡು ದಶಕಗಳ ಕಾಲ ಕಾನೂನು ಸಮರ ನಡೆಸಿ ದೈಹಿಕವಾಗಿ, ಮಾನಸಿಕವಾಗಿ ಹಣ್ಣಾಗಿದ್ದೇವೆ ನಮ್ಮ ಮೇಲೆ ಕೃಪೆ ತೋರಿ ಎಂದು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಜಸ್ಟೀಸ್ ಶಾಲಿನಿ ಫನ್ಸಾಲ್ಕರ್ ಜೋಶಿ ತಿರಸ್ಕರಿಸಿದ್ದಾರೆ.[ಭಾರತವನ್ನು ತಲ್ಲಣಗೊಳಿಸಿದ ಟಾಪ್ 7 ಹಗರಣಗಳು]

ಹರ್ಷದ್ ಮೆಹ್ತಾ ಅವರ ಸೋದರ ಸುಧೀರ್, ಕಸಿನ್ ಸ್ಟಾಕ್ ಬ್ರೋಕರ್ ದೀಪಕ್ ಮೆಹ್ತಾ, ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಧಿಕಾರಿಗಳಾದ ಸಿ ರವಿ ಕುಮಾರ್, ಸುರೇಶ್ ಬಾಬು, ಎಸ್ ಬಿಐ ಅಧಿಕಾರಿ ಆರ್ ಸೀತಾರಾಮ್ನ್, ಸ್ಟಾಕ್ ಬ್ರೋಕರ್ ಅತುಲ್ ಪರೇಖ್ ಅವರು ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.

English summary
Mumbai: A special court convicted Harshad Mehta's brother Sudhir Mehta and five others, including senior bank officials and stock brokers, in a case relating to defrauding of National Housing Bank to the tune of more than Rs 700 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X