ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಭಕ್ಷಕ 'ಅವನಿ' ಸಾವಿಗೆ ಹೊಸ ತಿರುವು ನೀಡಿದ ಮರಣೋತ್ತರ ಪರೀಕ್ಷೆ

|
Google Oneindia Kannada News

ಮುಂಬೈ, ನವೆಂಬರ್ 12: ಮಹಾರಾಷ್ಟ್ರದ ಯಾವತ್ಮಾಳ್ ಅರಣ್ಯದಲ್ಲಿ ಹತ್ಯೆಯಾದ ಹೆಣ್ಣು ಹುಲಿ ಅವನಿಯ ಸಾವಿಗೆ ಸಂಬಂಧಿಸಿದಂತೆ ಹೊಸದೊಂದು ಅನುಮಾನ ಹುಟ್ಟಿಕೊಂಡಿದೆ. 13 ಜನರನ್ನು ಕೊಂದಿದೆ ಎನ್ನಲಾದ ನರಭಕ್ಷಕ ಹೆಣ್ಣು ಹುಲಿಯನ್ನು ಕೊಲ್ಲುವ ಸಮಯದಲ್ಲಿ ಎಲ್ಲಾ ನಿಯಮಗನ್ನೂ ಉಲ್ಲಂಘಿಸಲಾಗಿದೆ ಎಂಬ ಈ ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ.

ಅವನಿಯ ಮರಿಗಳೂ ನರಭಕ್ಷಕವಾಗಿವೆ... ಭಾವುಕನಾಗಿ ಶೂಟರ್ ಹೇಳಿದ ಮಾತು!ಅವನಿಯ ಮರಿಗಳೂ ನರಭಕ್ಷಕವಾಗಿವೆ... ಭಾವುಕನಾಗಿ ಶೂಟರ್ ಹೇಳಿದ ಮಾತು!

ಅವನಿಯನ್ನು ಸ್ವರಕ್ಷಣೆಗಾಗಿ ಕೊಲ್ಲದೆ, ಅದನ್ನು ಬೇಕೆಂದೇ ಹೊಡೆದು ಕೊಲ್ಲಲಾಗಿದೆ ಎಂಬುದಕ್ಕೆ ಪುರಾವೆ ದೊರೆತಿದ್ದು, ಪರಿಸರವಾದಿಗಳು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ.

ಹತ್ಯೆಯಾದ ನರಭಕ್ಷಕಿ 'ಅವನಿ' ವಾರದಿಂದ ಆಹಾರವನ್ನೇ ಸೇವಿಸಿರಲಿಲ್ಲ! ಹತ್ಯೆಯಾದ ನರಭಕ್ಷಕಿ 'ಅವನಿ' ವಾರದಿಂದ ಆಹಾರವನ್ನೇ ಸೇವಿಸಿರಲಿಲ್ಲ!

ಸ್ವರಕ್ಷಣೆಗಾಗಿ ಅವನಿಯನ್ನು ಕೊಂದಿದ್ದೇ ಹೌದಾದರೆ, ಅವನಿ ಶೂಟರ್ ಅಸ್ಘರ್ ನ ಮುಂಭಾಗದಿಂದ ಆತನ ಮೇಲೆ ಹಾರುವುದಕ್ಕೆ ಪ್ರಯತ್ನಿಸಿದ್ದಿರಬೇಕು. ಆಗ ಶೂಟರ್ ಅಸ್ಘರ್ ಗುಂಡು ಹಾರಿಸಿದ್ದರೆ ಅದು ಅವನಿಯ ತಲೆಗೆ ನಾಟಬೇಕಿತ್ತು. ಅದರಲ್ಲೂ ಅಸ್ಘರ್ ಅಲಿ ವೃತ್ತಿಪರ ಶೂಟರ್ ಆಗಿರುವುದರಿಂದ ಆತನ ಗುರಿ ತಪ್ಪಿ ಇನ್ನೆಲ್ಲೋ ಹೋಗುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೂ ಅವನಿಯ ಹಿಂಬದಿಯ ಭಾಗಕ್ಕೆ ಗುಂಡು ಬಿದ್ದಿದ್ದು ಹೇಗೆ?

ನರಭಕ್ಷಕ ಹುಲಿ 'ಅವನಿ' ಹತ್ಯೆ ಕಟ್ಟುಕಥೆಯೇ? ತಜ್ಞರ ಅನುಮಾನನರಭಕ್ಷಕ ಹುಲಿ 'ಅವನಿ' ಹತ್ಯೆ ಕಟ್ಟುಕಥೆಯೇ? ತಜ್ಞರ ಅನುಮಾನ

New twist to man eater tigress Avnis killing

ಆರು ವರ್ಷ ವಯಸ್ಸಿನ ಅವನಿ ಎಂಬ ಹೆಣ್ಣುಹುಲಿ ಕಳೆದ ಎರಡು ವರ್ಷಗಳಿಂದ ನರಭಕ್ಷಕವಾಗಿ ಬದಲಾಗಿತ್ತು. ಸುತ್ತಮುತ್ತಲ ಹಳ್ಳಿಯ ಸುಮಾರು 13 ಜನರನ್ನು ಅವನಿ ಕೊಂದು ತಿಂದಿತ್ತು ಎಂದು ಆರೋಪಿಸಿ, ಮಹಾರಾಷ್ಟ್ರ ಸರ್ಕಾರವೇ ಅವನಿಯನ್ನು ಕೊಲ್ಲಲು ಆದೇಶ ಹೊರಡಿಸಿತ್ತು. ಈ ಕುರಿತು ಸಾಕಷ್ಟು ಆಕ್ರೋಶವನ್ನು ವನ್ಯಜೀವಿ ಪ್ರೇಮಿಗಳು ವ್ಯಕ್ತಪಡಿಸಿದ್ದರು.

English summary
A senior forest department official has said that violations of guidelines are "evident" in the postmortem report of tigress Avni which also found that the feline was shot while it was "facing away" from the shooter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X