ಮುಂಬೈ ತ್ರಿವಳಿ ಬಾಂಬ್ ಸ್ಫೋಟ : 10 ಜನರ ಆರೋಪ ಸಾಬೀತು

By: ವಿಕಾಸ್ ನಂಜಪ್ಪ
Subscribe to Oneindia Kannada

ಮುಂಬೈ, ಮಾರ್ಚ್ 29 : 2002 ಮತ್ತು 2003ರಲ್ಲಿ ಮುಂಬೈನಲ್ಲಿ ನಡೆದ ತ್ರಿವಳಿ ಸರಣಿ ಬಾಂಬ್ ಸ್ಫೋಟದಲ್ಲಿ 10 ಜನರ ವಿರುದ್ಧದ ಆರೋಪ ಸಾಬೀತಾಗಿದೆ. ಮೂವರು ಆರೋಪಿಗಳನ್ನು ವಿಶೇಷ ಪೋಟಾ ಕೋರ್ಟ್ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.

10 ಜನರ ವಿರುದ್ಧದ ದೇಶದ್ರೋಹ ಮತ್ತು ಕೊಲೆ ಆರೋಪಗಳು ಸಾಬೀತಾಗಿವೆ. ಮೂವರು ವಿರುದ್ಧ ಸೂಕ್ತ ಸಾಕ್ಷಿಗಳು ಲಭ್ಯವಾಗದ ಕಾರಣ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಪೋಟಾ ನ್ಯಾಯಾಲಯ ಮಂಗಳವಾರ ತನ್ನ ಆದೇಶದಲ್ಲಿ ತಿಳಿಸಿದೆ. [ವರ್ಷಾಂತ್ಯ ವಿಶೇಷ : ತಡರಾತ್ರಿ ಬಾಗಿಲು ತೆರೆದ ಸುಪ್ರೀಂಕೋರ್ಟ್]

mumbai

ತ್ರಿವಳಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಸಾಖ್ವಿಬ್ ನಾಚಾನ್ ವಿರುದ್ಧದ ಆರೋಪವೂ ಸಾಬೀತಾಗಿದೆ. ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಚಾರ್ಚ್‌ ಶೀಟ್‌ನಲ್ಲಿ ಎಲ್ಲಾ ಆರೋಪಿಗಳು ನಿಷೇಧಿತ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ) ಸಂಘಟನೆಯ ಸದಸ್ಯರು ಎಂದು ಹೇಳಿದ್ದರು. [ಮುಂಬೈ ಸರಣಿ ಬಾಂಬ್ ಸ್ಫೋಟ : Timeline]

ಸಿಮಿ ಸಂಘಟನೆಯನ್ನು ನಿಷೇಧ ಮಾಡಿರುವುದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಈ ಸ್ಫೋಟ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದರು. ಎಲ್ಲಾ ಆರೋಪಿಗಳು ಗುಂಪಾಗಿ ತ್ರಿವಳಿ ಸ್ಫೋಟದಲ್ಲಿ ಪಾಲ್ಗೊಂಡಿದ್ದರು. ಸ್ಫೋಟಕ್ಕಾಗಿ ಪಾಕಿಸ್ತಾನ ಮೂಲದ ವ್ಯಕ್ತಿಯ ಸಹಾಯವನ್ನು ಇವರು ಪಡೆದಿದ್ದರು. [1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು]

ಮೂರು ಸ್ಫೋಟಗಳು

* 2002ರ ಡಿಸೆಂಬರ್ 6ರಂದು ಮುಂಬೈ ಕೇಂದ್ರ ರೈಲು ನಿಲ್ದಾಣದ ಮ್ಯಾಕ್ ಡೋನಾಲ್ಡ್ ರೆಸ್ಟೋರೆಂಟ್‌ನಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ 27 ಜನರು ಗಾಯಗೊಂಡಿದ್ದರು.

* 2003ರ ಜನವರಿ 27ರಂದು ಮುಂಬೈನ ವಿಲೇಪಾರ್ಲೆ ರೈಲ್ವೆ ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಹೊರಭಾಗದಲ್ಲಿ ಸೈಕಲ್‌ನಲ್ಲಿ ಇಟ್ಟಿದ್ದ ಬಾಂಬ್ ಸ್ಫೋಟಗೊಂಡಿತ್ತು. 30 ಜನರು ಈ ಸ್ಫೋಟದಲ್ಲಿ ಗಾಯಗೊಂಡಿದ್ದರು.

* 2003ರ ಮಾರ್ಚ್ 13ರಂದು ಮುಲುಂದ್ ನಿಲ್ದಾಣಕ್ಕೆ ಬರುತ್ತಿದ್ದ ರೈಲಿನ ಮಹಿಳಾ ವಿಶೇಷ ಬೋಗಿಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. 13 ಜನರು ಈ ಸ್ಫೋಟದಲ್ಲಿ ಸಾವನ್ನಪ್ಪಿದ್ದರು ಮತ್ತು 65ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ten persons were convicted and three acquitted by a Special POTA court in connection with the 2002 and 2003 triple blasts case at Mumbai. The accused persons were facing charges of murder and waging war against the nation.
Please Wait while comments are loading...