ಮುಂಬೈ: ಕಳೆದ ಆರು ಗಂಟೆಗಳಲ್ಲಿ 100 ಮಿ.ಮೀ. ಮಳೆ!
ಮುಂಬೈನಲ್ಲಿ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ ಸುಮಾರು 100 ಮಿ.ಮೀ. ಮಳೆ. ಎಲ್ಲೆಲ್ಲೂ ಪ್ರವಾಹದಂಥ ವಾತಾವರಣ ಉಂಟಾಗಿ ಜನರ ಜೀವನ ಅಸ್ತವ್ಯಸ್ತ.
ಮುಂಬೈ, ಆಗಸ್ಟ್ 29: ಮಹಾ ಮಳೆಯಿಂದ ತತ್ತರಿಸಿರುವ ಮುಂಬೈನಲ್ಲಿ ಮಂಗಳವಾರ ಬೆಳಗ್ಗೆ 8:30 ಗಂಟೆಯಿಂದ ಮಧ್ಯಾಹ್ನ 3:30ರವರೆಗೆ 100 ಮಿ. ಮೀ.ಗಳಷ್ಟು ಮಳೆಯಾಗಿದೆ ಎಂದು ಮುಂಬೈ ಮಹಾ ನಗರ ಪಾಲಿಕೆ ತಿಳಿಸಿದೆ.
ಸೋಮವಾರ ಸಂಜೆಯಿಂದ ಸುರಿದಿರುವ ಅಪಾರ ಮಳೆಯಿಂದಾಗಿ ರಸ್ತೆ, ಹಾದಿ ಬೀದಿ, ಮನೆಗಳೊಳಗೆಲ್ಲಾ ನೀರು ನುಗ್ಗಿ ಈಗಾಗಲೇ ಪ್ರವಾಹ ಪೀಡಿತ ಸ್ಥಳದಂತೆ ಕಾಣುತ್ತಿರುವ ಮುಂಬೈ, ಮಂಗಳವಾರ ಸುರಿದ ಮತ್ತಷ್ಟು ಮಳೆಯಿಂದಾಗಿ ಮತ್ತಷ್ಟು ಹಾನಿಗೀಡಾಗಿದೆ.

ಎಲ್ಲೆಲ್ಲೂ ನೀರು ತುಂಬಿರುವುದರಿಂದ ಜನರ, ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರ ನೀರು ಕಡಿಮೆಯಿದ್ದು ಬಸ್ ಹಾಗೂ ಸಂಚಾರ ಸಾಗಿದೆ.

ಆದರೆ, ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಹಾಗೂ ನೀರಿನಿಂದಾಗಿ ಅರ್ಧ ಮುಳುಗಿದ ವಾಹನಗಳಿಂದಾಗಿ ಸಂಚಾರಕ್ಕೆ ತೊಂದರೆಯಾಗಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಸ್ಥಳೀಯ ರೈಲ್ವೆ ಸಂಚಾರ ಸ್ತಬ್ಧವಾಗಿದೆ. ದಾದರ್-ದಹಾನು ಮಾರ್ಗದಲ್ಲಿ ನೀರು ತುಂಬಿರುವುದರಿಂದ ಆ ಭಾಗದ ಸಂಚಾರವನ್ನು ನಿಲ್ಲಿಸಲಾಗಿದೆ. ಚರ್ಚ್ ಗೇಟ್ ಹಾಗೂ ದಾದರ್ ನಡುವಿನ ರೈಲು ಸಂಚಾರಕ್ಕೂ ಇದೇ ಗತಿಯಾಗಿದೆ.












Click it and Unblock the Notifications