Get Updates
Get notified of breaking news, exclusive insights, and must-see stories!

ಮೋದಿ ವಿರುದ್ಧದ ಅಣಕು ಚಿತ್ರ ಹಾಕಿದ್ದಕ್ಕೆ ಎಫ್ಐಆರ್

ಮುಂಬೈ, ಜುಲೈ 14 : ಪ್ರಧಾನಿ ಮೋದಿ ಅವರ ಬಗ್ಗೆ ಟ್ವಿಟ್ಟರ್‍ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಾಮಿಡಿ ಗ್ರೂಪ್ ಎಐಬಿ ವಿರುದ್ಧ ಮುಂಬೈ ಸೈಬರ್ ಪೊಲೀಸರು ಪ್ರಕರಣ, ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ.

ಮೋದಿಯಂತೆ ಕಾಣುವ ವ್ಯಕ್ತಿಯೊಬ್ಬ ರೈಲಿಗಾಗಿ ಕಾಯುತ್ತಾ ಫ್ಲಾಟ್ ಫಾರ್ಮ್ ನಲ್ಲಿ ನಿಂತಿರುವ ಚಿತ್ರವನ್ನು ಬಳಸಿಕೊಂಡು ಸ್ನಾಪ್ ಚಾಟ್ ನಲ್ಲಿ ಡಾಗ್ ಫಿಲ್ಟರ್ ಆಗಿ ಅಣಕವಾಡಲಾಗಿತ್ತು. ಈ ಚಿತ್ರವನ್ನು ಕಾಮಿಡಿ ಗ್ರೂಪ್ ಎಐಬಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

Mumbai police file FIR against AIB's Tanmay Bhat for meme on PM Modi

ಮೋದಿ ಅವರ ವಿದೇಶ ಪ್ರವಾಸವನ್ನು ಅಣಕಿಸುವಂತಿದ್ದ ಈ ಪೋಸ್ಟ್ ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಮೋದಿ ಅವರಿಗೆ ಹಾಗೂ ರಾಷ್ಟ್ರೀಯ ಭಾವನೆಗೆ ಇದರಿಂದ ಧಕ್ಕೆಯಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಲಾಗಿತ್ತು.

ಕಾಮಿಡಿ ಎಐಬಿ ಗ್ರೂಪ್‍ನ ಪ್ರಮುಖರಲ್ಲೊಬ್ಬರಾದ ತನ್ಮಯ್ ಭಟ್, ಇದೇ ರೀತಿ ತಮಾಷೆ ಮಾಡುತ್ತಲೇ ಇರ್ತೀವಿ. ಅಗತ್ಯ ಬಿದ್ದರೆ ಡಿಲೀಟ್ ಮಾಡ್ತೀವಿ. ಮತ್ತೆ ತಮಾಷೆ ಮಾಡ್ತೀವಿ. ಅಗತ್ಯ ಬಿದ್ದರೆ ಕ್ಷಮೆ ಕೇಳ್ತೀವಿ. ನೀವು ಏನು ಯೋಜನೆ ಮಾಡ್ತೀರೋ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳೋದಿಲ್ಲ ಅಂತ ಸರಣಿ ಟ್ವೀಟ್ ಮಾಡಿದ್ದರು. ಕೆಲವು ಟ್ವಿಟ್ಟರಿಗರು ತನ್ಮಯ್ ಪರವಾಗಿ ಟ್ವೀಟ್ ಮಾಡಿದ್ದರು.

ಈ ಹಿಂದೆ ಸಚಿನ್ ತೆಂಡೂಲ್ಕರ್, ಲತಾ ಮಂಗೇಶ್ಕರ್ ಅವರ ಚಿತ್ರಗಳನ್ನು ಸ್ನಾಪ್ ಚಾಟ್ ವಿಡಿಯೋ ಹಾಗೂ ಪೋಕಿಂಗ್ ಫನ್ ಆಪ್ಲಿಕೇಷನ್ ಬಳಸಿ ಅಣಕು ಮಾಡಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+