ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆನ್ಸೆಷನಲ್ ಮುಂಬೈ ಡಬಲ್ ಮರ್ಡರ್ : ಹೂ ಡನ್ ಇಟ್?

By Mahesh
|
Google Oneindia Kannada News

ಮುಂಬೈ, ಡಿ. 14: ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆ ಹೇಮಾ ಹಾಗೂ ವಕೀಲ ಹರೀಶ್ ಅವರ ಸಾವಿನ ಪ್ರಕರಣದ ತನಿಖೆ ಆರಂಭಿಸಿರುವ ಮುಂಬೈ ಪೊಲೀಸರು, ಇದು ಹಣಕ್ಕಾಗಿ ನಡೆದ ಕೊಲೆ ಎಂದು ಪ್ರಾಥಮಿಕ ವರದಿ ಸಿದ್ಧಪಡಿಸಿದ್ದಾರೆ.

ಹೇಮಾ ಅವರು ಚಾರ್ಕ್ ಕೊಪ್ ವೇರ್ ಹೌಸ್ ನಲ್ಲಿ ತಮ್ಮ ಕಲಾಕೃತಿಗಳನ್ನು ಇರಿಸುತ್ತಿದ್ದರು., ಇದರ ಮಾಲೀಕ ಗೋಟು ಎಂಬಾತನಿಗೂ ಹೇಮಾ ಅವರಿಗೂ 5 ಲಕ್ಷ ರು ಗಾಗಿ ಈ ಹಿಂದೆ ಕಿತ್ತಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಗೋಟುವಿಗಾಗಿ ಬಲೆ ಬೀಸಲಾಗಿದೆ.

ಹೇಮಾ ಹಾಗೂ ಹರೀಶ್ ಅವರ ಮೃತ ದೇಹಗಳು ಖಾಂಡಿವಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೇ ಇರುವ ಗೋಟುವಿನ ವೇರ್ ಹೌಸ್ ಸಮೀಪದ ಚರಂಡಿಯಲ್ಲಿ ಸಿಕ್ಕಿದೆ. ಡಿಸೆಂಬರ್ 11 ರಾತ್ರಿ 8.30ರ ನಂತರ ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿವೆ. ಕೊನೆಯ ಕಾಲ್ ಟ್ರೇಸ್ ಆಗಿರುವುದು ಚಾರ್ಕೊಪ್ ಟವರ್ ನಿಂದ ಎಂಬುದು ಪತ್ತೆ ಹಚ್ಚಲಾಗಿದೆ. ಈಗ ಇಬ್ಬರ ಮೊಬೈಲ್ ಫೋನ್ ಹಾಗೂ ವಾಲೆಟ್ ನಾಪತ್ತೆಯಾಗಿದೆ.[ನಾಪತ್ತೆಯಾಗಿದ್ದ ಕಲಾವಿದೆ ಚರಂಡಿಯಲ್ಲಿ ಹೆಣವಾಗಿ ಪತ್ತೆ!]

ಶುಕ್ರವಾರ ಸಂಜೆ 6.30ರ ಸುಮಾರಿಗೆ ಹೇಮಾ ಅವರ ಸ್ಟುಡಿಯೋ ಬಳಿಯ ಲಕ್ಷ್ಮಿ ಇಂಡಸ್ಟ್ರೀಯಲ್ ಎಸ್ಟೇಟ್ ನಲ್ಲಿ ವಕೀಲ ಹರೀಶ್ ಜೊತೆ ಮಾತುಕತೆ ನಡೆಸಿರುವುದು ತಿಳಿದು ಬಂದಿದೆ. ಭಾನುವಾರದಂದು ಹೇಮಾ ಅವರ ಪತಿ ಚಿಂತನ್, ಇಬ್ಬರು ಮನೆ ಕೆಲಸದವರು, ಕಾರು ಚಾಲಕನನ್ನು ವಿಚಾರಣೆ ನಡೆಸಲಾಗಿತ್ತು. ಈಗ ಇಬ್ಬರ ಶವವನ್ನು ಹೊತ್ತು ಸಾಗಿಸಿದ ಟ್ರಕ್ ಡೈವರ್ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ಪ್ರಮುಖ ಆರೋಪಿಯನ್ನು ಸೆರೆಹಿಡಿದಿದ್ದಾಗಿದೆ.

ಮುಖ್ಯ ಶಂಕಿತ ವಾರಣಾಸಿಯಲ್ಲಿ ಬಂಧನ

ಮುಖ್ಯ ಶಂಕಿತ ವಾರಣಾಸಿಯಲ್ಲಿ ಬಂಧನ

ಹೇಮಾ ಸಾವು ಪ್ರಕರಣದ ಮುಖ್ಯ ಶಂಕಿತ ಶಿವಕುಮಾರ್ ಎಂಬಾತನನ್ನು ವಾರಣಾಸಿಯಲ್ಲಿ ಸೋಮವಾರ ಬಂಧಿಸಲಾಗಿದೆ. ಮುಂಬೈನಲ್ಲಿ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಪ್ರಕರಣದ ಮತ್ತೊಬ್ಬ ಆರೋಪಿ ಗೋಡೌನ್ ಮಾಲೀಕನ ಪತ್ತೆಯಾಗಿ ಮೂರು ತಂಡಗಳನ್ನು ಕಳಿಸಲಾಗಿದೆ ಎಂದು ಡಿಸಿಪಿ ಧನಂಜಯ್ ಕುಲಕರ್ಣಿ ಹೇಳಿದ್ದಾರೆ.
ಟ್ರಕ್ ಚಾಲಕನಿಗೆ ಕೊಲೆ ಬಗ್ಗೆ ಅರಿವಿರಲಿಲ್ಲ

ಟ್ರಕ್ ಚಾಲಕನಿಗೆ ಕೊಲೆ ಬಗ್ಗೆ ಅರಿವಿರಲಿಲ್ಲ

ಕೊಲೆಯಾದ ಮೇಲೆ ಹೇಮಾ ಹಾಗೂ ಹರೀಶ್ ಶವವನ್ನು ಕಾರ್ಡ್ ಬೋರ್ಡ್ ಬಾಕ್ಸಿನಲ್ಲಿ ಇರಿಸಿ ಟ್ರಕ್ ಮೂಲಕ ಜುಹುವಿನಿಂದ ಕಂಡಿವಿಲಿ ಪಶ್ಚಿಮ ಭಾಗಕ್ಕೆ ಸಾಗಿಸಲಾಗಿದೆ. ಇಬ್ಬರ ಶವಗಳು ನಗ್ನವಾಗಿದ್ದು, ಮೈಮೇಲೆ ಒಳ ಉಡುಪು ಬಿಟ್ಟರೆ ಮತ್ತೇನು ಇರಲಿಲ್ಲ. ಕೈ ಕಾಲು ಕಟ್ಟಿ ಹಾಕಲಾಗಿತ್ತು. ಈ ಬಾಕ್ಸ್ ಗಳನ್ನು ಚರಂಡಿಗೆ ಎಸೆದು ಚಾಲಕ ಅಲ್ಲಿಂದ ಹೊರಟ್ಟಿದ್ದಾನೆ. ಶನಿವಾರ ಸಂಜೆ ವೇಳೆಗೆ ಕಸ ಆಯುವ ವ್ಯಕ್ತಿಯೊಬ್ಬನಿಗೆ ಕಾಣಿಸಿದೆ. ಇದನ್ನು ತಕ್ಷಣವೇ ಪೊಲೀಸರಿಗೆ ತಿಳಿಸಿದ್ದಾನೆ.

ವಿವಿಧ ಠಾಣೆಗಳಿಗೆ ಸುತ್ತಾಡಿದ ಪ್ರಕರಣ

ವಿವಿಧ ಠಾಣೆಗಳಿಗೆ ಸುತ್ತಾಡಿದ ಪ್ರಕರಣ

* ಹೇಮಾ ಅವರು ಜುಹು ತಾರಾ ರಸ್ತೆ ಸಾಂತಾ ಕ್ರೂಜ್ ಪಶ್ಚಿಮದಲ್ಲಿರುವ ಮನೆಗೆ ಹಿಂತಿರುಗದೆ ಇದ್ದಾಗ ಮನೆ ಕೆಲಸದಾಳು ಹೇಮಂತ್ ಅವರು ಸಾಂತಾ ಕ್ರೂಜ್ ಪೊಲೀಸ್ ಠಾಣೆಗೆ ದೂರಿತ್ತಿದ್ದಾನೆ.
* ಭಂಬಾನಿ ಅವರ ಮಗಳು ಮಾತುಂಗಾ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
* ಈ ನಡುವೆ ಕಾರ್ಡ್ ಬೋರ್ಡ್ ನೋಡಿದ ಕಸ ಆಯುವ ವ್ಯಕ್ತಿ ಲಾಲ್ಜಿಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
* ಐಪಿಸಿ ಸೆಕ್ಷನ್ 302, 201 ಹಾಗೂ 34ರ ಅನ್ವಯ ಪ್ರಕರಣ ದಾಖಲಿಸಿ, ಕಂಡಿವಲಿ ಪೊಲೀಸರು ತನಿಖೆ ಕೈಗೊಂಡು ನಾಲ್ವರು ಶಂಕಿತರನ್ನು ವಿಚಾರಣೆಗೊಳಪಡಿಸಿದ್ದಾರೆ.

ಎಫ್ಎಲ್ ಎಲ್ ವರದಿಗಾಗಿ ಕಾದಿರುವ ಪೊಲೀಸರು

ಎಫ್ಎಲ್ ಎಲ್ ವರದಿಗಾಗಿ ಕಾದಿರುವ ಪೊಲೀಸರು

ಪ್ರಾಥಮಿಕ ಹಂತದ ತನಿಖೆ ನಂತರ ಶಂಕಿತರು ಯಾರು ಎಂಬುದು ತಿಳಿದು ಬಂದರೂ ಏತಕ್ಕಾಗಿ ಕೊಲೆ ನಡೆದಿದೆ ಎಂಬುದು ಸ್ಪಷ್ಟವಿಲ್ಲ. ಹಣಕ್ಕಾಗಿ ಕೊಲೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹೇಮಾ ಹಾಗೂ ಭಂಬಾನಿ ದೇಹಗಳ ಮೇಲೆ ಅನೇಕ ಕಡೆ ಗಾಯದ ಗುರುತುಗಳಿವೆ. ಇದು ಸಾವಿಗೂ ಮುನ್ನ ಚಿತ್ರಹಿಂಸೆ ಕೊಟ್ಟಿರುವ ಸುಳಿವು ನೀಡುತ್ತದೆ. ಎಫ್ ಎಸ್ಎಲ್ ವರದಿ ನಂತರ ಸಾವಿನ ಕಾರಣ ತಿಳಿಯಲಿದೆ ಎಂದು ಡಿಸಿಪಿ ಧನಂಜಯ್ ಹೇಳಿದ್ದಾರೆ.

ಚಿಂತನ್ ಜೊತೆ ಕಿತ್ತಾಟ ಕಾರಣವೇ?

ಚಿಂತನ್ ಜೊತೆ ಕಿತ್ತಾಟ ಕಾರಣವೇ?

1992ರಲ್ಲಿ ಕಲಾವಿದ ಚಿಂತನ್ ಉಪಾಧ್ಯಾಯ್ ಭೇಟಿ ಮಾಡಿದ ವಡೋದರಾ ಮೂಲದ ಹೇಮಾ ನಂತರ ಮುಂಬೈನಲ್ಲೇ ನೆಲೆಸಿ ಮುಂಬೈಕರ್ ಆಗಿಬಿಟ್ಟರು. ಅಕ್ಟೋಬರ್ 31,1998 ಇಬ್ಬರು ಸತಿ ಪತಿಗಳಾದರು.. ಸಾಂತಾಕ್ರೂಜ್ ನಲ್ಲಿ(ಈಗ ಹೇಮಾ ಇದ್ದ ಮನೆ) ನೆಲೆಸಿದ್ದ ಇಬ್ಬರ ನಡುವೆ 2010ರಲ್ಲಿ ಮೂಡಿದ ವೈಮನಸ್ಯ 2013ರಲ್ಲಿ ವಿವಾಹ ವಿಚ್ಛೇದನಕ್ಕೆ ಮುನ್ನಡಿ ಬರೆಯಿತು. ಫ್ಯಾಮಿಲಿ ಕೋರ್ಟಿನಲ್ಲಿ ಕೇಸ್ ನಡೆಯುತ್ತಿದೆ. ಇತ್ತೀಚೆಗೆ ದುಬೈಗೆ ಹೋಗಿ ಬಂದಿದ್ದ ಹೇಮಾ ಅಲ್ಲೂ ಕೂಡಾ ಆರ್ಟ್ ಗ್ಯಾಲರಿ ಶಾಲೆ ಆರಂಭಿಸುವ ಕನಸು ಹೊತ್ತಿದ್ದರು.

English summary
In the sensational double murder case of internationally-acclaimed artist Hema Upadhyay and her advocate Harish Bhambani, the police on Sunday, Dec 13, police believes that the cause of murder can be related to money-dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X