ಅರ್ನಬ್ ಗೋಸ್ವಾಮಿ ವಿರುದ್ಧ ಡಿಸಿಪಿಯಿಂದ ಮಾನಹಾನಿ ದೂರು

ಮುಂಬೈ, ಫೆಬ್ರವರಿ 3: ತಮ್ಮ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ, ಅವರ ಪತ್ನಿ ಮತ್ತು ಚಾನೆಲ್‌ ಎಆರ್‌ಜಿ ಔಟ್‌ಲೀರ್ ವಿರುದ್ಧ ಮುಂಬೈ ಉಪ ಪೊಲೀಸ್ ಆಯುಕ್ತ ಅಭಿಷೇಕ್ ತ್ರಿಮುಖೆ ಮಾನಹಾನಿ ದೂರು ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಗೃಹ ಇಲಾಖೆಯಿಂದ ಅಗತ್ಯ ಪ್ರಕ್ರಿಯೆ ಅನುಮತಿಯನ್ನು ಪಡೆದುಕೊಂಡ ಬಳಿಕ ತ್ರಮುಖೆ ಅವರು ಅರ್ನಬ್ ಹಾಗೂ ರಿಪಬ್ಲಿಕ್ ಟಿವಿ ವಿರುದ್ಧ ದೂರು ದಾಖಲಿಸಿದ್ದಾರೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಕುರಿತು ಆರಂಭಿಕ ತನಿಖೆಯ ಬಗ್ಗೆ ರಿಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರ ಮಾಡುವಾಗ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಕೈವಾಡದ ಕುರಿತಾದ ವಿಚಾರದ ವೇಳೆ ತ್ರಿಮುಖೆ ವಿರುದ್ಧ ಕೂಡ ಕೆಲವು ಸುದ್ದಿಗಳನ್ನು ಬಿತ್ತರಿಸಲಾಗಿತ್ತು. ಇದರಲ್ಲಿ ಅರ್ನಬ್ ಗೋಸ್ವಾಮಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ತಮ್ಮ ತೇಜೋವಧೆ ಮಾಡಲಾಗಿದ್ದು, ಆಧಾರ ರಹಿತ ಆರೋಪಗಳನ್ನು ಹೊರಿಸುವ ಮೂಲಕ ಮಾನನಷ್ಟ ಮಾಡಲಾಗಿದೆ ಎಂದು ತ್ರಿಮುಖೆ ದೂರಿನಲ್ಲಿ ಹೇಳಿದ್ದಾರೆ.

Mumbai DCP Abhishek Trimukhe Files Defamation Complaint Against Arnab Goswami

ಝೋನ್ IXನ ಡಿಸಿಪಿಯಾಗಿರುವ ಅಭಿಷೇಕ್ ತ್ರಿಮುಖೆ ತಮ್ಮ ದೂರಿನಲ್ಲಿ ಅರ್ನಬ್ ಗೋಸ್ವಾಮಿ, ಅವರ ಪತ್ನಿ ಹಾಗೂ ಚಾನೆಲ್ ನಿರ್ದೇಶಕಿ ಸಮ್ಯಬ್ರತಾ ರೇ ಗೋಸ್ವಾಮಿ ಮತ್ತು ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಮಾಲೀಕರಾದ ಎಆರ್‌ಜಿ ಔಟ್‌ಲೀರ್ ಮೀಡಿಯಾ ಲಿಮಿಟೆಡ್ ಅವರನ್ನು ಹೆಸರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+