ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ನಗರದಲ್ಲೇ 1500 ಗಡಿ ದಾಟಿದ ಕೊರೊನಾ ಸೋಂಕು

|
Google Oneindia Kannada News

ಮುಂಬೈ, ಏಪ್ರಿಲ್ 14: ಭಾರತದ ಪೈಕಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿರುವುದು ಮಹಾರಾಷ್ಟ್ರದಲ್ಲಿ. ಸದ್ಯದ ವರದಿ ಪ್ರಕಾರ, ಮಹಾರಾಷ್ಟ್ರದಲ್ಲಿ 2,455 ಜನರಲ್ಲಿ ಕೊವಿಡ್ ಸೋಂಕು ಕಾಣಿಸಿಕೊಂಡಿದೆ. 160 ಜನರು ಕೊವಿಡ್ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.

ಇದೀಗ, ಮುಂಬೈ ನಗರದಲ್ಲೇ 1500 ಕೊರೊನಾ ಕೇಸ್ ದಾಖಲಾಗಿದೆ. ಇದು ಸಹಜವಾಗಿ ಮುಂಬೈ ಜನರಿಗೆ ಹಾಗೂ ಮಹಾರಾಷ್ಟ್ರಕ್ಕೆ ಆತಂಕ ಹೆಚ್ಚಿಸಿದೆ. ಮುಂಬೈನ ವರ್ಲಿ ಪ್ರದೇಶದಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದ್ದು, ಮುಂಬೈಗೆ ಸಂಕಷ್ಟ ತಂದಿದೆ.

'ಜಾನಿ ಜಾನಿ ಎಸ್ ಪಪ್ಪಾ': ಜನರಿಗೆ ಮಹಾರಾಷ್ಟ್ರ ಪೊಲೀಸರ ಪಾಠ'ಜಾನಿ ಜಾನಿ ಎಸ್ ಪಪ್ಪಾ': ಜನರಿಗೆ ಮಹಾರಾಷ್ಟ್ರ ಪೊಲೀಸರ ಪಾಠ

ಸದ್ಯದ ಮಾಹಿತಿ ಪ್ರಕಾರ ವರ್ಲಿಯಲ್ಲಿ 300 ಕೊವಿಡ್ ಕೇಸ್ ದಾಖಲಾಗಿದೆ. ಇದರ ಜೊತೆಗೆ ಏಷ್ಯಾದ ಅತಿ ದೊಡ್ಡ ಸ್ಲಂ ಎಂದು ಗುರುತಿಸಿಕೊಂಡಿರುವ ಧಾರವಿ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.

Mumbai Crossed 1500 Mark Of Covid19

ಧಾರವಿ ಸ್ಲಂನಲ್ಲಿ ಸೋಂಕು ಹರಡುತ್ತಿರುವುದು ಭಾರಿ ಆತಂಕ ಮೂಡಿಸಿದೆ. ಈ ನಿಟ್ಟಿನಲ್ಲಿ ಸ್ಲಂ ಪೂರ್ತಿ ಸೀಲ್‌ಡೌನ್‌ ಮಾಡಲಾಗಿದ್ದು, ಪೂರ್ತಿ ನಿಗಾ ಇಡಲಾಗಿದೆ. ಸುಮಾರು 7 ಲಕ್ಷ ಜನರು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ ಎನ್ನುವುದು ತೀರಾ ಗಂಭೀರ ವಿಚಾರ.

ಮುಂಬೈ ಬಿಟ್ಟರೆ ಪುಣೆಯಲ್ಲಿ 308 ಕೇಸ್, ಥಾಣೆಯಲ್ಲಿ 206 ಹಾಗು ನಾಗ್ಪುರದಲ್ಲಿ 39 ಸೋಂಕಿತರು ವರದಿಯಾಗಿದ್ದಾರೆ. ಮಹಾರಾಷ್ಟ್ರ ಬಿಟ್ಟರೆ ದೆಹಲಿಯಲ್ಲಿ ಅತಿ ಹೆಚ್ಚು ಸೋಂಕು ವರದಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 1510.

ಒಂದು ಟ್ವೀಟ್‌; ರಾಜಸ್ಥಾನದಿಂದ ಮುಂಬೈಗೆ ರೈಲಲ್ಲಿ ಬಂತು ಒಂಟೆ ಹಾಲುಒಂದು ಟ್ವೀಟ್‌; ರಾಜಸ್ಥಾನದಿಂದ ಮುಂಬೈಗೆ ರೈಲಲ್ಲಿ ಬಂತು ಒಂಟೆ ಹಾಲು

ಇನ್ನು ಕೇಂದ್ರ ಆರೋಗ್ಯ ಇಲಾಖೆ ಏಪ್ರಿಲ್ 14ರ ಸಂಜೆ ನೀಡಿರುವ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 1463 ಹಪಸ ಕೊವಿಡ್ ಸೋಂಕಿತರು ಪತ್ತೆಯಾಗಿದ್ದು, 29 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,815ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವು 353.

English summary
Coronavirus: Over 300 positive cases have been reported in Mumbai's Worli so far. The total number of cases in Mumbai have crossed the 1,500 mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X