46,080 ಪ್ಲಾಸ್ಟಿಕ್ ತುಂಡುಗಳಲ್ಲಿ ಸಿದ್ಧಗೊಂಡ ಛತ್ರಪತಿ ಶಿವಾಜಿ ಭಾವಚಿತ್ರ
ಮುಂಬೈ, ಮಾರ್ಚ್.12: ಛತ್ರಪತಿ ಶಿವಾಜಿ ಜನ್ಮ ದಿನಾಚರಣೆಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಮುಂಬೈ ಮಹಾನಗರದಲ್ಲಿ ರಚಿಸಲಾದ ಶಿವಾಜಿಯ ಬೃಹತ್ ಭಾವಚಿತ್ರ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಫೆಬ್ರವರಿ.19ರಂದು ನಡೆಯುವ ಛತ್ರಪತಿ ಶಿವಾಜಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮುಂಬೈ ಮೂಲದ ಅನಿಮೇಷನ್ ಆರ್ಟಿಸ್ಟ್ ನಿತಿನ್ ದಿನೇಶ್ ಕಾಂಬ್ಳೆ 10X8 ಅಡಿ ಉದ್ದದ ಬೃಹತ್ ಭಾವಚಿತ್ರವನ್ನು ರಚಿಸಿದ್ದು ವಿಶ್ವ ದಾಖಲೆ ಬರೆದಿದ್ದಾರೆ.
ಆರು ಬಣ್ಣಗಳಿಂದ ಕೂಡಿದ 46,080 ಪ್ಲಾಸ್ಟಿಕ್ ತುಂಡುಗಳನ್ನು ಬಳಸಿಕೊಂಡು ನಿತಿನ್ ಕಾಂಬ್ಳೆ 10 ದಿನಗಳಲ್ಲೇ ಛತ್ರಪತಿ ಶಿವಾಜಿ ಮಹಾರಾಜ ಅವರ ಸುಂದರ ಭಾವಚಿತ್ರವನ್ನು ರಚಿಸಿದ್ದು, ಹೊಸ ದಾಖಲೆಯಾಗಿದೆ.

ಭಾರತದಲ್ಲಿ ರದ್ದುಗೊಂಡ ಪ್ಲಾಸ್ಟಿಕ್ ನಿಂದ ಸಾಧನೆ:
ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ. ಇದರ ನಡುವೆಯೂ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಯೆತೇಚ್ಛವಾಗಿ ಬಳಕೆಯಾಗುತ್ತಿದ್ದು, ಈ ಹಿನ್ನೆಲೆ ಉಪಯೋಗಿಸಿ ಎಸೆದ ಪ್ಲಾಸ್ಟಿಕ್ ನ್ನು ಬಳಸಿಕೊಂಡು ಪ್ರಯೋಗಾತ್ಮಕವಾಗಿ ಏನಾದರೂ ಮಾಡಬೇಕು ಎಂದುಕೊಂಡಿದ್ದೆನು. ಆಗ ನನಗೆ ಛತ್ರಪತಿ ಶಿವಾಜಿ ಅವರ ಭಾವಚಿತ್ರ ರಚನೆಯ ಐಡಿಯಾ ಹೊಳೆಯಿತು ಎಂದು ನಿತಿನ್ ದಿನೇಶ್ ಕಾಂಬ್ಳೆ ತಿಳಿಸಿದ್ದಾರೆ.
ವಿಶ್ವ ದಾಖಲೆಗಳ ಪಟ್ಟಿಗೆ ಸೇರಿದ ಶಿವಾಜಿ ಭಾವಚಿತ್ರ:
ಖಾಸಗಿ ಕಂಪನಿಯಲ್ಲಿ ಹೈಟೆಕ್ ಅನಿಮೇಷನ್ ಉದ್ಯೋಗಿ ಆಗಿರುವ ನಿತಿನ್ ದಿನವಿಡೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ಸಮಯದಲ್ಲಿ ಶಿವಾಜಿ ಭಾವಚಿತ್ರ ರಚನೆಯ ಮೇಲೆ ಲಕ್ಷ್ಯ ವಹಿಸುತ್ತಿದ್ದರು. ಇದಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಭುವನೇಶ್ವರ್ ನಿಂದ ತರಿಸಿಕೊಂಡಿದ್ದೆನು. ಈ ಪರಿಶ್ರಮಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ. ತಾವು ರಚಿಸಿದ ಶಿವಾಜಿ ಭಾವಚಿತ್ರವು ವಿಶ್ವ ದಾಖಲೆಗಳ ಪಟ್ಟಿಗೆ ಸೇರ್ಪಡೆಗೊಂಡಿದೆ ಎಂದು ನಿತಿನ್ ಸಂತಸ ವ್ಯಕ್ತಪಡಿಸುತ್ತಾರೆ.












Click it and Unblock the Notifications