"ಮೋದಿ ಅಲೆ ಹಾವು-ಮುಂಗುಸಿಗಷ್ಟೇ: ಹುಲಿಯನ್ನು ಪಳಗಿಸುವುದಕ್ಕಲ್ಲ!"
ಮುಂಬೈ, ಏಪ್ರಿಲ್ 10: "ಮೋದಿ ಅಲೆ ಯಾವತ್ತಿದ್ದರೂ ಕೇವಲ ಹಾವು-ಮುಂಗುಸಿಯನ್ನು ಮಾತ್ರ ಅಳಿಸಿಹಾಕಬಹುದು. ಆದರೆ ಅದಕ್ಕೆ ಎಂದಿಗೂ ಹುಲಿಯನ್ನು ಪಳಗಿಸುವುದಕ್ಕೆ ಸಾಧ್ಯವಿಲ್ಲ" ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.
ಇತ್ತೀಚೆಗೆ ಬಿಜೆಪಿ ಸಂಸ್ಥಾಪನಾ ದಿನದಂದು ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, 'ಪ್ರಧಾನಿ ಮೋದಿ ಅಲೆಯ ವಿರುದ್ಧ ಹೋರಾಡಲು ಹಾವು-ಮುಂಗುಸಿ, ನಾಯಿ-ಬೆಕ್ಕುಗಳೆಲ್ಲ ಒಂದಾಗಿವೆ' ಎಂದು ಕೇಂದ್ರದಲ್ಲಿ ಕಾಂಗ್ರೆಸ್ ನೇತ್ರತ್ವದಲ್ಲಿ ಎಲ್ಲ ವಿಪಕ್ಷಗಳೂ ಒಂದಾಗುತ್ತಿರುವ ಬಗ್ಗೆ ಟೀಕಿಸಿದ್ದರು.

ಈ ಮಾತಿಗೆ ಪ್ರತಿಕ್ರಿಯೆ ನೀಡೀದ ಶಿವಸೇನೆ, "ಬಿಜೆಪಿ ಇನ್ನೂ 2014 ರ ಚುನಾವಣೆಯ ಭ್ರಮೆಯಲ್ಲಿದೆ. 2019 ರಲ್ಲೂ ಅದೇ ಮುಂದುವರಿಯುತ್ತದೆ ಎಂದುಕೊಂಡಿದ್ದರೆ ಅದು ಸಂಪೂರ್ಣ ತಪ್ಪು. ಈಗಾಗಲೇ ಉತ್ತರ ಪ್ರದೇಶದ ಗೋರಕ್ಪುರ ಮತ್ತು ಫುಲ್ಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಅದು ಮುಂಬರುವ ಚುನಾವಣೆಗೆ ಕೈಗನ್ನಡಿ" ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.












Click it and Unblock the Notifications