ಮುಂಬೈ ಏರ್‌ಪೋರ್ಟ್‌ನಲ್ಲಿ 25 ವಿಮಾನಗಳ ಹಾರಾಟಕ್ಕೆ ಮಹಾ ಸರ್ಕಾರ ಅನುಮತಿ
ಮುಂಬೈ, ಮೇ 24: ಮುಂಬೈ ವಿಮಾನ ನಿಲ್ದಾಣಕ್ಕೆ 25 ವಿಮಾನಗಳ ಆಗಮನ ಮತ್ತು ಅಲ್ಲಿಂದ 25 ವಿಮಾನಗಳ ಹಾರಾಟಕ್ಕೆ ಮಹಾರಾಷ್ಟ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ತಮಿಳು ನಾಡು ಸರ್ಕಾರಿ ಮೇ 31ರವರೆಗೆ ತಮ್ಮ ರಾಜ್ಯಕ್ಕೆ ವಿಮಾನ ಹಾರಾಡುವುದು ಬೇಡ ಎಂದು ಕೇಂದ್ರವನ್ನು ಒತ್ತಾಯಿಸಿತ್ತು. ಅದೇ ಬೆನ್ನಲ್ಲೇ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳು ಕೂಡ ವಿಮಾನ ಹಾರಾಟದ ವಿರುದ್ಧ ದನಿ ಎತ್ತಿದ್ದವು.
ಇದೀಗ ಮಹಾರಾಷ್ಟ್ರ ಸರ್ಕಾರ ಯೂ-ಟರ್ನ್ ಹೊಡೆದಿದ್ದು, 25 ವಿಮಾನಗಳ ಆಗಮನಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಜೊತೆಗೆ ಮಾತುಕತೆ ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿಕ ಈ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರಕ್ಕೆ 25 ವಿಮಾನಗಳ ಆಗಮನ ಹಾಗೂ ಅಲ್ಲಿಂದ 25 ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದೆ. ಮೇ 25ರಿಂದ ದೇಶೀಯ ವಿಮಾನಗಳ ಸೇವೆ ಆರಂಭವಾಗಲಿದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ಸತತ ಎರಡು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ, ದೇಶೀಯ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿತ್ತು. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಮಾತ್ರ ವಿಶೇಷ ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು.












Click it and Unblock the Notifications