• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರನ್‌ವೇ ತಪ್ಪಿ ಹೊರಹೋದ ವಿಮಾನ: ತಪ್ಪಿದ ಭೀಕರ ಅಪಘಾತ

|

ಮುಂಬೈ, ಏಪ್ರಿಲ್ 29: ಸ್ಪೈಸ್‌ ಜೆಟ್ ವಿಮಾನವೊಂದು ಇಳಿಯುವ ಸಂದರ್ಭದಲ್ಲಿ ರನ್ ವೇ ತಪ್ಪಿ ಸಾಗಿದ ಘಟನೆ ಮಹಾರಾಷ್ಟ್ರದ ಶಿರಡಿ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ. ಅದೃಷ್ಟವಶಾತ್ ಅದರಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಎಂಬ ಮಾಹಿತಿ ಇನ್ನೂ ದೊರೆತಿಲ್ಲ. ಎಲ್ಲರೂ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿದ್ದಾರೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ಹೆಚ್ಚೂಕಡಿಮೆಯಾಗಿದ್ದರೆ ದೊಡ್ಡ ಅಪಘಾತ ಸಂಭವಿಸಿ ನೂರಾರು ಮಂದಿ ಅಪಾಯಕ್ಕೆ ಸಿಲುಕುವಂತಾಗುತ್ತಿತ್ತು.

ಸರ್ವರ್ ಸಮಸ್ಯೆ: ಜಗತ್ತಿನಾದ್ಯಂತ ಏರ್ ಇಂಡಿಯಾ ವಿಮಾನ 5 ಗಂಟೆ ವಿಳಂಬ

ವಿಮಾನವನ್ನು ರನ್‌ವೇಯಿಂದ ತೆಗೆಯುವ ಕಾರ್ಯ ನಡೆಯುತ್ತಿದ್ದು, ಅಲ್ಲಿಯವರೆಗೂ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಮುಂದುವರಿಯಲಿದೆ.

ಆದರೆ, ವಿಮಾನದೊಳಗಿದ್ದ ಪ್ರಯಾಣಿಕರು ಹೊರಗೆ ಬರಲಾಗದೆ ಹಲವು ಗಂಟೆಗಳ ಕಾಲ ಒಳಗೇ ಕೂರುವಂತಾಗಿತ್ತು.

ಉದ್ಯೋಗಕ್ಕೆ ಕರೆದು ಅವಮಾನ ಮಾಡಿತೇ ಸ್ಪೈಸ್ ಜೆಟ್?: ಪೈಲಟ್‌ಗಳ ಆರೋಪ

ಎಸ್‌ಜಿ 946 ಬೋಯಿಂಗ್ 737-800 ವಿಮಾನವು ದೆಹಲಿಯಿಂದ ಶಿರಡಿಗೆ ಬರುತ್ತಿತ್ತು. ರನ್‌ವೇನಲ್ಲಿ ಇಳಿದು ನಿಲ್ದಾಣದತ್ತ ಬರುವ ವೇಳೆಗೆ ಜಾರಿ ಸುಮಾರು 50 ಮೀಟರ್‌ಗಳಷ್ಟು ದೂರ ನೆಲದಲ್ಲಿ ಸಾಗಿದೆ. ಇದರಿಂದ ಶಿರಡಿ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೊರ ಹೋಗುವ ವಿಮಾನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಇದು ಚಿಕ್ಕ ವಿಮಾನ ನಿಲ್ದಾಣವಾಗಿರುವುದರಿಂದ ಸುಮಾರು 5-6 ಗಂಟೆ ಕಳೆದರೂ ರನ್‌ವೇ ತಪ್ಪಿದ ವಿಮಾನವನ್ನು ಹೊರಕ್ಕೆ ತೆಗೆಯಲು ಕಷ್ಟವಾಗಿತ್ತು.

English summary
Passengers stuck for hours in a SpiceJet filght after it was skid off from the runway in Maharashtra's Shirdi Ariport on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X