Get Updates
Get notified of breaking news, exclusive insights, and must-see stories!

ಮಹಾರಾಷ್ಟ್ರದಲ್ಲಿ ಬಿಜೆಪಿ-ಸೇನೆಯ ಮುಸುಕಿನ ಗುದ್ದಾಟ

ಕಾಲು ಶತಮಾನದ ಮೈತ್ರಿ ಬಂಧನದಿಂದ ಮುಕ್ತರಾಗಿ ಬಿಜೆಪಿ ಹಾಗೂ ಶಿವಸೇನೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತೀವೆ. ಇನ್ನೊಂದಡೆ ಹದಿನೈದು ವರ್ಷಗಳ ಸುದೀರ್ಘವಾದ ಆಡಳಿತದಿಂದ ಬಸವಳಿದಿರುವ ಕಾಂಗ್ರೆಸ್-ಎನ್ ಸಿಪಿ ಕೂಡ ಪ್ರತ್ಯೇಕವಾಗಿ ಚುನಾವಣಾ ಕಣಕ್ಕೆ ಧುಮುಕಿವೆ.

ಬದಲಾದ ಕಾಲಘಟ್ಟದಲ್ಲಿ ಬಾಳಾಠಾಕ್ರೆ ಸ್ಥಾನದಲ್ಲಿ ಉದ್ದವ್ ಠಾಕ್ರೆಯ ಮುಖವಿದೆ, ಇವರಿಗೆ ಮುಂದಾಲೋಚನೆ ಸ್ವಲ್ಪ ಕಮ್ಮಿ, ಮುಂಗೋಪಿ, ಎಲ್ಲವೂ ನೇರಾನೇರ. ಮೊದಲಿನಿಂದಲೂ ಈ ಜ್ಯೂನಿಯರ್ ಠಾಕ್ರೆಗೆ ಮೋದಿನ ಕಂಡರೆ ಅಷ್ಟಕಷ್ಟೆ.

ಇದಕ್ಕೆ ಕಾರಣ ಮುಂಬೈ ಮೇಲೆ ಗುಜರಾತಿಗಳಿಗಿರುವ ಪರೋಕ್ಷವಾದ ಹಿಡಿತ. ಮುಂಬೈ ಎಂಬ ಶ್ರೀಮಂತನಗರಿಯ ಆರ್ಥಿಕಶಕ್ತಿಯೇ ಗುಜರಾತಿ ಉದ್ಯಮಪತಿಗಳು. ಇಲ್ಲಿ ಗುಜರಾತಿಯರು ಧಣಿಗಳಾದರೆ ಅವರ ನೌಕರವರ್ಗ ಮರಾಠಿಗರು. ಈ ಗುಜರಾತಿ ಉದ್ಯಮಪತಿಗಳೆಲ್ಲಾ ಮೋದಿಯ ಬೆಂಬಲಿಗರಾದರೆ, ಅವರ ಮರಾಠಿ ನೌಕರವರ್ಗ ಶಿವಸೇನೆಯ ಕಟ್ಟಾ ಬೆಂಬಲಿಗರು. [ಮುರಿದು ಬಿದ್ದ ಬಿಜೆಪಿ-ಶಿವಸೇನಾ 'ಮಹಾ' ಮೈತ್ರಿ]

ಶಿವಸೇನೆ ಮುಂಬೈಯಲ್ಲಿ ನೆಲೆಕಂಡುಕೊಂಡಿದ್ದೆ ಈ ಗುಜರಾತಿಗಳು, ಉಡುಪಿ ಹೋಟೆಲ್ ಗಳು (ಕನ್ನಡಿಗರ), ಉತ್ತರಭಾರತೀಯರ ಮೇಲೆ ಹಗೆ ಸಾಧಿಸುವುದರ ಮೂಲಕವೇ. ಹೀಗಾಗಿಯೆ ಮೋದಿಯ ಹೆಸರು ಕೇಳಿದರೆ ಉದ್ದವ್‍ಗೆ ಉರಿಯುವುದು.

Maharashtra polls: Modi

ಬಿಜೆಪಿಯ ಸಂಭಾವಿತ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಗೋಪಿನಾಥ್ ಮುಂಡೆ ಅಕಾಲಿಕ ನಿಧನದ ನಂತರ ನಾಯಕತ್ವದ ಶೂನ್ಯತೆ ಬಿಜೆಪಿಯನ್ನು ಭಾದಿಸಿತ್ತು. ಇದನ್ನು ಸರಿಯಾಗಿ ಗ್ರಹಿಸಿದ್ದ ಉದ್ದವ್‍ಠಾಕ್ರೆ ನಾನೇ ಮುಖ್ಯಮಂತ್ರಿ ಎಂದು ಸ್ವಯಂಘೋಷಿಸಿಕೊಂಡರು. ಬಿಜೆಪಿಗೆ ಹೆಚ್ಚು ಸ್ಥಾನ ನೀಡಬಾರದು. ಇದರಿಂದ ಅದು ಹೆಚ್ಚಿನ ಸ್ಥಾನಗಳು ಪಡೆದರೆ ಕಷ್ಟ ಅನ್ನೋ ತೀರ್ಮಾನಕ್ಕೆ ಶಿವಸೇನೆ ಬರಲು ಹಿಂದಿನ ಚುನಾವಣಾ ಫಲಿಶಾಂತಗಳೇ ಕಾರಣ.

ಶಿವಸೇನೆ ದೂರಲೋಚನೆ: 2009ರಲ್ಲಿ 169 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಅದು ಗೆದ್ದಿದ್ದು ಕೇವಲ 46ರಲ್ಲಿ ಮಾತ್ರ, ಅದೇ 119ಸ್ಪರ್ಧಿಸಿದ್ದ ಬಿಜೆಪಿ 48ರಲ್ಲಿ ಗೆದ್ದಿತ್ತು. ಹೀಗಾಗಿಯೆ ಒಟ್ಟು 288 ಸ್ಥಾನಗಳಲ್ಲಿರುವ ವಿಧಾನಸಭೆಯಲ್ಲಿ ತಾನು ಕನಿಷ್ಟ 155ಸ್ಥಾನಗಳಲ್ಲಿ ಸ್ಪರ್ಧಿಸಿ ಬಿಜೆಪಿಗೆ ಹಿಂದಿನ ಸ್ಥಾನಗಳಷ್ಟೆ ನೀಡಿ ಉಳಿದ್ದನ್ನು ಸಣ್ಣ-ಪುಟ್ಟ ಮಿತ್ರಪಕ್ಷಗಳಿಗೆ ಬಿಟ್ಟು ಕೊಡುವ ಹಠಕ್ಕೆ ಶಿವಸೇನೆ ಬಿದ್ದಿದ್ದು.

ಮೈತ್ರಿ ಕಾರಣದಿಂದ ಆಡಳಿತವಿರೋಧಿ ಮತಗಳು ಹೆಚ್ಚು ತನ್ನಡೆಗೆ ಸೆಳೆದಾಗ ಕನಿಷ್ಟ 100 ಸ್ಥಾನಗಳನ್ನು ತಾನು ಗೆದ್ದು 119ಸ್ಥಾನದಲ್ಲಿ ಸ್ಪರ್ಧಿಸುವ ಬಿಜೆಪಿಯನ್ನು 70 ರಿಂದ 80ಕ್ಕೆ ಸೀಮಿತಗೊಳಿಸಬಹುದು. ಆಗ ಹಿರಿಯಣ್ಣನಾಗಿ ತಾನೇ ಮಹಾರಾಷ್ಟ್ರದ ಚುಕ್ಕಾಣಿ ಹಿಡಿಯುವ ದೂರಲೋಚನೆ ಶಿವಸೇನೆ ನಾಯಕತ್ವದಾಗಿತ್ತು.

ಗೋಪಿನಾಥ್ ಮುಂಡೆ ಜೀವಿಸಿದ್ದರೆ ಯಾವುದೇ ಸಮಸ್ಯೆಯಿಲ್ಲದೆ ನೇರವಾಗಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿತ್ತು ಆದರೆ ಈಗ ಅಂತಹ ವರ್ಚಸ್ವಿ ನಾಯಕತ್ವದ ಕೊರತೆ ಬಿಜೆಪಿಯನ್ನು ಕಾಡುತ್ತಿದೆ. ನಿತನ್ ಗಡ್ಕರಿ ಕೇಂದ್ರದಲ್ಲಿನ ಸ್ಥಾನಮಾನದಿಂದ ಸಂತೃಪ್ತರಾಗಿದ್ದು ಅಲ್ಲಿಂದ ಹೊರಬರುವ ಮನಸ್ಥಿತಿಯಲ್ಲಿ ಅವರಿಲ್ಲ. ರಾಜ್ಯ ಬಿಜೆಪಿಯ ಅಧ್ಯಕ್ಷ ದೇವೇಂದ್ರ ಫಡ್ನೀಸ್ ರಾಜ್ಯಮಟ್ಟದಲ್ಲಿ ಬಲವಾದ ನಾಯಕನಂತೂ ಅಲ್ಲವೇ ಅಲ್ಲ.

ಮುಂಡೆ ಪುತ್ರಿ ಪಂಕಜ ಮುಂಡೆ ಚುನಾವಣೆ ಫೋಷಣೆಯಾಗುವುದಕ್ಕೆ ಮೊದಲೇ ಸಂಘರ್ಷಯಾತ್ರೆಯೊಂದನ್ನು ರಾಜ್ಯಾದ್ಯಂತ ನಡೆಸುವ ಮೂಲಕ ತಾನು ತನ್ನ ತಂದೆಯ ಸ್ಥಾನಕ್ಕೆ ಆರ್ಹಳು ಅಂತೇಳಿ ಬಿಂಬಿಸಿಕೊಳ್ಳುವ ಪ್ರಯತ್ನ ಕೂಡ ನಡೆಸಿದ್ದಾಳೆ. ಆದರೆ ಇಷ್ಟು ಹೊರತಾಗಿ ಬಿಜೆಪಿಗೆ ಗಟ್ಟಿ ನಾಯಕತ್ವದ ಕೊರತೆಯಂತೂ ಇದ್ದೇ ಇದೆ.

Maharashta Polls : Modi

ಈಗಲೂ ಮೋದಿಯೆ ಬಂಡವಾಳ : ಬಿಜೆಪಿ ದಿನಬೆಳೆದಂತೆ ತನ್ನ ನೆಲೆ ಮಹಾರಾಷ್ಟ್ರದಲ್ಲಿ ವಿಸ್ತರಿಸಿಕೊಳ್ಳುತ್ತಿದ್ದರೂ ಅದು ಪೂರ್ಣಬಹುಮತವನ್ನು ಪಡೆಯುವಷ್ಟು ಮಟ್ಟಿಗೆ ಗಟ್ಟಿ ನೆಲೆಯನ್ನು ಇನ್ನು ಹೊಂದಿಲ್ಲ. ಹೀಗಾಗಿ ಇದಕ್ಕೆ ಈಗಲೂ ಮೋದಿಯೆ ಬಂಡವಾಳ. ಮೋದಿ ಭಾವಚಿತ್ರವೆ ಬಿಜೆಪಿಯ ಮುಖಚಿತ್ರ.

ಆರಂಭದಲ್ಲಿ ಎನ್ಡಿಎಯಿಂದ ಹೊರಬರುವ ಮಾತುಗಳನ್ನಾಡಿದ್ದ ಸೇನೆ ಅದರಿಂದ ಹಿಂದಕ್ಕೆ ಸರಿಯಲು ಕಾರಣ ಕೂಡ ಇದೇ. ಕಳೆದ ಇಪ್ಪತ್ತುವರ್ಷಗಳಿಂದ ಮುಂಬೈ ಮಹಾನಗರಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಸೇನೆಗೆ ಬಿಜೆಪಿ ಕೈಕೊಟ್ಟರೆ ಕೈಯಲ್ಲಿರೋ 31,000 ಸಾವಿರ ಕೋಟಿಗಳ ಬಜೆಟ್ ಹೊಂದಿರುವ ಮುಂಬೈ ಕೂಡ ಕೈಬಿಟ್ಟು ಹೋಗುವುದೆಂಬ ಭಯ.[ಚುನಾವಣೆಗೆ ಸಿದ್ದು, ಖರ್ಗೆ ಸ್ಟಾರ್ ಪ್ರಚಾರಕರು]

ಹೆಚ್ಚಿನ ಕಾಲ ಅಧಿಕಾರವಿಲ್ಲದೇ ಹೋದರೆ ಅಸ್ತಿತ್ವಕ್ಕೆ ಅಪಾಯ ತಪ್ಪಿದಲ್ಲ ಎಂಬ ಅರಿವು ಕೂಡ ಅದಕ್ಕಿದೆ. ಇನ್ನೊಂದಡೆ ಬಿಜೆಪಿ ರಾಜುಶೆಟ್ಟಿ ನೇತೃತ್ವದ ಸ್ವಾಭಿಮಾನಿ ಶೇತ್ಕಾರಿ ಸಂಘಟನ್ ಪಾರ್ಟಿ, ರಾಮದಾಸ್ ಅಠಾವುಳೆ ನೇತೃತ್ವದ ಆರ್ ಪಿಎ ಜೊತೆ ಸೇರಿ ಮೈತ್ರಿಕೂಟ ರಚಿಸಿಕೊಂಡು ಚುನಾವಣೆ ಕಣಕ್ಕಿಳಿದ್ದು 110 ರಿಂದ 120 ಸ್ಥಾನ ಗೆಲ್ಲುವ ವಿಶ್ವಾಸಯೊಂದಿದೆ. ಎನ್ ಸಿಪಿ ಇಲ್ಲ ಎಂಎನ್‍ಎಸ್ ಜೊತೆ ಸೇರಿ ಅಧಿಕಾರಕ್ಕೆರುವ ಅವಕಾಶವನ್ನು ಮುಕ್ತವಾಗಿರಿಸಿಕೊಂಡಿದೆ. ಬರುವ 19ರ ಭಾನುವಾರದ ಫಲಿತಾಂಶ ಯಾವ ಪಕ್ಷದ ಪಾಲಿಗೆ ದೀಪಾವಳಿಯ ಬೆಳಕಾಗುವುದು ಅಂತ ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+