ಮಹಾರಾಷ್ಟ್ರದಲ್ಲಿ ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆ ಜೊತೆ 26 ಶಾಸಕರು
ಮುಂಬೈ, ಜೂನ್ 21: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ರಾಜಕೀಯ ಮೇಲಾಟಗಳು ಶುರುವಾಗಿದೆ. ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಏಕನಾಥ್ ಶಿಂಧೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಸರ್ಕಾರದ ವಿರುದ್ಧ ಸಿಡಿದೆದ್ದಿರುವ ನಗರಾಭಿವೃದ್ಧಿ ಸಚಿವ ಹಾಗೂ ಶಿವಸೇನೆ ಶಾಸಕ ಏಕನಾಥ್ ಶಿಂಧೆ ಜೊತೆಗೆ ಭಾರೀ ಶಾಸಕರ ದಂಡೇ ನಿಂತುಕೊಳ್ಳುವ ಲಕ್ಷಣ ಗೋಚರಿಸುತ್ತಿವೆ. ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಏಕನಾಥ್ ಶಿಂಧೆ ಸುದ್ದಿಗೋಷ್ಠಿ ಮೇಲೆ ಎಲ್ಲರ ಲಕ್ಷ್ಯ ನೆಟ್ಟಿದೆ.
ಸೋಮವಾರ ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಮತ್ತು 10 ರಿಂದ 12 ಶಿವಸೇನೆ ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬೆಳವಣಿಗೆ ಕುರಿತು ಸ್ವತಃ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಲಿದ್ದಾರೆ.

ಇನ್ನೊಂದು ಮಗ್ಗಲಿನಲ್ಲಿ ಬಂಡಾಯ ಎದ್ದಿರುವ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಜೊತೆಗೆ 26 ಶಾಸಕರು ರೆಸಾರ್ಟ್ ರಾಜಕಾರಣ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಏಕನಾಥ್ ಶಿಂಧೆ ಜೊತೆಗೆ ನಿಂತಿರುವ ಆ 26 ಶಾಸಕರು ಯಾರು ಎಂಬ ಪಟ್ಟಿಯನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.
ಬಂಡಾಯ ಬಾವುಟ ಹಾರಿಸಿದ ಏಕನಾಥ್ ಶಿಂಧೆಗೆ 26 ಶಾಸಕರ ಸಾಥ್:
* ಏಕನಾಶ್ ಶಿಂಧೆ
* ತಾನಾಜಿ ಸಾವಂತ್
* ಬಾಲಾಜಿ ಕಲ್ಯಾಣ್ಕರ್
* ಪ್ರಕಾಶ್ ಆನಂದರಾವ್ ಅಬಿತ್ಕರ್
* ಅಬ್ದುಲ್ ಸತ್ತಾರ್
* ಸಂಜಯ್ ಪಾಂಡುರಂಗ
* ಶ್ರೀನಿವಾಸ್ ಒನೆಗಾ
* ಮಹೇಶ್ ಶಿಂಧೆ
* ಸಂಜಯ್ ರೈಮುಲ್ಕರ್
* ವಿಶ್ವನಾಥ್ ಭೋರ್
* ಸಂದೀಪನ್ ರಾವ್ ಭೂಮ್ರೆ
* ರಮೇಶ್ ಬೋರ್ನಾರೆ
* ಅನಿಲ್ ಬಾಬರ್
* ಚಿನ್ಮನರಾವ್ ಪಾಟೀಲ್
* ಶಂಭುರಾಜ್ ದೇಸಾಯಿ
* ಮಹೇಂದ್ರ ದಳವಿ
* ಶಹಾಜಿ ಪಾಟೀಲ್
* ಪ್ರದೀಪ್ ಜೈಸ್ವಾಲ್
* ಮಹೇಂದ್ರ ಥೋರ್ವೆ
* ಕಿಶೋರ್ ಪಾಟೀಲ್
* ಜ್ಞಾನರಾಜ್ ಚೌಗುಲೆ
* ಸಂಜಯ್ ಗಾಯಕವಾಡ್
* ಸುಹಾಸ್ ಕಾಂಡೆ












Click it and Unblock the Notifications