ಭಾರಿ ಮಳೆಯಿಂದ ಗೋಡೆ ಕುಸಿತ, 11 ಮಂದಿ ದುರ್ಮರಣ
ಮುಂಬೈ, ಜುಲೈ 18: ಮಹಾರಾಷ್ಟ್ರದಲ್ಲೆಡೆ ಭಾರಿ ಮಳೆ ಎಲ್ಲೆಡೆ ಮುಂದುವರೆದಿದೆ. ಭಾರಿ ಮಳೆ, ಗಾಳಿಯಿಂದ ಭೂ ಕುಸಿತ ಉಂಟಾಗಿ ಗೋಡೆ ಕುಸಿದಿದ್ದು, ಗುಡಿಸಲುಗಳ ಮೇಲೆ ಬಿದ್ದಿದೆ. ಚೆಂಬೂರ್ ಪ್ರದೇಶಕ್ಕೆ ಸೇರಿದ ಭಾರತ್ ನಗರದಲ್ಲಿ 15 ಶವಗಳು ಪತ್ತೆಯಾಗಿದೆ.
ಭಾರಿ ಮಳೆಯಿಂದ ರಕ್ಷಣಾ ಕಾರ್ಯ ವಿಳಂಬವಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್ ಡಿ ಆರ್ ಎಫ್) ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಪ್ರಯಾಸಪಟ್ಟು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.
ಒಟ್ಟು 5 ಗುಡಿಸಲುಗಳ ಮೇಲೆ ಗೋಡೆ ಕುಸಿದು ಬಿದ್ದಿದೆ. ಸುಮಾರು 8ಕ್ಕೂ ಅಧಿಕ ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.

ಹವಾಮಾನ ಮುನ್ಸೂಚನೆ: ಕೊಂಕಣ, ಗೋವಾ, ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ, ಕರಾವಳಿ, ಕರ್ನಾಟಕದ ದಕ್ಷಿಣ ಒಳನಾಡು, ಕೇರಳ ಹಾಗೂ ಮಾಹೆ ಮುಂತಾದೆಡೆಗಳಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದೆ ಎಂದು ವರದಿ ಬಂದಿದೆ.
ಜುಲೈ 21ರ ತನಕ ಇದೇ ರೀತಿ ಹವಾಮಾನ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಮಹಾರಾಷ್ಟ್ರದಲ್ಲಿ ಜುಲೈ 20, 21ರಂದು ಭಾರಿ ನಿರೀಕ್ಷೆ ಹೊಂದಲಾಗಿದೆ.












Click it and Unblock the Notifications