ಬಾಡಿಗೆ ವಿನಾಯಿತಿ ಘೋಷಿಸಿದ ಮಹಾರಾಷ್ಟ್ರ ಸರ್ಕಾರ
ಮುಂಬೈ, ಏಪ್ರಿಲ್ 17: ಲಾಕ್‌ಡೌನ್ ವ್ಯವಸ್ಥೆ ಬಡ ಜನರು ಮತ್ತು ಮಧ್ಯಮವರ್ಗದವರ ದೈನಂದಿನ ಬದುಕಿನ ಮೇಲೆ ಭಾರಿ ಪರಿಣಾಮ ಬೀರಿದ್ದು, ಇಎಂಐ, ಬಡ್ಡಿ, ಮನೆ ಬಾಡಿಗೆ, ವಿದ್ಯುತ್ ಬಿಲ್ ಹೀಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದೆ.
ಇದೀಗ, ಮಹಾರಾಷ್ಟ್ರ ಸರ್ಕಾರ ಬಾಡಿಗೆಯಿಂದ ವಿನಾಯಿತಿ ಘೋಷಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಮೂರು ತಿಂಗಳ ಕಾಲ ಬಾಡಿಗೆ ಕೇಳಬಾರದು ಎಂದು ಮಹಾರಾಷ್ಟ್ರ ವಸತಿ ಇಲಾಖೆ ಆದೇಶಿಸಿದೆ.
ಬಾಡಿಗೆ ಕೊಡಿ ಎಂದು ಪೀಡಿಸುವುದು ಮತ್ತು ಬಾಡಿಗೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಖಾಲಿ ಮಾಡಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ವಸತಿ ಇಲಾಖೆ ಸೂಚಿಸಿದೆ.

ಅಂದ್ಹಾಗೆ, ಇದೇ ವಿಚಾರಕ್ಕೆ ಸಂಬಂದಪಟ್ಟಂತೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರಕ್ಕೆ ದೇಶವ್ಯಾಪಿ ಜಾರಿಗೆ ತರುವಂತೆ ಬಾಡಿಗೆಯಿಂದ ವಿನಾಯಿತಿ ಘೋಷಿಸಿ ಎಂದು ಒತ್ತಾಯಿಸಿದ್ದರು.
Maharashtra State Housing Department issues instructions to landlords to postpone rent collection by at least 3 months. During this period, no tenant should be evicted from the rented house due to non-payment of rent: Maharashtra Chief Minister's Office pic.twitter.com/ItptwgAOWu
— ANI (@ANI) April 17, 2020
ಕರ್ನಾಟಕದಲ್ಲೂ ಬಾಡಿಗೆದಾದರಿಗೆ ಸರ್ಕಾರ ಅಭಯ ನೀಡಿದೆ. ಮನೆ ಮಾಲೀಕರು ಬಲವಂತವಾಗಿ ಮನೆ ಬಾಡಿಗೆ ಕೇಳಬಾರದು. ದೌರ್ಜನ್ಯ ಮಾಡಿದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.












Click it and Unblock the Notifications