ರಾಜ್ಯಪಾಲ ಕೊಶ್ಯಾರಿ ಕೊಲ್ಹಾಪುರ್ ಚಪ್ಪಲಿ ರುಚಿ ನೋಡುವ ಸಮಯ ಎಂದ ಠಾಕ್ರೆ
ಮುಂಬೈ, ಜುಲೈ 30: ಗುಜರಾತಿಗಳು, ರಾಜಸ್ಥಾನಿಗಳನ್ನು ಬೆಂಬಲಿಸಿ ನೀಡಿರುವ ಹೇಳಿಕೆ ಮೂಲಕ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮರಾಠಿಗರನ್ನು ಅವಮಾನಿಸಿದ್ದಾರೆ ಎಂದು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರು ತಮ್ಮ ಹೇಳಿಕೆ ಮೂಲಕ ಎಲ್ಲಾ ಮಿತಿಗಳನ್ನು ಮೀರಿದ್ದಾರೆ ಎಂದರು. "ರಾಜ್ಯಪಾಲ ಹುದ್ದೆಯಲ್ಲಿ ಇರುವವರನ್ನು ಅವಮಾನಿಸಲು ನಾನು ಬಯಸುವುದಿಲ್ಲ. ನಾನು ಕುರ್ಚಿಯನ್ನು ಗೌರವಿಸುತ್ತೇನೆ, ಆದರೆ ಭಗತ್ ಸಿಂಗ್ ಕೋಶ್ಯಾರಿ ಮರಾಠಿಗರನ್ನು ಅವಮಾನಿಸಿದ್ದಾರೆ. ಈ ಬಗ್ಗೆ ಜನರಲ್ಲಿ ಕೋಪವಿದೆ. ರಾಜ್ಯಪಾಲರು ಸಮಾಜವನ್ನು ಧರ್ಮದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಉದ್ಧವ್ ಠಾಕ್ರೆ ದೂಷಿಸಿದರು.
ದೇಶದ ರಾಷ್ಟ್ರಪತಿಗಳ ಸಂದೇಶಕಾರರಾಗಿ ರಾಜ್ಯಪಾಲರನ್ನು ನೋಡಲಾಗುತ್ತದೆ. ರಾಷ್ಟ್ರಪತಿಗಳ ಮಾತುಗಳನ್ನು ರಾಷ್ಟ್ರಕ್ಕೆ ತಲುಪಿಸುವ ಹೊಣೆಯನ್ನು ರಾಜ್ಯಪಾಲರೇ ವಹಿಸಿಕೊಂಡಿರುತ್ತಾರೆ. ಇಂಥ ಸ್ಥಾನದಲ್ಲಿದ್ದುಕೊಂಡು ಅವರೇ ತಪ್ಪು ಮಾಡಿದರೆ ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುವುದು," ಎಂದು ಪ್ರಶ್ನೆ ಮಾಡಿದ್ದಾರೆ.

ಕೊಲ್ಹಾಪುರಿ ಚಪ್ಪಲಿ ನೋಡಬೇಕಾದ ಸಮಯ ಬಂದಿದೆ:
"ಕಳೆದ ಎರಡೂವರೆ ವರ್ಷಗಳಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ ಭಗತ್ ಸಿಂಗ್ ಕೊಶ್ಯಾರಿ ರಾಜ್ಯದ ಎಲ್ಲ ವೈಭೋಗವನ್ನೂ ಆನಂದಿಸಿದ್ದಾರೆ. ಮಹಾರಾಷ್ಟ್ರದ ಪಾಕ ಪದ್ಧತಿಯನ್ನು ಆನಂದಿಸಿದ್ದಾರೆ. ಈಗ ಅವರು ಕೊಲ್ಹಾಪುರದ ಚಪ್ಪಲಿಯನ್ನು ನೋಡಬೇಕಾದ ಸಮಯ ಬಂದಿದೆ," ಎಂದು ಠಾಕ್ರೆ ಟೀಕಿಸಿದ್ದಾರೆ.
ರಾಜ್ಯಪಾಲ ಕೊಶ್ಯಾರಿ ನೀಡಿದ ಹೇಳಿಕೆಯೇನು?:
ಮಹಾರಾಷ್ಟ್ರದಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ತೆಗೆೆದು ಹಾಕಿದರೆ, ಮುಂಬೈನಲ್ಲಿ ಹಣವೇ ಉಳಿಯುವುದಿಲ್ಲ. ದೇಶದ ಆರ್ಥಿಕತೆಯ ರಾಜಧಾನಿ ಎಂಬ ಪದವಿಯೂ ಮುಂಬೈನ ಪಾಲಿಗೆ ಉಳಿಯುವುದಿಲ್ಲ ಎಂದು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಹೇಳಿಕೆ ನೀಡಿದ್ದರು.
ಮುಂಬೈನ ಪಶ್ಚಿಮ ಉಪನಗರವಾದ ಅಂಧೇರಿಯಲ್ಲಿ ಚೌಕ್‌ಗೆ ನಾಮಕರಣ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಶ್ಯಾರಿ, "ಮಹಾರಾಷ್ಟ್ರದಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ತೆಗೆದುಹಾಕಿದರೆ, ವಿಶೇಷವಾಗಿ ಮುಂಬೈ ಮತ್ತು ಥಾಣೆಯಲ್ಲಿರುವ ನಿಮ್ಮ ಬಳಿ ಹಣವಿರುವುದಿಲ್ಲ. ಮುಂಬೈ ಆರ್ಥಿಕ ರಾಜಧಾನಿಯಾಗುವುದಿಲ್ಲ ಎಂದು ನಾನು ಇಲ್ಲಿನ ಜನರಿಗೆ ಹೇಳುತ್ತೇನೆ," ಎಂದು ಹೇಳಿದ್ದರು.












Click it and Unblock the Notifications