ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಕೊವಿಡ್ 19 ನಿರ್ಬಂಧ ಸಡಿಲಿಕೆ, ಯಾವುದಕ್ಕೆಲ್ಲಾ ಅವಕಾಶ

|
Google Oneindia Kannada News

ಮುಂಬೈ, ಡಿಸೆಂಬರ್ 23: ಮಹಾರಾಷ್ಟ್ರ ಸರ್ಕಾರವು ಕೊವಿಡ್ 19 ನಿರ್ಬಂಧವನ್ನು ಸಡಿಲಗೊಳಿಸಿದೆ. ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಉಳಿದೆಲ್ಲಾ ಕಡೆ ಇದ್ದ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ.

ನೀರಿನ ಆಟಗಳು, ನೌಕಾ ವಿಹಾರ, ಹೊರಾಂಗಣ ಆಟಗಳಿಗೆ ಅವಕಾಶ ನೀಡಲಾಗಿದೆ. ಹಾಗೆಯೇ ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಪ್ರವಾಸಿ ತಾಣಗಳನ್ನು ತೆರೆಯಲಾಗಿದೆ. ಮಹಾರಾಷ್ಟ್ರದಲ್ಲಿ 3106 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 19,02,458 ಪ್ರಕರಣಗಳಿವೆ. 75 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಸಂಖ್ಯೆ 48,876ಕ್ಕೆ ಏರಿಕೆಯಾಗಿದೆ.

ಹೊಸ ವರ್ಷ, ಕ್ರಿಸ್‌ಮಸ್‌ ಆಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯಗಳ ಪಟ್ಟಿಹೊಸ ವರ್ಷ, ಕ್ರಿಸ್‌ಮಸ್‌ ಆಚರಣೆಗೆ ನಿರ್ಬಂಧ ವಿಧಿಸಿರುವ ರಾಜ್ಯಗಳ ಪಟ್ಟಿ

ಮಹಾರಾಷ್ಟ್ರದಲ್ಲಿ ಜನವರಿ 5ರವರೆಗೆ ರಾತ್ರಿ 11ರಿಂದ ಬೆಳಗ್ಗೆ 6ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ.ಇನ್ನು ಈ ಹೊಸ ರೂಪಾಂತರಿತ ಕೊರೋನಾ ವೈರಸ್ ನ ಪ್ರಸರಣ ಹಾಲಿ ವೈರಸ್ ಗಿಂತ ಶೇ.70ರಷ್ಟು ಹೆಚ್ಚಿದೆ ಎಂಬ ತಜ್ಞರ ಎಚ್ಚರಿಕೆ ವಿಶ್ವಾದ್ಯಂತ ಭಾರಿ ಆತಂಕ ಸೃಷ್ಟಿಸಿದೆ. ಅಲ್ಲದೆ ಹಾಲಿ ಬಳಕೆಗೆ ಸಿದ್ಧವಾಗಿರುವ ಲಸಿಕೆಗಳು ನಿರುಪಯೋಗವಾಗಲಿವೆಯೇ ಎಂಬ ಆತಂಕ ಕೂಡ ಕಾಡತೊಡಗಿದೆ.

 Maharashtra COVID-19 Restrictions Relaxed

ಹೀಗಾಗಿ ಹಾಲಿ ಬಳಕೆಗೆ ಸಿದ್ಧವಾಗಿರುವ ಲಸಿಕೆಗಳು ಈ ಹೊಸ ರೂಪಾಂತರಿತ ವೈರಸ್ ಮೇಲೆ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ಪರೀಕ್ಷೆ ಮಾಡಬೇಕಿದ್ದು, ಈ ಸಂಬಂಧ ಇದೀಗ ಫೈಜರ್ ಮತ್ತು ಮಾಡೆರ್ನಾ ಸಂಸ್ಥೆಗಳು ಈ ವೈರಸ್ ಮೇಲೆ ತಮ್ಮ ಲಸಿಕೆಯ ಪ್ರಯೋಗಕ್ಕೆ ಮುಂದಾಗಿವೆ.

ಇಂಗ್ಲೆಂಡ್‌ನಲ್ಲಿ ಪತ್ತೆ ಆಗಿರುವ ಕೊರೊನಾ ವೈರಸ್‌ನ ಹೊಸ ಪ್ರಬೇಧ ಇಡೀ ಜಗತ್ತನ್ನು ಮತ್ತೆ ಆತಂಕಕ್ಕೆ ನೂಕಿದೆ. ಯು.ಕೆ. ಡೆನ್ಮಾರ್ಕ್, ನೆದರ್ ಲ್ಯಾಂಡ್ ಮೊದಲಾದ ಐರೋಪ್ಯ ರಾಷ್ಟ್ರಗಳಲ್ಲಿ ಹೊಸ ಬಗೆಯ ವೈರಾಣು ಹರಡಿರುವುದು ಪತ್ತೆಯಾಗಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

ಹೀಗಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿಯಿಂದ ಇಂಗ್ಲೆಂಡ್‌ನಿಂದ ಬರುವ ಎಲ್ಲ ವಿಮಾನಗಳನ್ನು ನಿರ್ಬಂಧಿಸಲಾಗಿದೆ. ಇಂಗ್ಲೆಂಡ್‌ನಿಂದ ನಿನ್ನೆ ರಾಜ್ಯಕ್ಕೆ ಒಟ್ಟು 537 ಜನರು ರಾಜ್ಯಕ್ಕೆ ಬಂದಿದ್ದರು.

English summary
The Maharashtra government on Wednesday relaxed COVID-19 related restrictions in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X