ವಿಡಿಯೋ: ಅಧಿಕಾರಿಯ ಮೇಲೆ ಕೊಳಚೆ ಸುರಿದ ಕಾಂಗ್ರೆಸ್ ಶಾಸಕ

ಮುಂಬೈ, ಜುಲೈ 04: ಶಾಸಕರು, ಜನಪ್ರತಿನಿಧಿಗಳು ತಮ್ಮ ಅಧಿಕಾರದ ಮದವನ್ನು ಅಧಿಕಾರಿಗಳ ವಿರುದ್ಧ ತೋರುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚು ವರದಿಯಾಗುತ್ತಿದೆ.

ಕೆಲವು ದಿನದ ಹಿಂದಷ್ಟೆ ಬಿಜೆಪಿ ಶಾಸಕನೊಬ್ಬ ಅಧಿಕಾರಿಯೊಬ್ಬರ ಮೇಲೆ ಬ್ಯಾಟಿನಿಂದ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದು ಭಾರಿ ಸುದ್ದಿಯಾಗಿತ್ತು, ಆ ನಂತರ ತೆಲಂಗಾಣದಲ್ಲಿ ಮಹಿಳಾ ಅರಣ್ಯ ಅಧಿಕಾರಿಯ ಮೇಲೆ ಜನಪ್ರತಿನಿಧಿಯೊಬ್ಬ ದೊಣ್ಣೆ ಬೀಸಿದ್ದ, ಈಗ ಮಹಾರಾಷ್ಟ್ರ ಶಾಸಕನೊಬ್ಬ ಇದೇ ರೌಡಿಸಂ ಹಾದಿ ತುಳಿದಿದ್ದಾನೆ.

ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಿತಿಶ್ ರಾಣೆ ಇಂದು ಹೆದ್ದಾರಿ ಎಂಜಿನಿಯರ್ ಒಬ್ಬರ ಮೇಲೆ ನಡುರಸ್ತೆಯಲ್ಲಿಯೇ ಕೆಸರು, ಮಣ್ಣು ಎರಚಿದ್ದಾರೆ. ಶಾಸಕರ ಬೆಂಬಲಿಗರು ಅಧಿಕಾರಿಯನ್ನು ಸೇತುವೆಗೆ ಹಗ್ಗದಿಂದ ಕಟ್ಟಿದ್ದಾರೆ, ಶಾಸಕರು ಸಹ ಎಂಜಿನಿಯರ್ ಅನ್ನು ಎಳೆದಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.

Maharashtra Congress MLA pour mud on High way Engineer

ಹೆದ್ದಾರಿ ಎಂಜಿನಿಯರ್ ಪ್ರಕಾಶ್ ಶೆಡೆಕರ್ ಅವರ ಮೇಲೆ ಶಾಸಕ ನಿತಿಶ್ ರಾಣೆ ಮತ್ತು ಅವರ ಬೆಂಬಲಿಗರು ಗೂಂಡಾಗಿರಿ ನಡೆಸಿದ್ದು, ವಿಡಿಯೋ ವೈರಲ್ ಆಗಿದೆ.

ಶಾಸಕ ನಿತಿಶ್ ರಾಣೆ ಇಂದು ಬೆಳಿಗ್ಗೆ ಮಹಾರಾಷ್ಟ್ರ-ಗೋವಾ ಹೆದ್ದಾರಿಯ ಕನಕವಲ್ಲಿ ಸೇತುವೆ ಹಾಗೂ ರಸ್ತೆ ಗುಂಡಿ ಪರಿಶೀಲನೆಗೆಂದು ಬಂದಾಗ, ರಸ್ತೆ ರಿಪೇರಿ ಆಗದ್ದನ್ನು ಕಂಡು ಸಿಟ್ಟಾಗಿ ಎಂಜಿನಿಯರ್ ಪ್ರಕಾಶ್ ಶೆಡೆಕರ್ ಅವರ ಮೇಲೆ ಹರಿಹಾಯ್ದು ಅವರನ್ನು ತಳ್ಳಾಡಿದ್ದಾರೆ.

ಶಾಸಕರು ಎಂಜಿನಿಯರ್ ಮೇಲೆ ಸಿಟ್ಟಾದ ತಕ್ಷಣವೇ ಅವರ ಬೆಂಬಲಿಗರು ಮೊದಲೇ ತುಂಬಿಸಿ ಇರಿಸಿದ್ದ ಕೊಳಚೆ, ಮಣ್ಣನ್ನು ಎಂಜಿನಿಯರ್ ಅವರ ಮೇಲೆ ಎರಚಿದ್ದಾರೆ, ಆ ನಂತರ ಶಾಸಕರ ಅಣತಿಯಂತೆ ಎಂಜಿನಿಯರ್ ಅನ್ನು ಸೇತುವೆಗೆ ಕಟ್ಟಿಹಾಕಲಾಗಿದೆ.

ಶಾಸಕ ನಿತೀಶ್ ರಾಣೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಅವರ ಮಗ ಆಗಿದ್ದಾರೆ. ನಿತೀಶ್ ರಾಣೆ ರೌಡಿಸಂ ನ ವಿಡಿಯೋ ಭಾರಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ನಿತೀಶ್ ರಾಣೆ ವಿರುದ್ಧ ಪ್ರಕರಣ ದಾಖಲಾಗುವ ಸಂಭವ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+