ಕೇಜ್ರಿವಾಲಾರ ಕರೆದೊಯ್ದ ಮುಂಬೈ ಆಟೋ ಮೇಲೆ ಕೇಸ್

Lok Sabha Election 2014- Arvind Kejriwal catches auto in Mumbai Auto driver fined
ಮುಂಬೈ, ಮಾರ್ಚ್ 13: ಅವಕಾಶ ಸಿಕ್ಕಿದಾಗಲೆಲ್ಲ ಕಾನೂನು ಮುರಿಯುವುದನ್ನು ಅಭ್ಯಾಸ ಮಾಡಿಕೊಂಡಿರುವ ಆಮ್ ಆದ್ಮಿ ಪಕ್ಷದ ನೇತಾರರಿಗೆ ಮುಂಬೈನ ನೂತನ ಪೊಲೀಸ್ ಆಯುಕ್ತರು ಗೂಸಾ ಕೊಟ್ಟಿದ್ದಾರೆ.

ದಿಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ನಿನ್ನೆ ಮುಂಬೈನಲ್ಲಿ ರೋಡ್ ಷೋ ನಡೆಸಿದ್ದರು. ಆ ವೇಳೆ ಅನೇಕ ಅಹಿತಕರ ಘಟನೆಗಳು ನಡೆದಿದ್ದವು. ಸಾರ್ವಜನಿಕ ಆಸ್ತಿಪಾಸ್ತಿ ಧ್ವಂಸಗೊಂಡಿತ್ತು. ಸ್ಥಳೀಯರ ಪೊಲೀಸರು ಇದಕ್ಕೆಲ್ಲಾ ಮೌನ ಪ್ರೇಕ್ಷಕರಾಗಿದ್ದಾರಾ? ಎಂಬ ಸಂದೇಹವೂ ಮುಂಬೈವಾಲಾಗಳಲ್ಲಿ ವ್ಯಕ್ತವಾಗಿತ್ತು.

ಆದರೆ ಎಚ್ಚೆತ್ತ ಮುಂಬೈ ಪೊಲೀಸ್ ವರಿಷ್ಠರು ಇಂದು ಕ್ರಮ ಕೈಗೊಂಡಿದ್ದಾರೆ. ನಿನ್ನೆ ಅರವಿಂದ್ ಕೇಜ್ರಿವಾಲ್ ಅವರು ಮುಂಬೈ ವಿಮಾನ ನಿಲ್ದಾಣದಿಂದ ಆಟೋ ಹತ್ತಿ ನೇರವಾಗಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಆ ವೇಳೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಟೋರಿಕ್ಷಾದಲ್ಲಿ ಮೂವರಿಗಿಂತ ಹೆಚ್ಚು ಮಂದಿ ಪ್ರಯಾಣಿಸಿದ್ದರು. ಇದು Motor Vehicle Act ಸ್ಪಷ್ಟ ಉಲ್ಲಂಘಟನೆ ಎಂದು ಇದೀಗ ಕೇಸು ದಾಖಲಿಸಿದ್ದು, ದಂಡವನ್ನು ವಿಧಿಸಲಾಗಿದೆ.

'5 ಕಿಮೀ ದೂರದವರೆಗೂ ಆಟೋರಿಕ್ಷಾ ಚಾಲಕ ಮೂವರಿಗಿಂತ ಹೆಚ್ಚು ಮಂದಿಯನ್ನು ಕರೆದೊಯ್ದಿದ್ದಾನೆ. ಇದು ಕಾಯಿದೆಯ ಉಲ್ಲಂಘನೆಯಾಗಿದೆ. ಹಾಗಾಗಿ ದಂಡ ವಿಧಿಸಿದ್ದೇವೆ' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಖೈಸರ್ ಖಲೀದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 'ಆಟೋ ಚಾಲಕನ ಮೇಲೆಯೂ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಫಾಲೋ ಮಾಡಿದ ಇತರೆ ಆಟೋ ರಿಕ್ಷಾಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+