ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ಲೋಕಲ್ ಟ್ರೈನ್‌ ನಲ್ಲಿ ಕೇಜ್ರಿವಾಲ್ ಪ್ರಚಾರ

By Srinath
|
Google Oneindia Kannada News

ಮುಂಬೈ, ಮಾರ್ಚ್ 12: ಆಮ್ ಆದ್ಮಿ ಪಕ್ಷದ ನೇತಾರ, ದಿಲ್ಲಿ ಮಾಜಿ ಮಜುಖ್ಯಮಂತ್ರಿ ಅರವಿಂದ್ ಕೇಜ್ರಿವಾಲಾ ಅವರು ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಹೆಚ್ಚು ಹೆಚ್ಚು ತಲುಪಲು ಸಾಧ್ಯವಾದ ಎಲ್ಲ ಸಾಧನ ಮತ್ತು ಮಾರ್ಗಗಳನ್ನೂ ಬಳಕೆ ಮಾಡುತ್ತಿದ್ದಾರೆ.

ಏನಾಯಿತೆಂದರೆ ಅರವಿಂದ್ ಕೇಜ್ರಿವಾಲಾ ಅವರು ಚುನಾವಣಾ ಪ್ರಚಾರದ ಅಂಗವಾಗಿ ಇಂದು ಬುಧವಾರ ಮುಂಬೈಗೆ ಭೇಟಿ ನೀಡಿದ್ದರು. ಮುಂಬೈ ವಿಮಾನ ನಿಲ್ದಾಣದಿಂದ ಹೊರಬಂದವರೆ ಅಲ್ಲೇ ಇದ್ದ ಆಟೋ ಹತ್ತಿ ನೇರವಾಗಿ ಪಕ್ಷದ ಕಚೇರಿ ತಲುಪಿದ್ದಾರೆ.

lok-sabha-election-kejriwal-catches-auto-for-campaign-in-mumbai

ಅದಾದ ನಂತರ ಅಂಧೇರಿಯಿಂದ ಚರ್ಚ್‌ ಗೇಟ್ ರೈಲ್ವೆ ಸ್ಟೇಷನ್ ಬಳಿ ಲೋಕಲ್ ಟ್ರೈನ್‌ ಏರಿದ ಅರವಿಂದ್ ಕೇಜ್ರಿವಾಲ್ ಸಹ ಪ್ರಯಾಣಿಕರೊಂದಿಗೆ ನಗುಮೊಗದಿಂದ ಮಾತುಕತೆ ನಡೆಸಿದ್ದಾರೆ. ಲೋಕಲ್ ಟ್ರೈನಿನಲ್ಲಿ ಪ್ರಚಾರ ಕೇಜ್ರಿವಾಲ್ ಅವರು ಬಿಜಿಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಈ ಮಧ್ಯೆ, ಎಎಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ನಿಲ್ದಾಣದ ಎದುರು ನೂಕು ನುಗ್ಗುಲು ಹೆಚ್ಚಾಗಿದೆ.

ಆದರೆ ಪೊಲೀಸರು ತಮ್ಮ ಮೇಲೆ ದಬ್ಬಾಳಿಕೆ ಮಾಡಿದರು ಎಂದು ಆಕ್ರೋಶಗೊಂಡ ಆಮ್ ಆದ್ಮಿ ಕಾರ್ಯಕರ್ತರು ಚರ್ಚ್‌ ಗೇಟ್ ಸ್ಟೇಷನ್ ಸುತ್ತಮುತ್ತಲಿದ್ದ ಮೆಟಲ್ ಡಿಟೆಕ್ಟರ್ ಮುಂತಾದ ಉಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.

ಮುಂದೆ ಲೋಕಲ್ ಟ್ರೈನಿಂದ ಇಳಿದ ಕೇಜ್ರಿವಾಲ್ ಆಟೋದಲ್ಲಿ ಕುಳಿತು ತಮ್ಮ ಪಕ್ಷದ ಪರ ಪ್ರಚಾರ ಮಾಡಿದ್ದಾರೆ. ಕೇಜ್ರಿವಾಲ್‌ಗೆ ಮುಂಬೈ ಪೊಲೀಸರು ಝಡ್ ಪ್ಲಸ್ ಭದ್ರತೆ ನೀಡಿದ್ದಾರೆ. ಭದ್ರತೆಯನ್ನು ಕೇಜ್ರಿವಾಲ್ ನಿರಾಕರಿಸಿದರೂ ಮುಂಬೈ ಪೊಲೀಸರು ಬಲವಂತದಿಂದ ಅವರಿಗೆ ರಕ್ಷಣೆ ನೀಡಿದ್ದಾರೆ.

English summary
Lok Sabha Election 2014- Aam Aadmi Party (AAP) leader Arvind Kejriwal catches auto and took a suburban train as he kicked off his Mumbai tour, but the ride was far from smooth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X