India
  • search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌಂದರ್ಯದಿಂದ ತುಂಬಿರುವ ಸುಧಾಗಡ ಕೋಟೆಯಲ್ಲಿ ಟ್ರೆಕ್ಕಿಂಗ್ ಹೋಗೋಣ!

|
Google Oneindia Kannada News

ಪೊರಬ್ಗಟ್ ಎಂದೂ ಕರೆಯಲ್ಪಡುವ ಸುಧಾಗಡ ಕೋಟೆಯು (Sudha Gad Fort) ಮಹಾರಾಷ್ಟ್ರದ ಪಾಲಿ ಪ್ರದೇಶದಲ್ಲಿ ನೆಲೆಗೊಂಡಿರುವ ಒಂದು ಬೆಟ್ಟದ ಕೋಟೆಯಾಗಿದೆ. ಕ್ರಿಸ್ತಪೂರ್ವ 2 ನೇ ಶತಮಾನದಲ್ಲಿ, ಬೋರೈ ದೇವಿಯ ಭಕ್ತರು ಶಿಖರದ ಮೇಲೆ ದೇವಾಲಯವನ್ನು ನಿರ್ಮಿಸಿದರು. ನಂತರ ಬಹಮನಿ ಸುಲ್ತಾನ್ ವಶಪಡಿಸಿಕೊಂಡ ಈ ಕೋಟೆಗೆ ಸುದಗತ್ ಎಂದು ಹೆಸರಿಸಲಾಯಿತು. ಇದರರ್ಥ ಆಹ್ಲಾದಕರ ಕೋಟೆ. ಹಚ್ಚ ಹಸಿರಿನ ಹುಲ್ಲು, ಅದ್ಬುತ ಭೂದೃಶ್ಯಗಳಿಂದ ಆವೃತವಾಗಿರುವ ಸುಧಾಗಡ ಕೋಟೆಯನ್ನು ತಲುಪಲು ಕಡಿದಾದ ಮೆಟ್ಟಿಲುಗಳು ಮತ್ತು ಮೌಂಟೇನ್ ಪಾಸ್ ಮೂಲಕ ಚಾರಣ ಮಾಡಬೇಕು. ಸಾಹಸ ಪ್ರಿಯರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಅಚ್ಚುಮೆಚ್ಚಿನ ಈ ಸ್ಥಳವು ವಾರಾಂತ್ಯದ ಸುಂದರ ತಾಣವಾಗಿದೆ.

ಕ್ರಿ.ಶ. 2ನೇ ಶತಮಾನದಲ್ಲಿ ನಿರ್ಮಿಸಲಾದ ಸುಧಾಗಡ ಕೋಟೆಯು ಸುಮಾರು 600 ಮೀಟರ್ ಎತ್ತರದಲ್ಲಿದೆ. ಅಲ್ಲದೆ ಬೃಹತ್ ಪ್ರಸ್ಥಭೂಮಿಯನ್ನು ಹೊಂದಿರುವ ಬೃಹತ್ ಕೋಟೆಯಾಗಿದೆ. ವಿಸ್ತಾರವಾಗಿ ಭದ್ರವಾಗಿರುವ ಈ ಕೋಟೆಯು ಆ ಕಾಲದ ಅತ್ಯಂತ ಬಲಿಷ್ಠ ಕೋಟೆಗಳಲ್ಲಿ ಒಂದಾಗಿದೆ. ಕೋಟೆಯು ಕಡಿದಾದ ಬಂಡೆಗಳು, ಹಚ್ಚ ಹಸಿರಿನ ಹುಲ್ಲು ಮತ್ತು ಇಳಿಜಾರಾದ ಭೂಪ್ರದೇಶದಿಂದ ಆವೃತವಾಗಿದೆ. ಈ ಕೋಟೆಯು ಸುಮಾರು 50 ಎಕರೆಗಳಷ್ಟು ಸೊಂಪಾದ, ಹಸಿರು ಪ್ರಸ್ಥಭೂಮಿಯನ್ನು ಆವರಿಸಿದೆ. ಸುಧಾಗಡ ಕೋಟೆಗೆ ಚಾರಣವು ಸಾಕಷ್ಟು ಸಾಹಸಗಳು ಮತ್ತು ಸಂತೋಷದಾಯಕ ಅನುಭವಗಳಿಂದ ತುಂಬಿದೆ. ಪುಣೆ ಮತ್ತು ಮುಂಬೈಗೆ ಸಮೀಪವಿರುವ ಈ ಕೋಟೆಗೆ ಜನರು ಆಹ್ಲಾದಕರ ಪ್ರವಾಸ ಕೈಗೊಳ್ಳುತ್ತಾರೆ.

ಸುಧಾಗಡ ಟ್ರೆಕ್ಕಿಂಗ್

ಬೆಟ್ಟದ ತಳಭಾಗವಾದ ಠಾಕುರ್ವಾಡಿಯನ್ನು ತಲುಪಲು ಬಾಲಿಯಿಂದ ಬಸ್ ಅಥವಾ ಖಾಸಗಿ ವಾಹನವನ್ನು ತೆಗೆದುಕೊಳ್ಳಬಹುದು. ಮುಂಬೈನಿಂದ ಬರುತ್ತಿದ್ದರೆ ರೈಲಿನಲ್ಲಿ ದಾದರ್ ತಲುಪಬಹುದು ಮತ್ತು ಅಲ್ಲಿಂದ ಠಾಕುರ್ವಾಡಿ ತಲುಪಬಹುದು. ಠಾಕುರ್ವಾಡಿ ಮತ್ತು ತೊಂಡ್ಸೆ ಗ್ರಾಮದಿಂದ ಟ್ರೆಕ್ಕಿಂಗ್ ಅನ್ನು ಪ್ರಾರಂಭಿಸಬಹುದು. ಆದರೆ ಠಾಕುರವಾಡಿಗೆ ಹೋಗುವುದು ಸ್ವಲ್ಪ ಸುಲಭವಾದ್ದರಿಂದ ಹೆಚ್ಚಿನವರು ಇಲ್ಲಿಂದ ಹೋಗುತ್ತಾರೆ. ಠಾಕುರ್ವಾಡಿ ಬಾಲಿಯಿಂದ 12 ಕಿಲೋಮೀಟರ್ ದೂರದಲ್ಲಿದೆ. ನೀವು ಮೊದಲ ಬಾರಿಗೆ ಟ್ರೆಕ್ಕಿಂಗ್ ಮಾಡುತ್ತಿದ್ದರೆ, ಚಾರಣದಲ್ಲಿ ನಿಮಗೆ ಸಹಾಯ ಮಾಡಲು ಹಳ್ಳಿಯಿಂದ ಮಾರ್ಗದರ್ಶಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು. ಅನೇಕ ಪ್ರತಿಷ್ಠಿತ ಖಾಸಗಿ ನಿರ್ವಾಹಕರು ಪ್ಯಾಕೇಜ್‌ಗಳ ಮೂಲಕ ಟ್ರೆಕ್ಕಿಂಗ್ ಅನ್ನು ಒದಗಿಸುತ್ತಾರೆ. ನೀವು ಅವರನ್ನು ಸಹ ಸಂಪರ್ಕಿಸಬಹುದು. ಕೋಟೆಯನ್ನು ತಲುಪಲು ಠಾಕುರವಾಡಿ, ಮೊದಲ ಏಣಿ, ಎರಡನೇ ಏಣಿ, ಬಚಾಪುರ್ ದರ್ವಾಜಾ, ರಾಜವಾಡದಿಂದ ಟ್ರೆಕ್ಕಿಂಗ್ ಪ್ರಾರಂಭವಾಗುತ್ತದೆ.

Lets go trekking in the beautiful Sudhagad fort!

ಅದ್ಭುತವಾದ ಟ್ರೆಕ್ಕಿಂಗ್ ಅನುಭವ

ಈ ಹಾದಿಯು ಸ್ವಲ್ಪ ಒರಟಾಗಿದ್ದರೂ ಸುಂದರವಾದ ಪಶ್ಚಿಮ ಘಟ್ಟಗಳಿಗೆ ಹೋಗಲು ಬಯಸುವ ಎಲ್ಲರಿಗೂ ಇದು ಅದ್ಭುತವಾದ ಟ್ರೆಕ್ಕಿಂಗ್ ಅನುಭವವನ್ನು ನೀಡುತ್ತದೆ. ಜೊತೆಗೆ ಇಲ್ಲಿ ಕೋಟೆಯ ಬಳಿ ಕ್ಯಾಂಪ್ ಕೂಡ ಮಾಡಬಹುದು. ಇಲ್ಲಿ ಆಶ್ರಯವಾಗಿ ಬಳಸಬಹುದಾದ ಸಾಕಷ್ಟು ಗುಹೆಗಳಿವೆ, ಆದರೆ ಇಲ್ಲಿ ತಂಗಲು ಸ್ವಂತ ವ್ಯವಸ್ಥೆಗೆ ಶಿಫಾರಸು ಮಾಡಲಾಗುತ್ತದೆ. ಕೋಟೆಯ ಸುತ್ತಲಿನ ಹಳ್ಳಿಗಳು ದೂರದಲ್ಲಿರುವುದರಿಂದ ಪಟ್ಟಣದಿಂದಲೇ ನೀರು ಮತ್ತು ಆಹಾರವನ್ನು ಕೊಂಡೊಯ್ಯುವುದು ಉತ್ತಮ.

ಮಾಡಬೇಕಾದ ಕೆಲಸಗಳು

ಕೇಕ್‌ಗಳು, ಹಣ್ಣುಗಳು, ಚಾಕೊಲೇಟ್‌ಗಳಂತಹ ಸಿದ್ಧ ಆಹಾರಗಳನ್ನು ಒಯ್ಯಬಹುದು. ಬೆನ್ನುಹೊರೆಯಲ್ಲಿ ನೀರು, ಟಾರ್ಚ್, ಶೂ, ಬಟ್ಟೆ, ಛತ್ರಿ, ಗ್ಲೂಕೋಸ್, ಔಷಧಿ, ಸೊಳ್ಳೆ ನಿವಾರಕವನ್ನು ಪ್ಯಾಕ್ ಮಾಡಿಕೊಂಡು ಹೋದರೆ ಇನ್ನೂ ಉತ್ತಮ. ಮುಖ್ಯವಾಗಿ ನಿಮ್ಮ ಐಡಿ ಮತ್ತು ಕ್ಯಾಮೆರಾ ತೆಗೆದುಕೊಳ್ಳಿ, ನೀವು ಅಷ್ಟು ದೂರ ಹೋಗಿ ಆ ಸುಂದರ ಸ್ಥಳದ ಚಿತ್ರವನ್ನು ಸೆರೆ ಹಿಡಿಯಬಹುದು. ಅಲ್ಲದೆ ಪ್ರಸ್ತುತ ದೈಹಿಕ ಕಾಯಿಲೆ ಇರುವವರು, ಮಕ್ಕಳು ಮತ್ತು ವೃದ್ಧೆಯರು ಪರ್ವತ ಹತ್ತುವುದನ್ನು ತಪ್ಪಿಸಬೇಕು.

English summary
Sudha Gad Fort also known as Porabgat is a hill fort located in the Pali region of Maharashtra. Plan this week here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X