ಭಿಕ್ಷುಕನ ಬಳಿ ಲಕ್ಷಾಂತರ ಹಣ, ನಾಣ್ಯ ಎಣಿಸಲು ಬೇಕಾಯ್ತು ಎಂಟು ಗಂಟೆ!
ಮುಂಬೈ, ಅಕ್ಟೋಬರ್ 07: ಮುಂಬೈ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದ ಬಿರ್ಬಿಚಂದ್ ಆಜಾದ್ ಬಳಿ 10 ಲಕ್ಷ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿದೆ.
ಭಿಕ್ಷುಕ ಬಿರ್ಬಿಚಂದ್ ಶುಕ್ರವಾರ ರಾತ್ರಿ ರೈಲ್ವೆ ಹಳಿ ದಾಟುವ ಸಮಯ ರೈಲು ಢಿಕ್ಕಿ ಹೊಡೆದು ನಿಧನಹೊಂದಿದ್ದಾನೆ. ಪ್ರಕರಣ ಸಂಬಂಧ ರೈಲ್ವೆ ಪೊಲೀಸರು ಬಿರ್ಬಿಚಂದ್ ವಾಸವಿದ್ದ ಮನೆಗೆ ಭೇಟಿ ನೀಡಿದಾಗ ಅವರಿಗೆ ಆಶ್ಚರ್ಯವಾಗಿದೆ. ಅವರು ಕೈಇಟ್ಟಲ್ಲೆಲ್ಲಾ ಹಣವೇ ದೊರಕಿದೆ ಅವರಿಗೆ.
ಹೌದು ಭಿಕ್ಷಾಟನೆ ಮಾಡುತ್ತಿದ್ದ ಬಿರ್ಬಿಚಂದ್ ತನ್ನ ಸಣ್ಣ ಕೊಠಡಿಯಲ್ಲಿ ಸಿಕ್ಕ-ಸಿಕ್ಕಲ್ಲೆಲ್ಲಾ ನಾಣ್ಯಗಳನ್ನು ತುಂಬಿಸಿಟ್ಟಿದ್ದ. ಬಕೆಟ್‌ಗಳಲ್ಲಿ, ಪಾತ್ರೆಗಳಲ್ಲಿ, ಬ್ಯಾಗುಗಳಲ್ಲಿ, ಎಲ್ಲೆಂದರಲ್ಲಿ ಬರೀಯ ನಾಣ್ಯಗಳೇ ಸಿಕ್ಕವು ಪೊಲೀಸರಿಗೆ. ಇವನ್ನೆಲ್ಲಾ ಒಟ್ಟು ಮಾಡಿ ಎಣಿಸುವಷ್ಟರಲ್ಲಿ ಪೊಲೀಸರಿಗೆ ಸಾಕು-ಸಾಕಾಯಿತು.

ಬಿರ್ಬಿಚಂದ್ ಮನೆಯಲ್ಲಿ ಸಿಕ್ಕ ನಾಣ್ಯಗಳೇ 1.77 ಲಕ್ಷ ಮೌಲ್ಯದ್ದಾಗಿದ್ದವು. ನಾಣ್ಯಗಳ ಜೊತೆಗೆ ಕೆಲವು ಎಫ್‌ಡಿ ಸ್ಲಿಪ್‌ಗಳೂ ಸಿಕ್ಕಿದ್ದು, ಇವುಗಳ ಒಟ್ಟು ಮೌಲ್ಯ 8.70 ಲಕ್ಷ. ಒಟ್ಟು ಬರೋಬ್ಬರಿ 10.47 ಲಕ್ಷ ಹಣ ಭಿಕ್ಷುಕ ಬಿರ್ಬಿಚಂದ್ ಸಂಪಾದಿಸಿದ್ದರು.
ಮುಂಬೈನಲ್ಲಿ ಹಲವು ವರ್ಷಗಳಿಂದ ಬದುಕಿದ್ದ ಬಿರ್ಬಿಚಂದ್ ನ ಮೂಲ ರಾಜಸ್ಥಾನವೆಂಬುದು ಆತನ ಆಧಾರ್ ಗುರುತಿನ ಚೀಟಿಯಿಂದ ಗೊತ್ತಾಗಿದೆ. ಆತನಿಗೆ ಪ್ಯಾನ್ ಕಾರ್ಡ್ ಸಹ ಇದ್ದು, ಹಲವು ಬ್ಯಾಂಕ್‌ಗಳಲ್ಲಿ ಖಾತೆಗಳಿವೆ.
ಪೊಲೀಸರು ಬಿರ್ಬಿಚಂದ್‌ನ ಮೃತದೇಹದ ಅಂತಿಮಕಾರ್ಯ ಪೂರೈಸಿದ್ದು, ಬಿರ್ಬಿಚಂದ್‌ನ ಸಂಬಂಧಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರಾಜಸ್ಥಾನ ಪೊಲೀಸರ ನೆರವನ್ನು ಈಗಾಗಲೇ ಮುಂಬೈ ಪೊಲೀಸರು ಕೇಳಿದ್ದು, ಬಿರ್ಬಿಚಂದ್ ಸಂಪಾದಿಸಿದ್ದ ಹಣ ನಿಯಮಪ್ರಕಾರ ಸೇರಬೇಕಾದವರಿಗೆ ಸೇರಿಸುವ ಕಾರ್ಯ ಮಾಡುತ್ತಿದ್ದಾರೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications