ಯುವತಿಯನ್ನು ಅಪಹರಿಸಿ ತರುವೆ : ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ

ಮುಂಬೈ, ಸೆಪ್ಟೆಂಬರ್ 04 : 'ಮದುವೆ ಪ್ರಸ್ತಾಪ ನಿರಾಕರಿಸಿದ ಯುವತಿಯನ್ನು ಅಪಹರಿಸಿ ನಿಮಗಾಗಿ ಕರೆ ತರುತ್ತೇನೆ'. ಇದು ಯಾವುದೋ ರೌಡಿ ನೀಡಿದ ಹೇಳಿಕೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ಜನರಿಗೆ ಕೊಟ್ಟ ಭರವಸೆ.

ಬಿಜೆಪಿ ಶಾಸಕ ರಾಮ್ ಕದಮ್ ಈ ರೀತಿಯ ಆಘಾತಕಾರಿ ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದಾರೆ. ಅಲ್ಲದೇ ಅಲ್ಲಿರುವ ಎಲ್ಲಾ ಜನರಿಗೆ ತಮ್ಮ ಮೊಬೈಲ್ ನಂಬರ್ ನೀಡಿದ್ದಾರೆ.

ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಘಾಟ್‌ಕೊಪರ್‌ ಎಂಬಲ್ಲಿ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ರಾಮ್ ಕದಮ್, 'ನಿಮಗೆ ಏನಾದರೂ ಸಹಾಯ ಬೇಕಾದರೆ ನನಗೆ ಕರೆ ಮಾಡಿ' ಎಂದು ಮೊಬೈಲ್ ನಂಬರ್ ನೀಡಿದರು.

Ram Kadam

'ನೀವು ಯಾವುದಾದರೂ ಹುಡುಗಿ ಇಷ್ಟಪಟ್ಟು, ಆಕೆ ನಿಮ್ಮನ್ನು ಪ್ರೀತಿಸಲು ನಿರಾಕರಿಸಿದಾಗ ಸಹಾಯ ಬೇಕು ಎಂದಾದರೆ ಕರೆ ಮಾಡಿ. ನಿಮ್ಮ ಪೋಷಕರು, ಯುವತಿಯ ಪೋಷಕರಿಗೂ ಇಷ್ಟವಾದರೆ ಯುವತಿಯನ್ನು ನಾನು ಅಪಹರಿಸಿ ನಿಮಗಾಗಿ ಕರೆ ತರುತ್ತೇನೆ' ಎಂದು ಹೇಳಿಕೆ ನೀಡಿದ್ದಾರೆ.

ಎನ್‌ಸಿಪಿ ಶಾಸಕ ಜಿತೇಂದ್ರ ಆವ್ದದ್ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ಕಾನೂನು ರೂಪಿಸುವವರೇ ಈ ರೀತಿ ಹೇಳಿಕೆ ನೀಡಿದರೆ ಜನರಿಗೆ ಸುರಕ್ಷತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಹೇಳಿಕೆ ಬಗ್ಗೆ ರಾಮ್ ಕದಮ್ ಸ್ಪಷ್ಟನೆ ನೀಡಿದ್ದು, 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಕ್ಕಳು, ಮದುವೆ, ಪ್ರೀತಿ ವಿಷಯದಲ್ಲಿ ಪೋಷಕರ ಸಲಹೆ ಕೇಳಬೇಕು ಎಂದು ಹೇಳಿದ್ದೆ. ಆದರೆ, ನನ್ನ ಹೇಳಿಕೆಯನ್ನು ತಿರುಚಲಾಗಿದೆ' ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+