ನಟಿ ಕರೀನಾ ಬ್ಯಾಂಕ್ ಖಾತೆಗೆ ಕನ್ನ ಹಾಕಿದ್ದ ವ್ಯಕ್ತಿ ಬಂಧನ

Posted By:
Subscribe to Oneindia Kannada

ಮುಂಬೈ, ಜನವರಿ 03: ಹುಚ್ಚು ಅಭಿಮಾನ ಏನೆಲ್ಲ ಮಾಡಿಸಬಹುದು ಎಂಬುದಕ್ಕೆ ಇಲ್ಲೊಂದು ಪ್ರಸಂಗವಿದೆ. ನಟಿ ಕರೀನಾ ಕಪೂರ್ ಅವರ ಸಂಪರ್ಕ ಸಂಖ್ಯೆ ಪಡೆಯಲು ಅವರ ಆದಾಯ ತೆರಿಗೆ ಪಾವತಿ ಖಾತೆಗೆ ಅಭಿಮಾನಿಯೊಬ್ಬ ಕನ್ನ ಹಾಕಿದ್ದಾನೆ.

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರ ಐ-ಟಿ ಅಕೌಂಟ್‌ನ್ನು ಹ್ಯಾಕ್ ಮಾಡಿದ್ದ ವ್ಯಕ್ತಿಯನ್ನು ಸೈಬರ್ ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಆದರೆ, ತಮಾಷೆ ವಿಷಯವೆಂದರೆ, ಐಟಿ ರಿಟರ್ನ್ ಅಕೌಂಟ್ ಹಾಕಿ ಮಾಡಿದ್ದ ವ್ಯಕ್ತಿ ಪ್ಯಾರಾಮಿಲಿಟರಿ ದಳದ ಸಿಬ್ಬಂದಿಯಾಗಿದ್ದಾನೆ. 26 ವರ್ಷ ವಯಸ್ಸಿನ ಈತ ಕರೀನಾ ಅವರ ಬಾಕಿ ಉಳಿದಿರುವ ಐಟಿ ರಿಟರ್ನ್ಸ್ ಫೈಲ್ ಮಾಡಿದ್ದಾನೆ.

Kareena Kapoor's income tax account hacker arrested by Cyber cell

ಛತ್ತೀಸ್‌ಗಢದಲ್ಲಿ ಅರೆ ಸೇನಾಪಡೆಯಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮನೀಶ್ ತಿವಾರಿ ಎಂಬ ವ್ಯಕ್ತಿಯೇ ಕರೀನಾ ಅವರ ಕಟ್ಟಾ ಅಭಿಮಾನಿ ಎಂದು ಹಲವೆಡೆ ವರದಿ ಮಾಡಲಾಗಿದೆ. ಆದರೆ, ಸೈಬರ್ ಪೊಲೀಸರು ಹೆಸರು ವಿವರಗಳನ್ನು ನೀಡಿಲ್ಲ.

ಪತ್ತೆ ಹಚ್ಚಿದ್ದು ಹೇಗೆ? : 2016-17ರಲ್ಲಿ ಐಟಿ ರಿಟರ್ನ್ಸ್ ಫೈಲ್ ಮಾಡಲು ಕರೀನಾ ಕಪೂರ್ ಅವರ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಪ್ರಕಾಶ್ ತಕ್ಕರ್ ಅವರು ಖಾತೆಯನ್ನು ತೆಗೆದು ನೋಡಿದರೆ ಆಶ್ಚರ್ಯವಾಗಿದೆ. ಬಾಕಿ ಉಳಿದ ತೆರಿಗೆಯನ್ನು ಪಾವತಿಸಲಾಗಿತ್ತು. ಕರೀನಾ ಅವರ ಆದಾಯ 8 ಲಕ್ಷ ರು ಎಂದು ತೋರಿಸುತ್ತಿತ್ತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಮುಂಬೈ ಪೊಲೀಸರಿಗೆ ದೂರು ನೀಡಲಾಗಿತ್ತು.

ಕಳೆದ ಆಗಸ್ಟ್‌ ತಿಂಗಳಿನಲ್ಲಿ ನಟಿ ಕರೀನಾ ಅವರ ಪೋನ್ ನಂಬರ್‌ ಗಾಗಿ ಅರೋಪಿ ತಿವಾರಿ ಇಂಟರ್ನೆಟ್ ನಲ್ಲಿ ಜಾಲಾಡಿದ್ದ. ಕೊನೆಗೆ ಆಕೆಯ ಪ್ಯಾನ್ ನಂಬರ್ ಸಿಕ್ಕಿತ್ತು. ನಂತರ ಕರೀನಾಳ ಆದಾಯ ತೆರಿಗೆ ಖಾತೆಯನ್ನು ಹ್ಯಾಕ್ ಮಾಡಿದ್ದಲ್ಲದೆ, ಐಟಿ ರಿಟರ್ನ್ಸ್ ಫೈಲ್ ಮಾಡಿದ್ದ.

ಕೊನೆಗೆ ಈ ರೀತಿ ತೆರಿಗೆ ಪಾವತಿ ಮಾಡಿದ್ದು ಮೊಬೈಲ್ ಮೂಲಕ ಎಂದು ಪೊಲೀಸರಿಗೆ ತಿಳಿದು ಬಂದಿತು, ಮಂಗಳವಾರ ಅರೋಪಿಯನ್ನು ಬಂಧಿಸಿ, ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mumbai Police's cyber cell arrested a 26-year-old man for hacking Bollywood actor Kareena Kapoor Khan's income tax e-filing account.
Please Wait while comments are loading...