ಮುಂಬೈನಲ್ಲಿ ಮುಸ್ಲಿಮರಿಗೆ ಮನೆ ನಿರಾಕರಣೆ: ಪತ್ರಕರ್ತೆ ರಾಣಾ ಅಯ್ಯುಬ್ ಕಿಡಿ

ಮುಂಬೈ, ಅಕ್ಟೋಬರ್ 26: ಜಾತಿ, ಧರ್ಮದ ಆಧಾರದಲ್ಲಿ ಬಾಡಿಗೆಗೆ ಮನೆ ನಿರಾಕರಿಸುವ ಘಟನೆಗಳು ನಿರಂತರವಾಗಿ ವರದಿಯಾಗುತ್ತಿರುತ್ತದೆ. ಮುಂಬೈನ ಪ್ರತಿಷ್ಠಿತ ಬಾಂದ್ರಾ ಪ್ರದೇಶದಲ್ಲಿಯೇ ತಾವು ಮುಸ್ಲಿಮ್ ಎಂಬ ಕಾರಣಕ್ಕೆ ಮನೆ ಬಾಡಿಗೆ ನೀಡುವುದನ್ನು ನಿರಾಕರಿಸಲಾಗುತ್ತಿದೆ ಎಂದು ಪತ್ರಕರ್ತೆ ರಾಣಾ ಅಯ್ಯುಬ್ ಹೇಳಿದ್ದಾರೆ.

'ಕಳೆದ ಮೂರು ತಿಂಗಳಿನಿಂದ ಬಾಂದ್ರಾದಲ್ಲಿ ನಾನು ಮನೆ ಹುಡುಕುತ್ತಿದ್ದೇನೆ. ಹೆಚ್ಚಿನ ಮಾಲೀಕರಿಗೆ ನನ್ನ ಹೆಸರು 'ರಾಣಾ' ಎನ್ನುವುದು ಮುಸ್ಲಿಂ ಹೆಸರಾಗಿ ಕಾಣಿಸಿರಲಿಲ್ಲ. ಆದರೆ ನನ್ನ ಸರ್‌ನೇಮ್ ಶೇಖ್ ಎಂದು ಓದಿದ ಬಳಿಕವಷ್ಟೇ ನಾನು ಮುಸ್ಲಿಂ ಎನ್ನುವುದು ಗೊತ್ತಾಗಿದ್ದು. ಮಾಲೀಕರ ಬದಲು ನನಗೆ ಬ್ರೋಕರ್‌ಗಳಿಂದ ತೀರಾ ಬೇಸರದ ನೆಪಗಳ ಕರೆ ಬಂದಿದ್ದವು' ಎಂದು ರಾಣಾ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಬಾಡಿಗೆಗೆ ಇದ್ದ ಮನೆಯೊಂದರ ಜಾಹೀರಾತು ಹಂಚಿಕೊಂಡಿದ್ದ ರಾಣಾ, ಆ ಜಾಹೀರಾತಿನಲ್ಲಿ ಮುಸ್ಲಿಮರು ಮತ್ತು ಸಾಕು ಪ್ರಾಣಿಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಸೂಚನೆ ಇರುವುದನ್ನು ಎತ್ತಿ ತೋರಿಸಿದ್ದರು.

Journalist Rana Ayyub Says Owners Denies Houses In Bandra For Her Muslim Name

'ಮುಸ್ಲಿಮರು ಮತ್ತು ಸಾಕುಪ್ರಾಣಿಗಳಿಗೆ ಅವಕಾಶವಿಲ್ಲ. ಇದು ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ಒಂದಾದ ಮುಂಬೈನ ಬಾಂದ್ರಾದಲ್ಲಿನ ವಿಳಾಸ. ಇದು 20ನೇ ಶತಮಾನದ ಭಾರತ. ನಮ್ಮದು ಕೋಮುವಾದಿ ದೇಶವಲ್ಲ ಎಂದು ನನಗೆ ನೆನಪಿಸಿ. ಇದು ಜನಾಂಗೀಯ ತಾರತಮ್ಯವಲ್ಲವೇ?' ಎಂದು ಪ್ರಶ್ನಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+