ಡಿಕೆಶಿಯನ್ನು ಬಲವಂತವಾಗಿ ಬೆಂಗಳೂರಿಗೆ ಕಳಿಸಿದರೆ ಮುಂಬೈ ಪೊಲೀಸ್?

Recommended Video

      ಡಿ ಕೆ ಶಿವಕುಮಾರ್ ರನ್ನ ಬಲವಂತವಾಗಿ ಬೆಂಗಳೂರಿಗೆ ಕಳಿಸಿದರಾ ಮುಂಬೈ ಪೊಲೀಸ್ | Oneindia Kannada

      ಮುಂಬೈ, ಜುಲೈ 10: ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಅವರನ್ನು ಮುಂಬೈ ಪೊಲೀಸರು ಬಲವಂತವಾಗಿ ಬೆಂಗಳೂರಿಗೆ ಕಳಿಸುತ್ತಿದ್ದಾರೆ ಎಂದು ಮುಂಬೈ ಕಾಂಗ್ರೆಸ್ ಮುಖಂಡ ಮಿಲಿಂದ್ ದೇವ್ರಾ ಅವರ ಕಚೇರಿ ಮೂಲಗಳು ದೂರಿವೆ.

      "ಪೊಲೀಸ್ ವಶದಲ್ಲಿದ್ದ ಮಿಲಿಂದ್ ದೇವ್ರಾ ಮತ್ತಿತರ ಕಾಂಗ್ರೆಸ್ ಮುಖಂಡರನ್ನು ಬಿಡುಗಡೆ ಮಾಡಲಾಗಿದೆ. ಖುದ್ದಾಗಿ ಮುಂಬೈ ಪೊಲೀಸರೇ ಡಿಕೆ ಶಿವಕುಮಾರ್ ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದಿದ್ದಾರೆ. ಅವರನ್ನು ಬಲವಂತವಾಗಿ ಬೆಂಗಳೂರಿಗೆ ಕಳಿಸುವ ಪ್ರಯತ್ನ ನಡೆಯುತ್ತಿದೆ" ಎಂದು ಡಿಕೆ ಶಿವಕುಮಾರ್ ಹೇಳಿದರು.

      ಬಿಡುಗಡೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, "ನನಗೆ ಈಗಲೂ ಆತ್ಮವಿಶ್ವಾಸವಿದೆ. ಎಲ್ಲಾ ಶಾಸಕರೂ ವಾಪಸ್ ಬರುತ್ತಾರೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಸುಭದ್ರವಾಗಿರುತ್ತದೆ. ಅವರಲ್ಲಿ ಯಾರೂ ಪಕ್ಷವನ್ನು ತೊರೆಯುತ್ತಿಲ್ಲ" ಎಂದು ಡಿಕೆ ಶಿವಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

      Is DK Shivakumar is being forcibly sent back to Bengaluru?

      ಮುಂಬೈಯ ರೆನೈಸಾನ್ಸ್ ಹೊಟೇಲ್ ನಲ್ಲಿ ತಂಗಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ವಾಪಸ್ ಕರೆತರುವ ಸಲುವಾಗಿ ಡಿಕೆ ಶಿವಕುಮಾರ್ ಅವರು ಮುಂಬೈಗೆ ತೆರಳಿದ್ದರು. ಆದರೆ ಹೊಟೇಲ್ ಒಳಗೆ ಅವರಿಗೆ ಪ್ರವೇಶಿಸಲು ಪೊಲೀಸರು ಬಿಟ್ಟಿರಲಿಲ್ಲ. ಪಟ್ತು ಬಿಡದೆ ಅಲ್ಲಿಯೇ ಇದ್ದ ಡಿಕೆ ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+