ಬ್ಯಾಂಡ್, ಮೆರವಣಿಗೆಯಲ್ಲಿ ಕುದುರೆ ಮೇಲೆ ಹೋಗಿ ಐಫೋನ್ x ಖರೀದಿ

By: ವಿಕಾಸ್
Subscribe to Oneindia Kannada

ಮದುವೆಗೆ ಹೊರಡುವ ವರ ಕುದುರೆ ಮೇಲೆ ಕುಳಿತು, ಮೆರವಣಿಗೆ ಹೊರಡುವುದನ್ನು ಕೇಳಿರುತ್ತೀರಿ, ನೋಡಿರುತ್ತೀರಿ. ನೌಪಾದ ಜಿಲ್ಲೆ ಥಾಣೆಯ ವ್ಯಕ್ತಿಯೊಬ್ಬ ಆಪಲ್ ಸ್ಟೋರ್ ನಿಂದ ಐಫೋನ್ x ತೆಗೆದುಕೊಂಡು ಬರುವುದಕ್ಕೆ ಕುದುರೆ ಮೇಲೆ ಕುಳಿತು, ಮೆರವಣಿಗೆಯಲ್ಲಿ ಬ್ಯಾಂಡ್ ಸಮೇತವಾಗಿ ಹೋಗಿದ್ದಾರೆ. ಅಂದ ಹಾಗೆ ಐಫೋನ್ xಗೆ ಜಗತ್ತಿನಾದ್ಯಂತ ಭಾರೀ ಬೇಡಿಕೆ ವ್ಯಕ್ತವಾಗಿದೆ.

ಬಿಸಿ ದೋಸೆಯಂತೆ ಬಿಕರಿಯಾದ ಲಕ್ಷ ರುಪಾಯಿಯ ಐಫೋನ್ x

"ಐ ಲವ್ ಐಫೋನ್ x" ಎಂಬ ಪ್ಲಕಾರ್ಡ್ ಹಿಡಿದಿದ್ದ ಆತ ಕುದುರೆ ಮೇಲೆ ಕುಳಿತಿದ್ದರೆ, ಆತನ ಹಿಂದೆ ಬ್ಯಾಂಡ್ ಹಾಗೂ ಅದೇ ರೀತಿ ಬ್ಯಾನರ್ ಗಳನ್ನು ಹಿಡಿದಿದ್ದವರು ಸಾಗಿದ್ದಾರೆ. ಹ್ಞಾಂ, ಹೀಗೆ ಮೆರವಣಿಗೆಯಲ್ಲಿ ಹೋಗಿ ಫೋನ್ ಪಡೆದ ವ್ಯಕ್ತಿಯ ಹೆಸರು ಪಲ್ಲಿವಳ್. ಆತ ಕುದುರೆ ಕುಳಿತಿರುವಂತೆಯೇ ತಮ್ಮ ಹೊಸ ಐಫೋನ್ x ಅನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

ಐಫೋನ್ X ಪ್ರಿ ಆರ್ಡರ್ ಆರಂಭ, ಫೋನ್ ಬಗ್ಗೆ ಗೊತ್ತಿರಬೇಕಾದ 5 ಅಂಶಗಳು

iPhone X frenzy: Man reaches store riding on horse to collect latest Apple offering

ಐಫೋನ್ x 64 ಜಿಬಿ ಸಾಮರ್ಥ್ಯಕ್ಕೆ 89 ಸಾವಿರ ರುಪಾಯಿ ಹಾಗೂ 256 ಜಿಬಿ ಸಾಮರ್ಥ್ಯಕ್ಕೆ ರು. 1,02,000 ದರ ನಿಗದಿ ಮಾಡಲಾಗಿದೆ. ಇಷ್ಟು ದುಬಾರಿ ಬೆಲೆ ಇದ್ದರೂ ಬೇಡಿಕೆಯೇನೂ ಕಡಿಮೆ ಆಗಿಲ್ಲ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ನವೆಂಬರ್ 3ರಿಂದ ಐಫೋನ್ x ಮಾರಾಟ ಆರಂಭವಾಗಿದ್ದು, ಮಳಿಗೆಗಳ ಎದುರು ಉದ್ದುದ್ದ ಸಾಲು ಕಂಡುಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Such was his love for the new iPhone that a man from Thane's Naupada district went riding on a horse with a procession and a band party to receive his iPhone X from the Apple store.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ