ಉದ್ಯಮಿ ಕುಮಾರ ಮಂಗಳಂ ಅವರ ತಾತ ಬಿ.ಕೆ.ಬಿರ್ಲಾ ನಿಧನ

ಮುಂಬೈ, ಜುಲೈ 3: ಉದ್ಯಮಿ ಬಿ.ಕೆ.ಬಿರ್ಲಾ ಅವರು ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಕುಮಾರ್ ಮಂಗಳಂ ಬಿರ್ಲಾ ಅವರ ತಾತಾ ಬಿ.ಕೆ.ಬಿರ್ಲಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಸೆಂಚುರಿ ಟೆಕ್ಸ್ ಟೈಲ್ಸ್ ಅಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷರಾಗಿದ್ದ ಬಿ.ಕೆ.ಬಿರ್ಲಾ, ತಮ್ಮ 15ನೇ ವಯಸ್ಸಿನಿಂದಲೇ ವ್ಯಾಪಾರದಲ್ಲಿ ಸಕ್ರಿಯರಾಗಿದ್ದರು.

ಕೇಸೊರಾಮ್ ಇಂಡಸ್ಟ್ರೀಸ್ ಅಧ್ಯಕ್ಷರಾದ ನಂತರ ವ್ಯಾಪಾರದಲ್ಲಿ ಹಲವು ಮೊದಲುಗಳನ್ನು ಶುರು ಮಾಡಿದ ಶ್ರೇಯ ಅವರಿಗೆ ಸೇರುತ್ತದೆ. ಹತ್ತಿ, ಪಾಲಿಸ್ಟರ್ ಮತ್ತು ನೈಲಾನ್, ಕಾಗದ, ಹಡಗು ನಿರ್ಮಾಣ, ಸಿಮೆಂಟ್, ಟೀ, ಕಾಫಿ, ಏಲಕ್ಕಿ, ರಾಸಾಯನಿಕ, ಪ್ಲೈವುಡ್ ಸೇರಿದಂತೆ ಹಲವು ವಲಯಗಳಲ್ಲಿ ಇದ್ದ ಅವಕಾಶಗಳನ್ನು ಸರಿಯಾಗಿ ಗುರುತಿಸಿ, ಅದರ ಸದುಪಯೋಗ ಮಾಡಿಕೊಂಡವರು ಬಿರ್ಲಾ.

Industrialist Kumar Mangalam Birla grand father B.K.Birla passed away

ಕುಮಾರ ಮಂಗಳಂ ಬಿರ್ಲಾ ಅವರ ತಂದೆ ವಿಕ್ರಂ ಬಿರ್ಲಾ 1995ರಲ್ಲೇ ಮೃತಪಟ್ಟಿದ್ದಾರೆ. ಬಿ.ಕೆ.ಬಿರ್ಲಾ ಅವರಿಗೆ ಇದ್ದ ಏಕೈಕ ಮಗ ವಿಕ್ರಂ ಬಿರ್ಲಾ. ಹಲವು ಗಣ್ಯರು ಹಾಗೂ ಉದ್ಯಮಿಗಳು ಬಿ.ಕೆ.ಬಿರ್ಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಾಗೂ ಬಿರ್ಲಾ ಅವರ ಸಾಧನೆ ಮತ್ತು ಸಾಹಸಗಳನ್ನು ಸ್ಮರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+