ಮುಂಬೈ ಜೈಲಿನಲ್ಲಿ ಗಲಭೆ ಸೃಷ್ಟಿಸಿದ ಇಂದ್ರಾಣಿ ಮುಖರ್ಜಿ
ಮುಂಬೈ, ಜೂನ್ 26: ಮುಂಬೈನ ಬೈಕುಲಾ ಜೈಲಿನಲ್ಲಿ ಗಲಭೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಮತ್ತು ಇತರ ಮಹಿಳಾ ಸಹ ಖೈದಿಗಳ ಮೇಲೆ ಕೇಸು ದಾಖಲಿಸಲಾಗಿದೆ.
ಜೈಲಿನಲ್ಲಿ ಮೊಟ್ಟೆ ಕದಿಯುತ್ತಿದ್ದ ವೇಳೆ ಸಿಕ್ಕಿಬಿದ್ದ 45 ವರ್ಷದ ಮಹಿಳಾ ಖೈದಿಯೊಬ್ಬರನ್ನು ಪೊಲೀಸರು ಹೊಡೆದು ಕೊಂದಿದ್ದಾರೆ ಎನ್ನಲಾಗಿದ್ದು, ಇದಾದ ನಂತರ ಜೈಲಿನಲ್ಲಿ ಗಲಭೆ ನಡೆದಿತ್ತು.

ಗಲಭೆಯ ತನಿಖೆ ನಡೆಸುತ್ತಿರುವವರು ಪೊಲೀಸರು 200 ಆರೋಪಿಗಳಲ್ಲಿ ಇಂದ್ರಾಣಿಯನ್ನೂ ಹೆಸರಿಸಿದ್ದಾರೆ. ಜೈಲಿನ ಮಹಡಿಯ ಮೇಲೆ ನಿಂತ ಇಂದ್ರಾಣಿ ಮತ್ತು ಸಹ ಖೈದಿಗಳ ಚಿತ್ರಗಳು ಓಡಾಡುತ್ತಿವೆ. ಅವರು ಜೈಲಿನ ಇತರ ಖೈದಿಗಳೊಂದಿಗೆ ಗಲಭೆಗೆ ಪ್ರೇರಣೆ ನೀಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಇನ್ನು ಮಹಿಳಾ ಖೈದಿಯ ಹತ್ಯೆಗೆ ಸಂಬಂಧಿಸಿದಂತೆ 6 ಜನ ಪೊಲೀಸರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications