ಮಗಳ ಹತ್ಯೆ ಮಾಡಿ, ಶವದ ಮುಖದ ಮೇಲೆ ಕೂತಿದ್ದ ಇಂದ್ರಾಣಿ: ಚಾಲಕ
ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಇಂದ್ರಾಣಿ ಚಾಲಕ. ಇಂದ್ರಾಣಿಯೇ ತಮ್ಮ ಮಗಳಾದ ಶೀನಾ ಬೋರಾ ಅವರನ್ನು ಕೊಂದಿದ್ದಾಗಿ ತಿಳಿಸಿದ ಚಾಲಕ ಶ್ಯಾಮನ್ವಾರ್ ರೈ.
ಮುಂಬೈ, ಜುಲೈ 29: ಇಡೀ ದೇಶದ ಗಮನ ಸೆಳೆದಿದ್ದ ಶೀನಾ ಬೋರಾ ಕೊಲೆ ಪ್ರಕರಣದ ವಿಚಾರಣೆ ಈಗ ತಾರ್ಕಿಕ ಅಂತ್ಯ ಕಾಣುವತ್ತ ಹೆಜ್ಜೆಯಿಟ್ಟಿದೆ.
ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿಯಾ (ಶೀನಾ ಬೋರಾ ತಾಯಿ) ಅವರ ಕಾರು ಚಾಲಕ ಶ್ಯಾಮ್ವಾರ್ ರೈ, ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ಶೀನಾ ಅವರು, ತನ್ನ ತಾಯಿಗೆ ಮೂರು ಬೆಡ್ ರೂಂ ಉಳ್ಳ ಫ್ಲಾಟ್ ಕೊಡಬೇಕೆಂದು ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ಬೇಸತ್ತಿದ್ದ ಇಂದ್ರಾಣಿ, ಕೊಲೆ ನಡೆದ ನಂತರ, ಶೀನಾ ಮುಖದ ಮೇಲೆ ಕೂತು, ನಿನ್ನ ಮೂರು ಬೆಡ್ ರೂಂ ಫ್ಲಾಟ್ ಇದೇ ತಗೋ'' ಎಂದು ಕುಹಕವಾಡಿದ್ದರು ಎಂದೂ ಆತ ಹೇಳಿದ್ದಾನೆ.
ಚಾಲಕ ರೈ ಹೇಳಿರುವ ಪ್ರಕಾರ, ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಸೇರಿ ತನ್ನ ಮುಂದೆಯೇ ಶೀನಾ ಬೋರಾ ಅವರನ್ನು ಹತ್ಯೆ ಮಾಡಿದರು.
ಕಾರಿನ ಮುಂದಿನ ಸೀಟುಗಳಲ್ಲಿ ತಾನು (ರೈ) ಹಾಗೂ ಶೀನಾ ಕುಳಿತರೆ, ಆಕೆಯ ಹಿಂದೆ ಸಂಜೀವ್ ಹಾಗೂ ಆತನ ಪಕ್ಕ ಇಂದ್ರಾಣಿ ಕೂತರು. ರಾತ್ರಿಯ ವೇಳೆ ಕಾರನ್ನು ಮುಂಬೈ ಹೊರವಲಯದ ಕಡೆಗೆ ತೆಗೆದುಕೊಂಡು ಹೋಗುವಾಗ, ಹಿಂದಿನಿಂದ ಶೀನಾ ಅವರ ಕತ್ತು ಹಿಸುಕಿದ ಸಂಜೀವ್, ಆಕೆಯನ್ನು ಕೊಲೆ ಮಾಡಿದರು.
ಆನಂತರ, ಮರುದಿನ ಬೆಳಗಿನ ಜಾವ ಶವವನ್ನು ಮುಂಬೈ ಹೊರವಲಯದ ಕಾಡಿನಲ್ಲಿ ಕೊಂಡೊಯ್ದೆವು. ಅಲ್ಲಿ ಶೀನಾ ಶವವನ್ನು ಕಾರಿನಿಂದ ಕೆಳಗಿಳಿಸಿದೆವು. ಆಗ, ಇಂದ್ರಾಣಿಯವರೇ ಶೀನಾ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂದು ಹೇಳಿದ್ದಾನೆ.












Click it and Unblock the Notifications