ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಲ್ ಅಂಡ್ ಎಫ್ ಎಸ್ ಕಂಪೆನಿ ನಿರ್ದೇಶಕರ ಮನೆ, ಕಚೇರಿ ಮೇಲೆ ಇಡಿ ದಾಳಿ

|
Google Oneindia Kannada News

ಮುಂಬೈ, ಮೇ 22: ಐಎಲ್ ಅಂಡ್ ಎಫ್ ಎಸ್ ನ ಬಹುಕೋಟಿ ಮೊತ್ತದ ಮರು ಪಾವತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಬುಧವಾರ ಮುಂಬೈನಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಂಪೆನಿಯ ಕನಿಷ್ಠ ನಾಲ್ವರು ನಿರ್ದೇಶಕರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ಮೇಲೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಳೆದ ಫೆಬ್ರವರಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಹೆಚ್ಚುವರಿಯಾಗಿ ಸಾಕ್ಷ್ಯ ಹಾಗೂ ದಾಖಲೆಗಾಗಿ ಈಗ ದಾಳಿ ನಡೆಸಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ ನಿಂದ ಈಚೆಗೆ ಐಎಲ್ ಅಂಡ್ ಎಫ್ ಎಸ್ ಕಂಪೆನಿಯು ಸರಣಿಯಾಗಿ ಮರುಪಾವತಿಯಲ್ಲಿ ವಿಫಲವಾಗಿತ್ತು. ಎಸ್ ಐಡಿಬಿಐ ಮತ್ತು ಇತರ ಸಹವರ್ತಿ ಕಂಪೆನಿಗಳೆಲ್ಲ ಸೇರಿ ಒಟ್ಟಾರೆ ತೊಂಬತ್ತೊಂದು ಸಾವಿರ ಕೋಟಿ ರುಪಾಯಿ ಪಾವತಿ ಮಾಡಲು ವಿಫಲವಾಗಿತ್ತು.

IL and FS multi crore money laundering scam; ED raid in Mumbai

ಆರ್ಥಿಕ ಅಪರಾಧ ದಳ (ಎಕನಾಮಿಕ್ ಅಫೆನ್ಸಸ್ ವಿಂಗ್) ಕಳೆದ ವರ್ಷ ಡಿಸೆಂಬರ್ ನಲ್ಲಿ ದೆಹಲಿ ಪೊಲೀಸರಿಗೆ ನೀಡಿದ ದೂರಿನ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ವಂಚನೆ ದಾರಿಯ ಮೂಲಕ ಎಪ್ಪತ್ತು ಕೋಟಿ ರುಪಾಯಿ ನಷ್ಟ ಉಂಟು ಮಾಡಿದ್ದಾರೆ ಎಂದು ಎನ್ಸೋ ಇನ್ಪ್ರಾಸ್ಟ್ರಕ್ಚರ್ ನ ನಿರ್ದೇಶಕರಾದ ಆಶಿಶ್ ಬೇಗ್ವಾನಿ ಐಎಲ್ ಅಂಡ್ ಎಫ್ ಎಸ್ ರೈಲ್ ಲಿಮಿಟೆಡ್ ನ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

1 ಲಕ್ಷ ಕೋಟಿ ಸಾಲ ಭಾರದಲ್ಲಿ ಕುಸಿದ IL&FS ಸಾಮ್ರಾಜ್ಯದ ಸುತ್ತ1 ಲಕ್ಷ ಕೋಟಿ ಸಾಲ ಭಾರದಲ್ಲಿ ಕುಸಿದ IL&FS ಸಾಮ್ರಾಜ್ಯದ ಸುತ್ತ

ಅವರು ಈ ಕಂಪೆನಿಯಲ್ಲಿ ನೂರಾ ಎಪ್ಪತ್ತು ಕೋಟಿ ಹೂಡಿದ್ದರು. ತಮ್ಮ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ದೂರಿದ್ದರು ಎನ್ನಲಾಗಿದೆ. ಆರೋಪಿಗಳು ಈ ಹಣವನ್ನು ಸರಿಯಾಗಿ ಬಳಕೆ ಮಾಡಿದ್ದಾರೋ ಅಥವಾ ಬೇರೆಯ ಉದ್ದೇಶಕ್ಕೆ ಬಳಸಿದ್ದಾರಾ ಎಂಬ ಬಗ್ಗೆ ಆರ್ಥಿಕ ಅಪರಾಧಗಳ ತನಿಖಾ ದಳ ವಿಚಾರಣೆ ನಡೆಸಿದೆ.

English summary
IL and FS multi crore money laundering scam; ED raid in Mumbai residence and office of firm 4 directors. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X