ಸುರಸುಂದರಾಂಗ ಸಲ್ಮಾನ್ ಗೊಂದು ಸಿಹಿ ಸುದ್ದಿ
ಮುಂಬೈ, ಡಿ.5: ಬಾಲಿವುಡ್ದಿನ ಸುರಸುಂದರಾಂಗ ಸಲ್ಮಾನ್ ಖಾನ್ ಗೆ ಗುರುವಾರ ಸಿಹಿ ಸುದ್ದಿ ಸಿಕ್ಕಿದೆ. ಸುಮಾರು 11 ವರ್ಷ ಹಳೆಯದಾದ ಹಿಟ್ ಅಂಡ್ ರನ್ ಪ್ರಕರಣದ ತೀರ್ಪು ಇನ್ನೇನು ಹೊರಬೀಳುತ್ತದೆ ಎನ್ನುವಷ್ಟರಲ್ಲಿ ಮತ್ತೊಮ್ಮೆ ಗಿರಿಕಿ ಹೊಡೆದಿದೆ. ಇಡೀ ಪ್ರಕರಣ ಹೊಸದಾಗಿ ವಿಚಾರಣೆ ನಡೆಸುವಂತೆ ಮುಂಬೈ ಕೋರ್ಟ್ ಆದೇಶಿಸಿದೆ.
ಸಲ್ಮಾನ್ ಆರೋಪಿಯಾಗಿರುವ ವಿರುದ್ಧ ಇರುವ 2002ರ ಹಿಟ್ ಅಂಡ್ ರನ್ ರೇಸಿನ ವಿಚಾರಣೆ ಕಳೆದ 11 ವರ್ಷಗಳಿಂದಲೂ ನಡೆದಿರುವುದು ಎಲ್ಲರಿಗೂ ತಿಳಿದೇ ಇದೆ. ಕೇಸಿಗೆ ಸಂಬಂಧಿಸಿದಂತೆ ಜುಲೈ ತಿಂಗಳಿನಲ್ಲಿ ಸಲ್ಮಾನ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಹಲವಾರು ಬಾರಿ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಸಲ್ಮಾನ್ ಅವರು ಬಂಧನ, ಶಿಕ್ಷೆ ಭೀತಿ ಅನುಭವಿಸಿದ್ದರು.
ಸಲ್ಮಾನ್ ಖಾನ್ ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 304,337 ಸೇರಿದಂತೆ ಹಲವಾರು ಸೆಕ್ಷನ್ ಗಳಡಿಯಲ್ಲಿ ಆರೋಪ ಹೊರೆಸಲಾಗಿದೆ. ಆರೋಪಗಳು ಸಾಬೀತಾದರೆ 10 ವರ್ಷ ಜೈಲುಶಿಕ್ಷೆ ಗ್ಯಾರಂಟಿ ಎನ್ನಲಾಗಿತ್ತು.

ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ಕ್ರೂಸರ್ ವಾಹನ ಸೆಪ್ಟೆಂಬರ್ 28, 2002ರಲ್ಲಿ ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಹರಿದಿತ್ತು. ಓರ್ವನ ಸಾವು, ನಾಲ್ವರು ಗಾಯಗೊಂಡಿದ್ದರು. ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮರ್ಡರ್ ಚಾರ್ಚ್ ಹಾಕಿ ಸಲ್ಮಾನ್ ವಿರುದ್ಧ ತೀರ್ಪು ಬಂದಿತ್ತು.
ಆದರೆ, ವಕೀಲ ಅಶೋಕ್ ಮುಂಡರಗಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿದ್ದರು, ಸಾಕ್ಷಿಗಳ(ಸುಮಾರು 17 ಸಾಕ್ಷಿಗಳ ವಿಚಾರಣೆ ನಡೆದಿತ್ತು) ವಿಚಾರಣೆ ಸರಿಯಾಗಿ ನಡೆದಿಲ್ಲ. ಸಲ್ಮಾನ್ ಅವರಿಗೆ ಕೊಲ್ಲುವ ಯಾವುದೇ ಉದ್ದೇಶ ಇರಲಿಲ್ಲ. ಇದೊಂದು ಅಪಘಾತ ಎಂಬುದನ್ನು ನ್ಯಾಯಾಧೀಶರು ಗಮನಿಸಬೇಕು ಎಂದು ವಾದಿಸಿದ್ದರು.
ಸಲ್ಮಾನ್ ಖಾನ್ ವಿರುದ್ಧದ ಈ ಪ್ರಕರಣದಲ್ಲಿ ತನ್ನ ತೀರ್ಪು ಪ್ರಕಟಿಸಿದ್ದ ನ್ಯಾಯಾಲಯ ಇದೊಂದು ಕೊಲೆ ಪ್ರಕರಣವಲ್ಲ. ಶಿಕ್ಷಾರ್ಹ ಹತ್ಯಾ ಅಪರಾಧವಷ್ಟೇ ಎಂದು ಹೇಳಿತ್ತು. ಪ್ರಸುತ ಪ್ರಕರಣದ ಎಲ್ಲಾ ಸಾಕ್ಷಿಗಳಿಂದ ಮರು ಹೇಳಿಕೆಗಳನ್ನು ಪಡೆಯಬೇಕು ಎಂದು ಹೇಳಿದೆ. ಈ ಹಿಂದೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ನೀಡಿದ್ದ ಹೇಳಿಕೆಯಲ್ಲಿ ಕುಡಿದ ಮತ್ತಿನಲ್ಲಿ ಬೇಜವಾಬ್ದಾರಿಯಿಂದ ಕಾರು ಓಡಿಸಿ ಕೆಲವರನ್ನು ಬಲಿ ತೆಗೆದುಕೊಂಡಿರುವ ಈ ಪ್ರಕರಣವನ್ನು ಶಿಕ್ಷಾರ್ಹ ನರಹತ್ಯೆ ಅಪರಾಧ ಪ್ರಕರಣ ಎಂದು ಹೇಳಿತ್ತು.
ಡಿ.23ರೊಳಗೆ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಬೇಕಿತ್ತು ಹಾಗೂ ಮುಂದಿನ ವಿಚಾರಣೆ ದಿನಾಂಕ ಘೋಷಿಸುವುದಾಗಿ ಕೋರ್ಟ್ ಹೇಳಿತ್ತು. ಈ ನಡುವೆ www.Salmankhanfiles.com ಎಂಬ ವೆಬ್ ತಾಣದಲ್ಲಿ ಕೋರ್ಟ್ ಪ್ರಕ್ರಿಯೆಯ ವಿವರಗಳನ್ನು ಹಾಕುತ್ತಿದ್ದ ಸಲ್ಮಾನ್ ಖಾನ್ ಅವರು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಒಟ್ಟಾರೆ, ಪ್ರಕರಣದ ಮರು ತನಿಖೆ ನಡೆದು, ಕೋರ್ಟೀಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿ, ಕೋರ್ಟಿನಲ್ಲಿ ವಿಚಾರಣೆ ಆರಂಭವಾಗುವ ತನಕ ಸಲ್ಮಾನ್ ಖಾನ್ 'ಜೈ ಹೋ' ಎಂದು ಶೂಟಿಂಗ್ ನಲ್ಲಿ ತೊಡಗಿಕೊಳ್ಳಬಹುದಾಗಿದೆ.
ಇದರ ಜೊತೆಗೆ ಹದಿನಾಲ್ಕು ವರ್ಷಗಳ ಹಿಂದೆ ರಾಜಸ್ತಾನದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದ ವಿಚಾರಣೆ ಜೋಧ್ ಪುರ ಕೋರ್ಟ್ ನಲ್ಲಿ ನಡೆದಿದೆ. 1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣ ವೇಳೆ ಜೋಧಪುರ ಸಮೀಪದ ಹಳ್ಳಿಯೊಂದರ ಬಳಿ ಕೃಷ್ಣಮೃಗ ಭೇಟಿಯಾಡಿದ್ದ ಆರೋಪ ಸಲ್ಮಾನ್ ಸೇರಿದಂತೆ ಸೈಫ್ ಆಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ವಿರುದ್ಧ ಇದೆ.












Click it and Unblock the Notifications