ಬಾಲಕಿ ಮೇಲೆ 10 ಜನರಿಂದ 6 ತಿಂಗಳು ಆಟೋದಲ್ಲೇ ಅತ್ಯಾಚಾರ

ಸೊಲ್ಲಾಪುರ, ಫೆಬ್ರವರಿ 13: ಬಾಲಕಿಯೊಬ್ಬಳ ಮೇಲೆ 10 ಜನರು ಆರು ತಿಂಗಳು ನಿರಂತರ ಅತ್ಯಾಚಾರ ನಡೆಸಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರಕ್ಕೆ ಸೇರಿರುವ ಕರ್ನಾಟಕದ ಗಡಿ ಸೊಲ್ಲಾಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಕಳೆದ ಆರು ತಿಂಗಳಿನಿಂದ 10 ಮಂದಿ ಕಿಡಿಗೇಡಿಗಳು ನಿರಂತರ ಅತ್ಯಾಚಾರವೆಸಗಿದ್ದಾರೆ.

ಈ ಸಂಬಂಧ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಸಾಮೂಹಿಕ ಅತ್ಯಾಚಾರ , ಪೋಕ್ಸೊ, ಎಸ್‌ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳಿದ ಐವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Girl Raped By 10 Men Over 6 Months In Maharashtra

ಮಂಗಳವಾರ ದೇವಸ್ಥಾನ ಬಳಿ ಅಳುತ್ತಾ ಕೂತಿದ್ದ ಸಂತ್ರಸ್ತ ಬಾಲಕಿಯನ್ನು ಸ್ಥಳೀಯರು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೊಲ್ಲಾಪುರ ವಿಜಾಪುರ ನಾಕಾ ಪೊಲೀಸ್ ಅಧಿಕಾರಿ , ಅತ್ಯಾಚಾರವೆಸಗಿದ 10 ಮಂದಿ ಪೈಕಿ ಕೆಲವರು ಸಂತ್ರಸ್ತೆಯ ಸ್ನೇಹಿತರಾಗಿದ್ದು, ಕೆಲವರು ಆಟೋ ಚಾಲಕರು, ಅವರೆಲ್ಲರೂ ಆಕೆಯನ್ನು ಆಟೋದಲ್ಲಿ6 ತಿಂಗಳು ಸುತ್ತಿಸಿ ಕೃತ್ಯವೆಸಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+