ಆರ್ಥಿಕತೆ ಅಳೆಯಲು ಜಿಡಿಪಿ ಸರಿಯಾದ ಮಾನದಂಡವೇ ಅಲ್ಲ: ಭಾಗ್ವತ್
ನಾಗ್ಪುರ್, ಅಕ್ಟೋಬರ್ 8: "ಸೋ ಕಾಲ್ಡ್" ಆರ್ಥಿಕ ಹಿಂಜರಿತದ ಬಗ್ಗೆ "ವಿಪರೀತ ಚರ್ಚೆಗಳು" ಬೇಕಾಗಿಲ್ಲ. ಇದರಿಂದ ವ್ಯಾಪಾರಿಗಳು ಹಾಗೂ ಜನರು ವಿಪರೀತ ಆತಂಕಗೊಂಡು ಆರ್ಥಿಕ ಚಟುವಟಿಕೆಗಳು ಕುಸಿತಗೊಳ್ಳುತ್ತವೆ ಎಂದು ಮಂಗಳವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅಭಿಪ್ರಾಯ ಪಟ್ಟಿದ್ದಾರೆ.
ಆರೆಸ್ಸೆಸ್ 'ಸ್ವದೇಶಿ' ವಿಚಾರಧಾರೆಯನ್ನು ಬೆಂಬಲಿಸುತ್ತದೆ. ಆದರೆ ವಿದೇಶ ನೇರ ಬಂಡವಾಳವನ್ನು ವಿರೋಧಿಸುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ್ ಸಂಘ್ ನ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಗತ್ಯ ಬಿದ್ದಲ್ಲಿ ಬಂಡವಾಳ ಹಿಂತೆಗೆತವನ್ನೂ ಮಾಡಬೇಕು ಎಂದು ಅವರು ಹೇಳಿದ್ದಾರೆ.
ಆರ್ಥಿಕತೆಯನ್ನು ಅಳೆಯುವುದಕ್ಕೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ಜಿಡಿಪಿ) ಎಂಬುದು ತಪ್ಪಾದ ಮಾನದಂಡ. "ದೇಶವು ಪ್ರಗತಿ ಆಗುತ್ತಿದೆ. ಆದರೆ ಜಾಗತಿಕ ಆರ್ಥಿಕತೆ ಚಕ್ರದ ರೀತಿ ಸಾಗುತ್ತದೆ. ಕೆಲವು ಅಡೆ- ತಡೆಗಳನ್ನು ಎದುರಿಸುವಾಗ ಅದರಿಂದ ಪ್ರಗತಿ ಇಳಿಕೆ ಆಗಿದೆ. ಆಗ ಇದನ್ನು ಹಿಂಜರಿತ ಎಂದು ಕರೆಯಲಾಗುತ್ತದೆ" ಎಂದಿದ್ದಾರೆ ಭಾಗ್ವತ್.

ಜಿಡಿಪಿ ಬಗ್ಗೆ ಚರ್ಚೆ ಅಗತ್ಯ ಇಲ್ಲ
ಒಬ್ಬರು ಆರ್ಥಿಕ ತಜ್ಞರು ನನಗೆ ಹೇಳಿದರು: ನೀವು ಯಾವಾಗ ಅಭಿವೃದ್ಧಿಯ ವರದಿಯನ್ನು ಸೊನ್ನೆಗಿಂತ ಕೆಳಗೆ ದಾಖಲಿಸುತ್ತೀರೋ ಆಗ ಹಿಂಜರಿತ ಎನ್ನಬೇಕು. ಆದರೆ ನಮ್ಮ ಆರ್ಥಿಕ ದರ ಐದು ಪರ್ಸೆಂಟ್ ಇದೆ. ಯಾರಾದರೂ ಆ ಬಗ್ಗೆ ಕಾಳಜಿ ತೋರಿಸಬಹುದು. ಆದರೆ ಬಗ್ಗೆ ಚರ್ಚಿಸುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಚರ್ಚೆ ಆರಂಭಿಸಿದರೆ ಜನರ ನಡವಳಿಕೆ ಮೇಲೆ ಇದರ ಪರಿಣಾಮ ಆಗುತ್ತದೆ. ಇದರ ಬಗ್ಗೆ ವಿಪರೀತ ಚರ್ಚೆ ಮಾಡಿದರೆ ವ್ಯಾಪಾರ- ವ್ಯವಹಾರ ಮಾಡುವ ಜನರು, ಆರ್ಥಿಕತೆ ನಿಜವಾಗಿಯೂ ಮಂದಗತಿಯಲ್ಲಿ ಇದೆ ಅಂದುಕೊಳ್ಳುತ್ತಾರೆ. ಜತೆಗೆ ಇನ್ನಷ್ಟು ಸಾಂಪ್ರದಾಯಿಕವಾಗಿ ಕಾರ್ಯಾಚರಣೆ ಶುರು ಮಾಡುತ್ತಾರೆ. ಇದರಿಂದ ನಮ್ಮ ಅರ್ಥಿಕತೆ ಪ್ರಗತಿ ಇನ್ನಷ್ಟು ನಿಧಾನ ಆಗುತ್ತದೆ ಎಂದಿದ್ದಾರೆ.
ಸರ್ಕಾರವು ಈ ವಿಚಾರದ ಬಗ್ಗೆ ಸೂಕ್ಷ್ಮತೆ ತೋರಿಸಿದ್ದು, ಕೆಲವು ಹೆಜ್ಜೆಗಳನ್ನು ಇರಿಸಿದೆ. ನಮ್ಮ ಸರ್ಕಾರವನ್ನು ನಂಬಬೇಕು. ನಾವು ಸಾಕಷ್ಟು ಸಕಾರಾತ್ಮಕ ಹೆಜ್ಜೆಗಳನ್ನು ಇರಿಸಿದ್ದೇವೆ. ಮುಂಬರುವ ದಿನಗಳಲ್ಲಿ ಸಕಾರಾತ್ಮಕ ಪ್ರಭಾವ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಆರ್ಥಿಕತೆಯಲ್ಲಿ ಹಲವು ತೂತುಗಳಿದ್ದವು
ನಾವು ಈ ಮಂದಗತಿಯ ಹಂತದಿಂದ ಆಚೆಗೆ ಬರುತ್ತೇವೆ. ಅದಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ. ನಮಗೆ ಹಣದ ಅಗತ್ಯ ಇದೆ. ಆ ಕಾರಣಕ್ಕೆ ಎಫ್ ಡಿಐ ಅನ್ನು ಪ್ರೋತ್ಸಾಹಿಸುತ್ತಿದೆ. ಕೆಲವು ಮುಖ್ಯ ಕೈಗಾರಿಕೆಗಳ ಬಂಡವಾಳ ಹಿಂತೆಗೆತ ಮಾಡಲಾಗುವುದು. ಯಾವಾಗ ಬಂಡವಾಳ ಹಿಂತೆಗೆತ ಅಗತ್ಯವೋ ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಇದೇ ಪರಿಹಾರ ಎಂದು ಭಾಗ್ವತ್ ಹೇಳಿದ್ದಾರೆ.
ನಮ್ಮ ಆರ್ಥಿಕತೆಯಲ್ಲಿ ಹಲವು ತೂತುಗಳು ಇದ್ದವು. ಆ ಮೂಲಕ ನಮ್ಮ ಆರ್ಥಿಕತೆ ಬರಿದಾಗುತ್ತಿತ್ತು. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಆದನ್ನು ತಡೆಯಲು ಸರಿಯಾದ ಪ್ರಯತ್ನ ಮಾಡಿದೆ. ಇದಕ್ಕಾಗಿ ಕಠಿಣವಾಗಿ ಇರಬೇಕು. ಈ ಸರ್ಕಾರ ಹಲವು ರೀತಿಯಲ್ಲಿ ಕಠಿಣವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇಂಥ ಕಠಿಣ ನಿಯಮಗಳಿಂದ ಕೆಲವು ಸಾಮಾನ್ಯ ಜನರಿಗೆ ಕಷ್ಟ ಆಗಿದೆ. ಆದರೆ ದೇಶಕ್ಕಾಗಿ ಅವರು ಎದುರಿಸುತ್ತಾರೆ. ಆದರೆ ಪ್ರಾಮಾಣಿಕ ಶ್ರೀ ಸಾಮಾನ್ಯರಿಗೆ ಯಾವುದೇ ತೊಂದರೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications