ಮುಂಬೈನಲ್ಲಿ ಬೆಂಕಿ ಅವಘಡ 12 ಕಾರ್ಮಿಕರ ಸಾವು
ಮುಂಬೈ, ಡಿಸೆಂಬರ್ 18: ಮುಂಬೈನ ಕೈರಾಣಿ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.
ಕೈರಾಣಿ ರಸ್ತೆಯ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಸೋಮವಾರ ಮುಂಜಾನೆ 4.30ರ ಸಮಯಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕಾರ್ಖಾನೆ ಒಳಗೆ ಮಲಗಿದ್ದ 12 ಮಂದಿ ಕಾರ್ಮಿಕರು ಸಜೀವವಾಗಿ ದಹನಗೊಂಡಿದ್ದಾರೆ.
ಕಾರ್ಖಾನೆಯ ಹೊರಗೆ ಮಲಗಿದ್ದ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ. ಕಾರ್ಖಾನೆಗಳು ಹೆಚ್ಚಿರುವ ಕೈರಾಣಿ ಪ್ರದೇಶದಲ್ಲಿ ಬೆಂಕಿ ತೀರ್ವವಾಗಿ ಹಬ್ಬುವ ಅಪಾಯವಿತ್ತು ಆದರೆ ಅಗ್ನಿಶಾಮಕ ದಳ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ ಕಾರಣ ಹೆಚ್ಚಿನ ಅಪಾಯದಿಂದ ತಪ್ಪಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಬೆಂಕಿ ಅವಘಡ ಸಂಭವಿಸಲು ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗುತ್ತಿದೆಯಾದರೂ ನಿಖರ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆಗೆ ತಂಡ ರಚಿಸಿದ್ದಾರೆ.
ಕೈರಾಣಿ ರಸ್ತೆಯಲ್ಲಿ ಬೇನಾಮಿ ಕಾರ್ಖಾನೆಗಳು ಹೆಚ್ಚಾಗಿದ್ದು, ಹೆಚ್ಚಿನ ಕಾರ್ಖಾನೆಗಳು ಸರ್ಕಾರಿ ನಿಯಮಗಳನ್ನು ಪಾಲಿಸದೇ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿವೆ, ಹಾಗಾಗಿ ಇಲ್ಲಿ ಆಗಾಗ ಬೆಂಕಿ ಅವಘಡ ಸಂಬವಿಸುತ್ತಲೇ ಇರುತ್ತದೆ ಎಂದು ಸ್ಥಳೀಯರು ಹೆಳಿದ್ದಾರೆ.
ಕಳೆದ ವಾರವೂ ಇದೇ ರಸ್ತೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು ಆದರೆ ಯಾವುದೇ ಜೀವ ಹಾನಿ ಆಗಿರಲಿಲ್ಲ.












Click it and Unblock the Notifications