ಮುಂಬೈ: 73.18 ಕೋಟಿ ಮೌಲ್ಯದ ನೀರು ಕಳ್ಳತನ, ಆರು ಜನರ ವಿರುದ್ಧ ದೂರು
ಮುಂಬೈ, ಅಕ್ಟೋಬರ್ 17: ಮುಂಬೈನಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. 73.18 ಕೋಟಿ ಮೌಲ್ಯದ ನೀರು ಕಳ್ಳತನ ಮಾಡಿದ್ದಾರೆಂದು ಪೊಲೀಸರು ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ದಕ್ಷಿಣ ಮುಂಬೈನ ಕಲ್ಬಾದೇವಿ ಬಳಿಯ ಎರಡು ಅಕ್ರಮ ಬಾವಿಗಳಿಂದ ಬರೋಬ್ಬರಿ 73.18 ಕೋಟಿ ನೀರು ಕದ್ದಿರುವ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ದಕ್ಷಿಣ ಮುಂಬೈನ ಪಾಂಡ್ಯಾ ಬಂಗಲೆಯ ಆವರಣದೊಳಗೆ ಪರವಾನಗಿ ಪಡೆಯದೇ ಬಾವಿಗಳನ್ನು ತೋಡಿ ನೀರನ್ನು ಕದಿಯಲಾಗುತ್ತಿದೆ ಎಂದು ಸುರೇಶ್ ಕುಮಾರ್ ಧೋಕಾ ಎಂಬುವರು ಆಝಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬಂಗಲೆಯ ಮಾಲೀಕ ಶ್ರೀಪುರ ಪ್ರಸಾದ್ ಪಾಂಡ್ಯಾ ಅವರು ಅಕ್ರಮವಾಗಿ ಬಾವಿ ತೋಡಿ ಟ್ಯಾಂಕರ್ ಮೂಲಕ ನೀರು ಮಾರಾಟ ಮಾಡುತ್ತಿದ್ದರು. ಬಾವಿಗಳಿಗೆ ಪಂಪ್ ಅಳವಡಿಸಲು ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನೂ ಪಡೆದಿದ್ದರು ಎಂದು ಸುರೇಶ್ ಆರೋಪಿಸಿದ್ದಾರೆ.
ಈ ಬಾವಿಗಳನ್ನು 2006 ರಲ್ಲಿ ತೋಡಲಾಗಿತ್ತು, ಅಲ್ಲಿಂದ 2017 ರ ವರೆಗೆ ಅವಧಿಯ ವಿದ್ಯುತ್ ಶುಲ್ಕ ಆಧರಿಸಿ ಅವರು ಎಷ್ಟು ನೀರು ಕದ್ದಿರಬಹುದೆಂದು ಅಂದಾಜು ಮಾಡಲಾಗಿದೆ. ಅದರ ಆಧಾರದ ಮೇಲೆ ದೂರು ದಾಖಲು ಮಾಡಲಾಗಿದೆ.












Click it and Unblock the Notifications