ಹೃತಿಕ್ ರೋಷನ್ ತಂದೆ ರಾಕೇಶ್ ಗೆ ಗಂಟಲು ಕ್ಯಾನ್ಸರ್ ಶಸ್ತ್ರಚಿಕಿತ್ಸೆ
ಮುಂಬೈ, ಜನವರಿ 8: ಹಿರಿಯ ನಿರ್ಮಾಪಕ- ನಟ ರಾಕೇಶ್ ರೋಷನ್ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಸಮಸ್ಯೆ ಆರಂಭಿಕ ಹಂತದಲ್ಲಿದೆ ಎಂದು ನಟ ಹಾಗೂ ರಾಕೇಶ್ ಮಗ ಹೃತಿಕ್ ರೋಷನ್ ಮಂಗಳವಾರ ಹೇಳಿದ್ದಾರೆ. ನನ್ನ ತಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಅವರು ಇನ್ ಸ್ಟಾ ಗ್ರಾಮ್ ನಲ್ಲಿ ತಿಳಿಸಿದ್ದಾರೆ.
ಒಂದು ಫೋಟೋಗಾಗಿ ಅಪ್ಪನನ್ನು ಕೇಳಿದೆ. ನನಗೆ ಗೊತ್ತಿತ್ತು ಶಸ್ತ್ರಚಿಕಿತ್ಸೆ ದಿನವೂ ಅವರು ಜಿಮ್ ತಪ್ಪಿಸಲ್ಲ. ನನಗೆ ಗೊತ್ತಿರುವ ಹಾಗೆ ತುಂಬ ಗಟ್ಟಿ ಮನುಷ್ಯ ಅವರು. ಕೆಲವು ವಾರಗಳ ಹಿಂದೆ ಅವರಿಗೆ ಗಂಟಲು ಕ್ಯಾನ್ಸರ್ ಇರುವುದು ಗೊತ್ತಾಯಿತು. ಅದು ಆರಂಭಿಕ ಹಂತದಲ್ಲಿತ್ತು. ಅವರಿಗೆ ಇಂದು ತುಂಬ ಉತ್ಸಾಹ ಇತ್ತು. ಅವರು ಅದರ ಜತೆ ಕಾದಾಡಲು ಹೊರಟಿದ್ದಾರೆ. ಕುಟುಂಬವಾಗಿ ನಾವು ಅದೃಷ್ಟವಂತರು. ಏಕೆಂದರೆ ನಮಗೆ ಅವರಂಥ ನಾಯಕರಿದ್ದಾರೆ ಎಂದು ಹೃತಿಕ್ ಬರೆದುಕೊಂಡಿದ್ದಾರೆ.

ಅರವತ್ತೊಂಬತ್ತು ವರ್ಷದ ರಾಕೇಶ್ ರೋಷನ್ ಅವರ ಜತೆಗೆ ಜಿಮ್ ನಲ್ಲಿ ನಿಂತಿರುವ ಫೋಟೋವನ್ನು ಹೃತಿಕ್ ಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಕೇಶ್ ರೋಷನ್ ರ ಮಗಳು ಸುನೈನಾಗೆ ಕೂಡ ಸರ್ವಿಕಲ್ ಕ್ಯಾನ್ಸರ್ ಪತ್ತೆಯಾಗಿತ್ತು. ಆ ನಂತರ ಅವರು ಗುಣಮುಖರಾಗಿದ್ದರು.
View this post on InstagramA post shared by Hrithik Roshan (@hrithikroshan) on
ರಾಕೇಶ್ ರೋಷನ್ ಅವರು ಕಾಮ್ ಚೋರ್ ಹಾಗೂ ಖೂಬ್ ಸೂರತ್ ನಂಥ ಸಿನಿಮಾಗಳಿಂದ ತಮ್ಮ ವೃತ್ತಿ ಬದುಕು ಆರಂಭಿಸಿದರು. ಆ ನಂತರ ನಿರ್ಮಾಣಕ್ಕೆ ಇಳಿದರು. ತಾವೇ ನಿರ್ದೇಶನ ಮಾಡಿದ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು.












Click it and Unblock the Notifications