ಮುಂಬೈ ಪಾದಚಾರಿ ಸೇತುವೆ ಅವಘಡ: ಉನ್ನತ ತನಿಖೆಗೆ ಸಿಎಂ ಆದೇಶ
ಮುಂಬೈ, ಮಾರ್ಚ್ 15: ನಿನ್ನೆ ರಾತ್ರಿ ನಗರದಲ್ಲಿ ನಡೆದ ಪಾದಚಾರಿ ಸೇತುವೆ ಅವಘಡದಲ್ಲಿ ಸತ್ತವರ ಸಂಖ್ಯೆ 6 ಕ್ಕೆ ಏರಿದ್ದು, 39 ಮಂದಿ ಗಾಯಗೊಂಡಿದ್ದಾರೆ.
ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೆ ನಿಲ್ದಾಣದ ಹೊರಭಾಗದ ಪಾದಚಾರಿ ಸೇತುವೆ ನಿನ್ನೆ ರಾತ್ರಿ ಕುಸಿದು ಬಿದ್ದಿತ್ತು. ಸಿಗ್ನಿಲ್ ಸ್ವಲ್ಪವಷ್ಟೆ ಬೇಗನೆ ಬಿಟ್ಟಿದ್ದರೂ ಭಾರಿ ಅನಾಹುತ ಸಂಭವಿಸುತ್ತು ಎಂದು ಹೇಳಲಾಗುತ್ತಿದೆ. ಆದರೂ ಈಗ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ಣವೀಸ್ ಅವರು, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ. ಈ ಮುಂಚೆಯೇ ಬ್ರಿಡ್ಜ್‌ನ ರಚನಾತ್ಮಕ ಪರೀಕ್ಷೆ ಮಾಡಲಾಗಿತ್ತು, ಆದರೆ ಅದರಲ್ಲಿ ಬ್ರಿಡ್ಜ್ ಗಟ್ಟಿಯಾಗಿದೆ ಎಂದು ಫಲಿತಾಂಶ ಬಂದಿತ್ತು ಎಂದು ಅವರು ಹೇಳಿದ್ದಾರೆ.

ನರೇಂದ್ರ ಮೋದಿ ಅವರು ಸಹ ಸೇತುವೆ ಉರುಳಿದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಮಡಿದವರ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.











Click it and Unblock the Notifications