ಎಂಜಿನ್ ದೋಷ: ಮುಂಬೈಗೆ ತುರ್ತಾಗಿ ವಾಪಸ್ಸಾದ ಮಸ್ಕಟ್ ವಿಮಾನ
ಮುಂಬೈ, ಜುಲೈ 03: ಇಂಜಿನ್ ವೊಂದರಲ್ಲಿ ದೋಷ ಉಂತಾದ ಕಾರಣ ಮುಂಬೈಯಿಂದ ಮಸ್ಕಟ್ ಗೆ ಹೊರಟಿದ್ದ ವಿಮಾವೊಂದು ತುರ್ತಾಗಿ ಲ್ಯಾಂಡ್ ಆದ ಘಟನೆ ಬುಧವಾರ ಸಂಜೆ ಮುಂಬೈಯಲ್ಲಿ ನಡೆದಿದೆ.
ಅಪರಾಹ್ನ ಸುಮಾರು 4.42 ರ ಸುಮಾರಿಗೆ ಎಂಜಿನ್ ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತುರ್ತಾಗಿ ಲ್ಯಾಂಡ್ ಆಗುವಂತೆ ಘೋಷಿಸಲಾಗಿತ್ತು. ಆದ್ದರಿಂದ ಸುಮಾರು 5 ಗಂಟೆಯ ಹೊತ್ತಿಗೆ ಒಮಾನ್ ಏರ್ ವಿಮಾನ ಟೇಕಾಫ್ ಆದ ಕೇವಲ ಹದಿನಾರು ನಿಮಿಷದ ನಂತರ ಮತ್ತೆ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ಈ ವಿಮಾನದಲ್ಲಿ 205 ಪ್ರಯಾಣಿಕರಿದ್ದರು. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ ಎನ್ನಲಾಗಿದೆ. ಪೈಲೆಟ್ ಸಮಯ ಪ್ರಜ್ಞೆಯಿಂದಾಗಿ ಕೂಡಲೆ ವಿಮಾನವನ್ನು ಲ್ಯಾಂಡ್ ಮಾಡಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಈಗಾಗಲೇ ಮುಂಬೈಯಲ್ಲಿ ಧಾರಾಕಾರವಾಗ ಮಳೆ ಸುರಿಯುತ್ತಿರುವುದರಿಂದ ಹಲವು ವಿಮಾನಗಳು ವಿಳಂಬವಾಗಿವೆ.











Click it and Unblock the Notifications